IPL 2025: KKR ಕ್ಯಾಪ್ಟನ್ ರೇಸ್ನಲ್ಲಿ ಹಿರಿಯ ಆಟಗಾರ..!
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್-18 ರಲ್ಲಿ 5 ತಂಡಗಳ ನಾಯಕರುಗಳು ಬದಲಾಗಲಿದ್ದಾರೆ. ಅದರಲ್ಲಿ ಆರ್ಸಿಬಿ ಕೂಡ ಒಂದು. ಕಳೆದ ಸೀಸನ್ನಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದ ಫಾಫ್ ಡುಪ್ಲೆಸಿಸ್ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದಾರೆ. ಅತ್ತ ಕೆಕೆಆರ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ.
1 / 6
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17ರ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಈ ಬಾರಿ ಹೊಸ ನಾಯಕನೊಂದಿಗೆ ಕಣಕ್ಕಿಳಿಯಲಿದೆ. ಕಳೆದ ಬಾರಿ ತಂಡವನ್ನು ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್ ಈ ಬಾರಿ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.
2 / 6
ಹೀಗಾಗಿ ಐಪಿಎಲ್ 2025ರ ಆರಂಭಕ್ಕೂ ಮುನ್ನ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಮುಂದಿದೆ. ಇದಕ್ಕಾಗಿ ಕೆಕೆಆರ್ ಕೆಲ ಆಟಗಾರರ ಪಟ್ಟಿಯೊಂದು ಸಿದ್ಧಪಡಿಸಿಕೊಂಡಿದೆ ಎಂದು ವರದಿಯಾಗಿದೆ.
3 / 6
ಈ ಪಟ್ಟಿಯಲ್ಲಿ ಹಿರಿಯ ಆಟಗಾರ ಅಜಿಂಕ್ಯ ರಹಾನೆ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಈ ಬಾರಿಯ ಐಪಿಎಲ್ ಮೆಗಾ ಹರಾಜಿನ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ರಹಾನೆ ಅವರನ್ನು 1.50 ಕೋಟಿ ರೂ.ಗೆ ಖರೀದಿಸಿದೆ.
4 / 6
ಇದೀಗ ರಹಾನೆ ಅವರ ಅನುಭವವನ್ನು ಪರಿಗಣಿಸಿ ಕೆಕೆಆರ್ ತಂಡದ ನಾಯಕತ್ವವನ್ನು ನೀಡುವ ಬಗ್ಗೆ ಚರ್ಚಿಸಲಾಗಿದೆ ಎಂದು ವರದಿಯಾಗಿದೆ. ರಹಾನೆ ಈ ಹಿಂದೆ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಾಯಕರಾಗಿ ಕಾಣಿಸಿಕೊಂಡಿದ್ದರು.
5 / 6
ಅಲ್ಲದೆ ಟೀಮ್ ಇಂಡಿಯಾವನ್ನು ಹಾಗೂ ದೇಶೀಯ ಅಂಗಳದಲ್ಲಿ ಮುಂಬೈ ತಂಡವನ್ನು ಮುನ್ನಡೆಸಿದ ಅನುಭವ ಕೂಡ ಹೊಂದಿದ್ದಾರೆ. ಹೀಗಾಗಿಯೇ ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಅಜಿಂಕ್ಯ ರಹಾನೆಗೆ ಕ್ಯಾಪ್ಟನ್ ಪಟ್ಟ ನೀಡುವ ಬಗ್ಗೆ ಚರ್ಚಿಸಿದ್ದು, ಅಂತಿಮ ನಿರ್ಧಾರ ಶೀಘ್ರದಲ್ಲೇ ಹೊರಬೀಳಲಿದೆ.
6 / 6
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ: ರಿಂಕು ಸಿಂಗ್, ವರುಣ್ ಚಕ್ರವರ್ತಿ, ಸುನಿಲ್ ನರೈನ್, ಆ್ಯಂಡ್ರೆ ರಸೆಲ್, ಹರ್ಷಿತ್ ರಾಣಾ, ರಮಣ್ದೀಪ್ ಸಿಂಗ್, ವೆಂಕಟೇಶ್ ಅಯ್ಯರ್, ಕ್ವಿಂಟನ್ ಡಿ ಕಾಕ್, ರಹಮಾನುಲ್ಲಾ ಗುರ್ಬಾಝ್, ಅನ್ರಿಕ್ ನೋಕಿಯ, ಆಂಗ್‌ಕ್ರಿಶ್ ರಘುವಂಶಿ, ವೈಭವ್ ಅರೋರಾ, ಮಯಾಂಕ್ ಮಾರ್ಕಾಂಡೆ, ರೋವ್‌ಮನ್ ಪೊವೆಲ್, ಲವ್ನೀತ್ ಸಿಸೋಡಿಯಾ, ಅಜಿಂಕ್ಯ ರಹಾನೆ, ಅನ್ಕುಲ್ ರಾಯ್, ಮೊಯಿನ್ ಅಲಿ, ಉಮ್ರಾನ್ ಮಲಿಕ್, ಸ್ಪೆನ್ಸರ್ ಜಾನ್ಸನ್.
Published On - 10:19 am, Mon, 2 December 24