IPL 2025: ಈ ತಂಡಗಳು ಇಷ್ಟು ಆಟಗಾರರನ್ನು ಖರೀದಿಸುವುದು ಕಡ್ಡಾಯ

|

Updated on: Nov 10, 2024 | 11:53 AM

IPL 2025 Mega Auction: ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ ಕನಿಷ್ಠ 18 ಆಟಗಾರರು ಇರಲೇಬೇಕು. ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಅಂದರೆ ಇಲ್ಲಿ 18 ಕ್ಕಿಂತ ಕಡಿಮೆ ಆಟಗಾರರನ್ನು ಹೊಂದುವಂತಿಲ್ಲ. ಹೀಗಾಗಿ ಐಪಿಎಲ್ ಮೆಗಾ ಹರಾಜಿನ ಮೂಲಕ ಪ್ರತಿ ಫ್ರಾಂಚೈಸಿಗಳು 18 ಆಟಗಾರರನ್ನು ಒಳಗೊಂಡಿರುವ ತಂಡವನ್ನು ರೂಪಿಸಿಬೇಕಿದೆ.

1 / 12
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಇದೇ ನವೆಂಬರ್ 24 ಮತ್ತು 25 ರಂದು ಮೆಗಾ ಆಕ್ಷನ್ ನಡೆಯಲಿದೆ. ಈ ಹರಾಜಿನ ಮೂಲಕ ಪ್ರತಿ ತಂಡಗಳು 18 ಆಟಗಾರರ ತಂಡವನ್ನು ರೂಪಿಸಿಕೊಳ್ಳುವುದು ಕಡ್ಡಾಯ.

2 / 12
ಅಂದರೆ ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ ಕನಿಷ್ಠ 18 ಆಟಗಾರರು ಇರಲೇಬೇಕು. ಹಾಗೆಯೇ ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಅದರಂತೆ ಇದೀಗ ರಿಟೈನ್ ಆಟಗಾರರನ್ನು ಹೊರತುಪಡಿಸಿ ಪ್ರತಿ ತಂಡಗಳು ಎಷ್ಟು ಆಟಗಾರರನ್ನು ಖರೀದಿಸುವುದು ಕಡ್ಡಾಯ ಎಂದು ನೋಡುವುದಾದರೆ...

3 / 12
ಮುಂಬೈ ಇಂಡಿಯನ್ಸ್: ಐಪಿಎಲ್ ರಿಟೈನ್ ಆಯ್ಕೆ ಮೂಲಕ ಮುಂಬೈ ಇಂಡಿಯನ್ಸ್ ಜಸ್​ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ ಹಾಗೂ ತಿಲಕ್ ವರ್ಮಾ ಅವರನ್ನು ಉಳಿಸಿಕೊಂಡಿದೆ. ಹೀಗಾಗಿ ಮೆಗಾ ಹರಾಜಿನ ಮೂಲಕ ಮುಂಬೈ ಇಂಡಿಯನ್ಸ್ ಒಟ್ಟು 13 ಆಟಗಾರರನ್ನು ಖರೀದಿಸಬೇಕಿರುವುದು ಕಡ್ಡಾಯ. ಇದರಲ್ಲಿ 8 ವಿದೇಶಿ ಆಟಗಾರರನ್ನು ಆಯ್ಕೆ ಮಾಡಬಹುದು.

4 / 12
ಚೆನ್ನೈ ಸೂಪರ್ ಕಿಂಗ್ಸ್: ಸಿಎಸ್​ಕೆ ಫ್ರಾಂಚೈಸಿಯು ರುತುರಾಜ್ ಗಾಯಕ್ವಾಡ್, ಮಥೀಶ ಪತಿರಣ, ಶಿವಂ ದುಬೆ, ರವೀಂದ್ರ ಜಡೇಜಾ ಹಾಗೂ ಎಂಎಸ್ ಧೋನಿಯನ್ನು ತಂಡದಲ್ಲೇ ಉಳಿಸಿಕೊಂಡಿದೆ. ಒಟ್ಟು 5 ಆಟಗಾರರನ್ನು ಉಳಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ 13 ಪ್ಲೇಯರ್ಸ್ ಅನ್ನು ಖರೀದಿಸುವುದು ಕಡ್ಡಾಯ. ಇದರಲ್ಲಿ 7 ವಿದೇಶಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು.

