IPL 2025: RCB ನಾಯಕ ಯಾರು? ಸ್ಪಷ್ಟನೆ ನೀಡಿದ ಕೋಚ್ ಆ್ಯಂಡಿ ಫ್ಲವರ್

|

Updated on: Jan 11, 2025 | 1:23 PM

IPL 2025 RCB Captain: ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ವಿರಾಟ್ ಕೊಹ್ಲಿ 143 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ 66 ಪಂದ್ಯಗಳಲ್ಲಿ ಆರ್​ಸಿಬಿ ಜಯ ಸಾಧಿಸಿದೆ. ಹಾಗೆಯೇ 2016 ರಲ್ಲಿ ಕಿಂಗ್ ಕೊಹ್ಲಿ ನಾಯಕತ್ವದಲ್ಲೇ ಆರ್​ಸಿಬಿ ಫೈನಲ್​ಗೆ ಪ್ರವೇಶಿಸಿತ್ತು. ಇದೀಗ 18ನೇ ಸೀಸನ್​ನಲ್ಲಿ ಮತ್ತೆ ವಿರಾಟ್ ಕೊಹ್ಲಿಯನ್ನು ನಾಯಕನನ್ನಾಗಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

1 / 6
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಮುನ್ನಡೆಸುವವರು ಯಾರು? ಈ ಪ್ರಶ್ನೆಗೆ ಈವರೆಗಿನ ಉತ್ತರ ವಿರಾಟ್ ಕೊಹ್ಲಿ ಆಗಿತ್ತು. ಆದರೀಗ ಕೊಹ್ಲಿಯೇ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಖಚಿತತೆ ಇಲ್ಲ. ಏಕೆಂದರೆ ಆರ್​ಸಿಬಿ ತಂಡದ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಪ್ರಸ್ತುತ ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

2 / 6
ಸಂದರ್ಶನವೊಂದರಲ್ಲಿ ಮಾತನಾಡಿದ ಆ್ಯಂಡಿ ಫ್ಲವರ್, ಆರ್​ಸಿಬಿ ತಂಡದ ಮುಂದಿನ ನಾಯಕ ಯಾರೆಂಬುದರ ಬಗ್ಗೆ ಇನ್ನೂ ಸಹ ಚರ್ಚೆ ನಡೆದಿಲ್ಲ. ಹೀಗಾಗಿ ಈಗಲೇ ನಾಯಕ ಯಾರೆಂದು ಹೇಳಲಾಗುವುದಿಲ್ಲ. ಮುಂದಿನ ಮೂರು ವರ್ಷಗಳನ್ನು ಮುಂದಿಟ್ಟುಕೊಂಡು ಹೊಸ ನಾಯಕನನ್ನು ಆಯ್ಕೆ ಮಾಡಲಿದ್ದೇವೆ ತಿಳಿಸಿದ್ದಾರೆ.

3 / 6
ಐಪಿಎಲ್ 2025 ರೊಂದಿಗೆ ಆರ್​ಸಿಬಿ ಹೊಸ ಯುಗವನ್ನು ಪ್ರಾರಂಭಿಸಲಿದೆ. ಮುಂದಿನ ಮೂರು ವರ್ಷಗಳ ಪ್ರಯಾಣವು ಇದರೊಂದಿಗೆ ಆರಂಭವಾಗಲಿದ್ದು, ತಂಡದ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಹೀಗಾಗಿ ದೀರ್ಘಕಾಲದವರೆಗೆ ತಂಡವನ್ನು ಮುನ್ನಡೆಸಬಲ್ಲ ಆಟಗಾರನಿಗೆ ತಂಡದ ನಾಯಕತ್ವವನ್ನು ನೀಡಲಿದ್ದೇವೆ ಎಂದು ಆ್ಯಂಡಿ ಫ್ಲವರ್ ತಿಳಿಸಿದ್ದಾರೆ.

4 / 6
ಇದಾಗ್ಯೂ ವಿರಾಟ್ ಕೊಹ್ಲಿಗೆ ನಾಯಕತ್ವ ನೀಡಲಿದ್ದೇವೆ ಅಥವಾ ಇಲ್ಲ ಎಂಬುದನ್ನು ಆ್ಯಂಡಿ ಫ್ಲವರ್ ಸ್ಪಷ್ಟಪಡಿಸಿಲ್ಲ. ನೀವು ಎಷ್ಟೇ ಬಾರಿ ಕೇಳಿದರೂ ಸದ್ಯಕ್ಕಂತು ಯಾರು ನಾಯಕರಾಗುತ್ತಾರೆ ಎಂದು ಹೇಳಲಾಗುವುದಿಲ್ಲ. ಈ ಬಗ್ಗೆ ಯಾವುದೇ ಚರ್ಚೆ ಕೂಡ ನಡೆದಿಲ್ಲ ಎಂದು ಆರ್​ಸಿಬಿ ಕೋಚ್ ತಿಳಿಸಿದ್ದಾರೆ.

5 / 6
ಇತ್ತ ಆರ್​ಸಿಬಿ ತಂಡದಲ್ಲಿರುವ 22 ಆಟಗಾರರಲ್ಲಿ ನಾಯಕತ್ವದ ಅನುಭವ ಹೊಂದಿರುವವರು ವಿರಾಟ್ ಕೊಹ್ಲಿ ಮಾತ್ರ. ಹೀಗಾಗಿಯೇ ಆರ್​ಸಿಬಿ ಫ್ರಾಂಚೈಸಿ ಕಿಂಗ್ ಕೊಹ್ಲಿಗೆ ಕ್ಯಾಪ್ಟನ್ ಪಟ್ಟ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಕೊಹ್ಲಿ ಆರ್​ಸಿಬಿ ತಂಡವನ್ನು 143 ಪಂದ್ಯಗಳಲ್ಲಿ ಮುನ್ನಡೆಸಿದ ಅನುಭವ ಹೊಂದಿದ್ದಾರೆ.

6 / 6
ಕಿಂಗ್ ಕೊಹ್ಲಿ ಮುಂದಾಳತ್ವದಲ್ಲಿ ಆರ್​ಸಿಬಿ ತಂಡ ಕಣಕ್ಕಿಳಿದಾಗ 66 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಹಾಗೆಯೇ 2016 ರಲ್ಲಿ ವಿರಾಟ್ ಕೊಹ್ಲಿಯ ಸಾರಥ್ಯದಲ್ಲಿ ಆರ್​ಸಿಬಿ ಫೈನಲ್​ಗೆ ಪ್ರವೇಶಿಸಿತ್ತು. ಹೀಗಾಗಿ ಅನುಭವಿ ನಾಯಕ ವಿರಾಟ್ ಕೊಹ್ಲಿಗೆ ಮತ್ತೊಮ್ಮೆ ಕ್ಯಾಪ್ಟನ್ ಪಟ್ಟ ನೀಡಿದರೂ ಅಚ್ಚರಿಪಡಬೇಕಿಲ್ಲ.