- Kannada News Photo gallery Cricket photos IPL 2025: A country wise breakdown of the 409 overseas players is as below
IPL 2025: 409 ವಿದೇಶಿ ಆಟಗಾರರು; ಯಾವ ದೇಶದಿಂದ ಎಷ್ಟು ಪ್ಲೇಯರ್ಸ್?
IPL 2025 Mega Auction: ನವೆಂಬರ್ 24 ಮತ್ತು 25 ರಂದು ನಡೆಯಲಿರುವ ಐಪಿಎಲ್ ಮೆಗಾ ಹರಾಜಿಗಾಗಿ ಬರೋಬ್ಬರಿ 1574 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 1,165 ಭಾರತೀಯ ಆಟಗಾರರಿದ್ದರೆ, 409 ವಿದೇಶಿ ಆಟಗಾರರಿದ್ದಾರೆ. ಇನ್ನು 1574 ಆಟಗಾರರ ಪಟ್ಟಿಯಲ್ಲಿ ರಾಷ್ಟ್ರೀಯ ತಂಡದ ಪರ ಆಡಿದ 320 ಆಟಗಾರರು ಕಾಣಿಸಿಕೊಂಡಿದ್ದಾರೆ.
Updated on: Nov 06, 2024 | 9:10 AM

IPL 2025: ಐಪಿಎಲ್ ಮೆಗಾ ಹರಾಜಿಗಾಗಿ ಒಟ್ಟು 1,574 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 409 ವಿದೇಶಿ ಆಟಗಾರರಿದ್ದಾರೆ. ಈ ವಿದೇಶಿ ಆಟಗಾರರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದು ಸೌತ್ ಆಫ್ರಿಕಾ ಕ್ರಿಕೆಟಿಗರು. ಇನ್ನು 2ನೇ ಸ್ಥಾನದಲ್ಲಿ ಆಸ್ಟ್ರೇಲಿಯನ್ನರಿದ್ದಾರೆ. ಹಾಗಿದ್ರೆ ಯಾವ ದೇಶದಿಂದ ಎಷ್ಟು ಆಟಗಾರರು ಐಪಿಎಲ್ ಮೆಗಾ ಹರಾಜಿಗಾಗಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ನೋಡೋಣ...

ಸೌತ್ ಆಫ್ರಿಕಾ: ಈ ಬಾರಿಯ ಮೆಗಾ ಹರಾಜಿಗೆ ಅತ್ಯಧಿಕ ಹೆಸರು ನೋಂದಣಿ ಮಾಡಿಕೊಂಡಿದ್ದು ಸೌತ್ ಆಫ್ರಿಕನ್ನರು. ಒಟ್ಟು 91 ಆಟಗಾರರು ಐಪಿಎಲ್ ಮೆಗಾ ಆಕ್ಷನ್ಗಾಗಿ ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದಾರೆ.

ಆಸ್ಟ್ರೇಲಿಯಾ: ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಆಸ್ಟ್ರೇಲಿಯಾ ಆಟಗಾರರಿದ್ದಾರೆ. ಈ ಬಾರಿಯ ಮೆಗಾ ಹರಾಜಿಗಾಗಿ ಆಸ್ಟ್ರೇಲಿಯಾದ 76 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ.

ಇಂಗ್ಲೆಂಡ್: ಮೂರನೇ ಸ್ಥಾನದಲ್ಲಿ ಇಂಗ್ಲೆಂಡ್ ಇದ್ದು, ಐಪಿಎಲ್ ಮೆಗಾ ಹರಾಜಿಗಾಗಿ ಇಂಗ್ಲೆಂಡ್ನ 52 ಆಟಗಾರರು ಹೆಸರು ನೀಡಿದ್ದಾರೆ.

ನ್ಯೂಝಿಲೆಂಡ್: ಐಪಿಎಲ್ ಮೆಗಾ ಹರಾಜಿನಲ್ಲಿ ಅದೃಷ್ಟ ಪರೀಕ್ಷಿಸಲು ನ್ಯೂಝಿಲೆಂಡ್ನ 39 ಆಟಗಾರರು ನಿರ್ಧರಿಸಿದ್ದಾರೆ. ಅದರಂತೆ ಕಿವೀಸ್ ಪಡೆಯ ಸ್ಟಾರ್ ಆಟಗಾರರು ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವೆಸ್ಟ್ ಇಂಡೀಸ್: ಐಪಿಎಲ್ನಲ್ಲಿ ತನ್ನದೆಯಾದ ಛಾಪು ಮೂಡಿಸಿರುವ ಕೆರಿಬಿಯನ್ ಕ್ರಿಕೆಟಿಗರು ಹೆಸರು ರಿಜಿಸ್ಟರ್ನಲ್ಲಿ ಹಿಂದೆ ಉಳಿದಿದ್ದಾರೆ. ಏಕೆಂದರೆ ಈ ಬಾರಿ ವೆಸ್ಟ್ ಇಂಡೀಸ್ನ 33 ಆಟಗಾರರು ಮಾತ್ರ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಅಫ್ಘಾನಿಸ್ತಾನ್: ಐಪಿಎಲ್ 2025 ಮೆಗಾ ಹರಾಜಿಗಾಗಿ ಅಫ್ಘಾನಿಸ್ತಾನದ 29 ಆಟಗಾರರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ ಎಷ್ಟು ಮಂದಿಗೆ ಚಾನ್ಸ್ ಸಿಗಲಿದೆ ಕಾದು ನೋಡಬೇಕಿದೆ.

ಶ್ರೀಲಂಕಾ: ಈ ಬಾರಿ ಶ್ರೀಲಂಕಾ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಅದರಂತೆ ಲಂಕಾದ 29 ಆಟಗಾರರ ಹೆಸರು ಐಪಿಎಲ್ ಮೆಗಾ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ಬಾಂಗ್ಲಾದೇಶ್: ಐಪಿಎಲ್ನಲ್ಲಿ ಬಾಂಗ್ಲಾದೇಶ್ ತಂಡದ ಆಟಗಾರರು ಕಾಣಿಸಿಕೊಳ್ಳುವುದು ವಿರಳ. ಇದಾಗ್ಯೂ ಈ ಬಾರಿ 13 ಆಟಗಾರರು ತಮ್ಮ ಹೆಸರುಗಳನ್ನು ರಿಜಿಸ್ಟರ್ ಮಾಡಿಕೊಂಡಿದ್ದಾರೆ.

ನೆದರ್ಲೆಂಡ್ಸ್: ಈ ಬಾರಿಯ ಮೆಗಾ ಹರಾಜಿಗಾಗಿ ನೆದರ್ಲೆಂಡ್ಸ್ನ 12 ಆಟಗಾರರು ಹೆಸರು ನೋಂದಣಿ ಮಾಡಿಕೊಂಡಿರುವುದು ವಿಶೇಷ. ಇವರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಕಾದು ನೋಡಬೇಕಿದೆ.

ಇನ್ನು ಯುಎಸ್ಎ ತಂಡದ 10 ಆಟಗಾರರು, ಐರ್ಲೆಂಡ್ನ 9 ಆಟಗಾರರು, ಝಿಂಬಾಬ್ವೆಯ 8 ಆಟಗಾರರು, ಕೆನಡಾದ 4 ಆಟಗಾರರು, ಸ್ಕಾಟ್ಲೆಂಡ್ನ ಇಬ್ಬರು ಆಟಗಾರು, ಇಟಲಿ ಮತ್ತು ಯುಎಇ ಯಿಂದ ತಲಾ ಒಬ್ಬರು ಮೆಗಾ ಹರಾಜಿಗಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ.




