ICC Player of the Month: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರತಿ ತಿಂಗಳು ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಯನ್ನು ನೀಡುತ್ತದೆ. ಈ ಬಾರಿ ಈ ಪ್ರಶಸ್ತಿ ಪಟ್ಟಿಯಲ್ಲಿ ಮೂವರು ವೇಗಿಗಳು ಕಾಣಿಸಿಕೊಂಡಿದ್ದರು. ಇದೀಗ ಎಲ್ಲರನ್ನು ಹಿಂದಿಕ್ಕಿ ಪ್ಲೇಯರ್ ಆಫ್ ದಿ ಮಂತ್ ಆಗಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬಮ್ರಾ ಹೊರಹೊಮ್ಮಿದ್ದಾರೆ.
ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಡಿಸೆಂಬರ್ ತಿಂಗಳ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಐಸಿಸಿ ಪ್ರತಿ ತಿಂಗಳು ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಗಾಗಿ ಆಟಗಾರರನ್ನು ಆಯ್ಕೆ ಮಾಡುತ್ತಿದ್ದು, ಅದರಂತೆ ಕಳೆದ ತಿಂಗಳ ಅತ್ಯುತ್ತಮ ಆಟಗಾರನ ಪ್ರಶಸ್ತಿ ಜಸ್ಪ್ರೀತ್ ಬುಮ್ರಾಗೆ ಒಲಿದಿದೆ. ಈ ಬಾರಿಯ ಪ್ರಶಸ್ತಿ ಸುತ್ತಲಿನಲ್ಲಿ ಮೂವರು ಆಟಗಾರರ ಹೆಸರು ನಾಮನಿರ್ದೇಶನಗೊಂಡಿತ್ತು. ಅವರೆಂದರೆ....
1 / 5
ಪ್ಯಾಟ್ ಕಮಿನ್ಸ್: ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಡಿಸೆಂಬರ್ ತಿಂಗಳಲ್ಲಿ ಟೀಮ್ ಇಂಡಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆಡಿದ್ದರು. ಈ ವೇಳೆ ಬ್ಯಾಟಿಂಗ್ ಮೂಲಕ 144 ರನ್ ಬಾರಿಸಿದರೆ, ಬೌಲಿಂಗ್ನಲ್ಲಿ 17 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಹೀಗಾಗಿ ಕಳೆದ ತಿಂಗಳ ಆಟಗಾರರ ಪಟ್ಟಿಯಲ್ಲಿ ಕಮಿನ್ಸ್ ನಾಮನಿರ್ದೇಶಿತರಾಗಿದ್ದರು.
2 / 5
ಡೇನ್ ಪ್ಯಾಟರ್ಸನ್: ಸೌತ್ ಆಫ್ರಿಕಾ ವೇಗಿ ಡೇನ್ ಪ್ಯಾಟರ್ಸನ್ ಡಿಸೆಂಬರ್ನಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ್ ವಿರುದ್ಧ ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 13 ವಿಕೆಟ್ ಕಬಳಿಸುವ ಮೂಲಕ ಸೌತ್ ಆಫ್ರಿಕಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಹೀಗಾಗಿ ಡೇನ್ ಪ್ಯಾಟರ್ಸನ್ ಕೂಡ ಐಸಿಸಿ ಡಿಸೆಂಬರ್ ತಿಂಗಳ ಆಟಗಾರರನಾಗಿ ನಾಮನಿರ್ದೇಶಿತರಾಗಿದ್ದರು.
3 / 5
ಜಸ್ಪ್ರೀತ್ ಬುಮ್ರಾ: ಡಿಸೆಂಬರ್ ತಿಂಗಳಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆಡಿದ್ದ ಜಸ್ಪ್ರೀತ್ ಬುಮ್ರಾ ಅದ್ಭುತ ಪ್ರದರ್ಶನ ನೀಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯಲ್ಲಿ ಅಡಿಲೇಡ್ನಲ್ಲಿ 61ಕ್ಕೆ 4, ಬ್ರಿಸ್ಬೇನ್‌ನಲ್ಲಿ 76ಕ್ಕೆ 6, ಮತ್ತು ಮೆಲ್ಬೋರ್ನ್‌ನಲ್ಲಿ 9 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ಇದೀಗ ಡಿಸೆಂಬರ್ ತಿಂಗಳ ಅಟಗಾರರ ಪಟ್ಟಿಗೆ ನಾಮನಿರ್ದೇನಗೊಂಡಿದ್ದರು.
4 / 5
ಇದೀಗ ಪ್ಯಾಟ್ ಕಮಿನ್ಸ್ ಹಾಗೂ ಡೇನ್ ಪ್ಯಾಟರ್ಸನ್ ಅವರನ್ನು ಹಿಂದಿಕ್ಕಿ ಜಸ್ ಪ್ರೀತ್ ಬುಮ್ರಾ ಡಿಸೆಂಬರ್ ತಿಂಗಳ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇದರ ಜೊತೆ 2024 ರ ಐಸಿಸಿ ಪ್ಲೇಯರ್ ಆಫ್ ದಿ ಇಯರ್ ಪಟ್ಟಿಯಲ್ಲೂ ಬುಮ್ರಾ ಹೆಸರಿದ್ದು, ಈ ಪ್ರಶಸ್ತಿ ಕೂಡ ಟೀಮ್ ಇಂಡಿಯಾ ವೇಗಿಗೆ ಒಲಿಯುವ ನಿರೀಕ್ಷೆ ಇದೆ.