5 / 12
ರಾಜಸ್ಥಾನ್ ರಾಯಲ್ಸ್: ಆರ್​ಆರ್ ಫ್ರಾಂಚೈಸಿ ಉಳಿಸಿಕೊಂಡ ಆಟಗಾರರೆಂದರೆ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಧ್ರುವ ಜುರೆಲ್, ಶಿಮ್ರೋನ್ ಹೆಟ್ಮೆಯರ್ ಮತ್ತು ಸಂದೀಪ್ ಶರ್ಮಾ. ಇನ್ನು 12 ಆಟಗಾರರನ್ನು ಖರೀದಿಸುವುದು ಕಡ್ಡಾಯ. ಇದರಲ್ಲಿ 7 ವಿದೇಶಿ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಬಹುದು.

6 / 12
ಡೆಲ್ಲಿ ಕ್ಯಾಪಿಟಲ್ಸ್: ಮೆಗಾ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಟ್ರಿಸ್ಟನ್ ಸ್ಟಬ್ಸ್, ಅಭಿಷೇಕ್ ಪೊರೆಲ್ ಅವರನ್ನು ರಿಟೈನ್ ಮಾಡಿಕೊಂಡಿದೆ. ನಾಲ್ವರನ್ನು ಉಳಿಸಿಕೊಂಡಿರುವ ಡೆಲ್ಲಿ ತಂಡವು ಇನ್ನು 14 ಆಟಗಾರರನ್ನು ಆಯ್ಕೆ ಮಾಡಲೇಬೇಕು. ಇದರಲ್ಲಿ 7 ವಿದೇಶಿ ಆಟಗಾರರನ್ನು ಖರೀದಿಸುವ ಅವಕಾಶ ಹೊಂದಿದೆ.

7 / 12
ಗುಜರಾತ್ ಟೈಟಾನ್ಸ್: ಐಪಿಎಲ್ ರಿಟೈನ್ ಆಯ್ಕೆಯ ಮೂಲಕ ಗುಜರಾತ್ ಟೈಟಾನ್ಸ್​ ರಶೀದ್ ಖಾನ್, ಶುಭ್​ಮನ್ ಗಿಲ್, ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್ ಅವರನ್ನು ಉಳಿಸಿಕೊಂಡಿದೆ. ಗುಜರಾತ್ ಟೈಟಾನ್ಸ್ ತಂಡವು ಇನ್ನು 13 ಆಟಗಾರರನ್ನು ಆಯ್ಕೆ ಮಾಡಲೇಬೇಕು. ಇದರಲ್ಲಿ 7 ವಿದೇಶಿ ಆಟಗಾರರ ಸ್ಥಾನಗಳು ಕೂಡ ಖಾಲಿಯಿದೆ.

8 / 12
ಕೊಲ್ಕತ್ತಾ ನೈಟ್ ರೈಡರ್ಸ್: ಕೆಕೆಆರ್ ಫ್ರಾಂಚೈಸಿಯು ರಿಂಕು ಸಿಂಗ್, ವರುಣ್ ಚಕ್ರವರ್ತಿ, ಸುನಿಲ್ ನರೈನ್, ಆಂಡ್ರೆ ರಸೆಲ್, ಹರ್ಷಿತ್ ರಾಣಾ ಹಾಗೂ ರಮಣ್​ದೀಪ್ ಸಿಂಗ್ ಅವರನ್ನು ರಿಟೈನ್ ಮಾಡಿಕೊಂಡಿದೆ. ಒಟ್ಟು ಆರು ಆಟಗಾರರನ್ನು ಉಳಿಸಿಕೊಂಡಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಇನ್ನೂ 12 ಆಟಗಾರರನ್ನು ಖರೀದಿಸಲೇಬೇಕು. ಇದರಲ್ಲಿ 6 ವಿದೇಶಿ ಆಟಗಾರರನ್ನು ಆಯ್ಕೆ ಮಾಡಬಹುದು.

