IPL 2025: ಬಿಬಿಎಲ್​ನಲ್ಲಿ ಜೇಕ್​ ಅಟ್ಟರ್ ಫ್ಲಾಪ್: ಡೆಲ್ಲಿ ಕ್ಯಾಪಿಟಲ್ಸ್​ಗೆ ಹೊಸ ಚಿಂತೆ ಶುರು

|

Updated on: Jan 15, 2025 | 9:58 AM

Jake Fraser-McGurk: ಐಪಿಎಲ್ ಸೀಸನ್-17 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಜೇಕ್ ಫ್ರೇಸರ್ ಮೆಕ್​ಗುರ್ಕ್ 9 ಇನಿಂಗ್ಸ್​ಗಳಿಂದ ಒಟ್ಟು 330 ರನ್ ಬಾರಿಸಿದ್ದರು. ಈ ವೇಳೆ ಅವರ ಬ್ಯಾಟ್​ನಿಂದ 32 ಫೋರ್ ಹಾಗೂ 28 ಸಿಕ್ಸ್​ಗಳು ಮೂಡಿಬಂದಿದ್ದವು. ಆದರೀಗ ಅದೇ ಜೇಕ್ ಫ್ರೇಸರ್ ಮೆಕ್​ಗುರ್ಕ್ 30 ರನ್​ಗಳಿಸಲು ಪರದಾಡುತ್ತಿದ್ದಾರೆ.

1 / 5
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್​ನ ಮೆಗಾ ಹರಾಜಿನ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕೆಲ ಸ್ಟಾರ್ ಆಟಗಾರರನ್ನು ಖರೀದಿಸಿದೆ. ಈ ಆಟಗಾರರಲ್ಲಿ ಯುವ ದಾಂಡಿಗ ಜೇಕ್ ಫ್ರೇಸರ್ ಮೆಕ್​ಗುರ್ಕ್​ ಕೂಡ ಒಬ್ಬರು. ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪರ ಅಬ್ಬರಿಸಿದ್ದ ಯುವ ಆಟಗಾರನನ್ನು ಈ ಬಾರಿ ಬರೋಬ್ಬರಿ 9 ಕೋಟಿ ರೂ. ನೀಡಿ ಮತ್ತೆ ಖರೀದಿಸಿದೆ.

2 / 5
ಆದರೆ ಈ ಖರೀದಿಯ ಬಳಿಕ ಜೇಕ್ ಫ್ರೇಸರ್ ಮೆಕ್​ಗುರ್ಕ್ ಬ್ಯಾಟ್ ಸದ್ದು ಮಾಡಿಲ್ಲ ಎಂಬುದೇ ವಿಶೇಷ. ಅಂದರೆ ಒಂದೇ ಒಂದು ಉತ್ತಮ ಇನಿಂಗ್ಸ್ ಆಡಿಲ್ಲ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ನಲ್ಲಿ ಜೇಕ್ ಫ್ರೇಸರ್ ಅಟ್ಟರ್ ಫ್ಲಾಪ್ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

3 / 5
ಬಿಬಿಎಲ್​ನಲ್ಲಿ ಮೆಲ್ಬೋರ್ನ್​ ರೆನೆಗೇಡ್ಸ್ ಪರ ಕಣಕ್ಕಿಳಿಯುತ್ತಿರುವ ಜೇಕ್ ಫ್ರೇಸರ್ ಮೆಕ್​ಗುರ್ಕ್ ಈವರೆಗೆ 9 ಇನಿಂಗ್ಸ್​ಗಳಲ್ಲಿ ಆರಂಭಿಕನಾಗಿ ಬ್ಯಾಟ್ ಬೀಸಿದ್ದಾರೆ. ಆದರೆ ಈ ಒಂಭತ್ತು ಇನಿಂಗ್ಸ್​ಗಳಲ್ಲಿ ಮೂಡಿಬಂದಿರುವ ಒಟ್ಟು ರನ್​​ಗಳು 93 ಮಾತ್ರ. ಅಂದರೆ ಕೇವಲ 10.33 ಸರಾಸರಿಯಲ್ಲಿ ಮಾತ್ರ ರನ್ ಕಲೆಹಾಕಿದ್ದಾರೆ.

4 / 5
ಇನ್ನು ಈ 9 ಇನಿಂಗ್ಸ್​ಗಳಲ್ಲಿ ಜೇಕ್ ಬ್ಯಾಟ್​​ನಿಂದ ಮೂಡಿಬಂದ ಫೋರ್​​ಗಳ ಸಂಖ್ಯೆ ಕೇವಲ 7. ಹಾಗೆಯೇ 4 ಸಿಕ್ಸ್​​ಗಳನ್ನಷ್ಟೇ ಬಾರಿಸಲು ಯಶಸ್ವಿಯಾಗಿದ್ದಾರೆ. ಇನ್ನು ಈ ಬಾರಿಯ ಬಿಬಿಎಲ್​ನಲ್ಲಿ ಜೇಕ್ ಫ್ರೇಸರ್ ಮೆಕ್​ಗುರ್ಕ್ ಬಾರಿಸಿದ​ ಗರಿಷ್ಠ ಸ್ಕೋರ್ ಕೇವಲ 26 ರನ್​ಗಳು.

5 / 5
ಇತ್ತ ಈ ಬಾರಿಯ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಜೇಕ್ ಫ್ರೇಸರ್ ಮೆಕ್​ಗುರ್ಕ್ ಅವರನ್ನು ಬರೋಬ್ಬರಿ 9 ಕೋಟಿ ರೂ. ನೀಡಿ ಖರೀದಿಸಿದೆ. ಈ ಮೂಲಕ ಆರಂಭಿಕನಾಗಿ ಕಣಕ್ಕಿಳಿಸಲು ಪ್ಲ್ಯಾನ್ ರೂಪಿಸಿತ್ತು. ಆದರೀಗ ತವರಿನಲ್ಲಿ ನಡೆಯುತ್ತಿರುವ ಟಿ20 ಟೂರ್ನಿಯಲ್ಲೇ ಅಟ್ಟರ್​ ಫ್ಲಾಪ್ ಆಗುವ ಮೂಲಕ ಜೇಕ್ ಫ್ರೇಸರ್ ಮೆಕ್​ಗುರ್ಕ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಚಿಂತೆಗೆ ಕಾರಣವಾಗಿದ್ದಾರೆ.