9 / 12
ಲಕ್ನೋ ಸೂಪರ್ ಜೈಂಟ್ಸ್: ಎಲ್​ಎಸ್​ಜಿ ಫ್ರಾಂಚೈಸಿಯು ನಿಕೋಲಸ್ ಪೂರನ್, ರವಿ ಬಿಷ್ಣೋಯ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ಆಯುಷ್ ಬಡೋನಿಯನ್ನು ಉಳಿಸಿಕೊಂಡಿದ್ದು, ಇದೀಗ ಮೆಗಾ ಹರಾಜಿನ ಮೂಲಕ 13 ಆಟಗಾರರನ್ನು ಖರೀದಿಸುವುದು ಕಡ್ಡಾಯ. ಈ ಹದಿಮೂರು ಆಟಗಾರರಲ್ಲಿ 7 ವಿದೇಶಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು.

10 / 12
ಪಂಜಾಬ್ ಕಿಂಗ್ಸ್: ಪಂಜಾಬ್ ಫ್ರಾಂಚೈಸಿಯು ಈ ಬಾರಿ ಉಳಿಸಿಕೊಂಡಿದ್ದು ಶಶಾಂಕ್ ಸಿಂಗ್ ಮತ್ತು ಪ್ರಭ್​ಸಿಮ್ರಾನ್ ಸಿಂಗ್ ಅವರನ್ನು ಮಾತ್ರ. ಹೀಗಾಗಿ ಮೆಗಾ ಹರಾಜಿನ ಮೂಲಕ ಒಟ್ಟು 16 ಆಟಗಾರರನ್ನು ಖರೀದಿಸಲೇಬೇಕು. ಇದರಲ್ಲಿ 8 ವಿದೇಶಿ ಆಟಗಾರರನ್ನು ಸಹ ಖರೀದಿಸಬಹುದು.

11 / 12
ಸನ್​ರೈಸರ್ಸ್ ಹೈದರಾಬಾದ್: ಎಸ್​ಆರ್​ಹೆಚ್ ಫ್ರಾಂಚೈಸಿಯು ಪ್ಯಾಟ್ ಕಮಿನ್ಸ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಕ್ ಕ್ಲಾಸೆನ್, ಟ್ರಾವಿಸ್ ಹೆಡ್ ಅವರನ್ನು ರಿಟೈನ್ ಮಾಡಿಕೊಂಡಿದೆ. ಐವರನ್ನು ಉಳಿಸಿಕೊಂಡಿರುವ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಇನ್ನೂ 13 ಆಟಗಾರರನ್ನು ಖರೀದಿಸುವುದು ಕಡ್ಡಾಯ. ಇದರಲ್ಲಿ ಐವರು ವಿದೇಶಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು.

12 / 12
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್​ಸಿಬಿ ಫ್ರಾಂಚೈಸಿಯು ಮೆಗಾ ಹರಾಜಿಗೂ ಮುನ್ನ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಮತ್ತು ಯಶ್ ದಯಾಳ್ ಅವರನ್ನು ತಂಡದಲ್ಲೇ ಉಳಿಸಿಕೊಂಡಿದೆ. ಇನ್ನು ಮೆಗಾ ಹರಾಜಿನ ಮೂಲಕ 13 ಆಟಗಾರರನ್ನು ಖರೀದಿಸಿ 18 ಸದಸ್ಯರ ಬಳಗವನ್ನು ರೂಪಿಸಲೇಬೇಕು. ಈ ಹದಿನೆಂಟು ಸದಸ್ಯರಲ್ಲಿ 8 ವಿದೇಶಿ ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ಆರ್​ಸಿಬಿ ಮುಂದಿದೆ.