IPL 2025: RCB ಅಂಗಳದಲ್ಲಿ ಅಶುತೋಷ್ ಶರ್ಮಾ
IPL 2025 Mega Auction: ಅಶುತೋಷ್ ಶರ್ಮಾ ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದರು. ಈ ವೇಳೆ 9 ಇನಿಂಗ್ಸ್ ಆಡಿದ್ದ ಅವರು 15 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ ಒಟ್ಟು 189 ರನ್ ಚಚ್ಚಿದ್ದರು. ಇದೀಗ ಯುವ ಸ್ಪೋಟಕ ದಾಂಡಿಗನ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕಣ್ಣಿಟ್ಟಿದೆ.
1 / 5
IPL 2025: ಐಪಿಎಲ್ ಮೆಗಾ ಹರಾಜಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಭರ್ಜರಿ ಸಿದ್ಧತೆಯಲ್ಲಿದೆ. ಈ ಸಿದ್ಧತೆಗಳ ನಡುವೆ ಆರ್ಸಿಬಿ ಕೆಲ ಆಟಗಾರರ ಟ್ರಯಲ್ಸ್ ನಡೆಸಿದೆ. ಇದರಲ್ಲಿ ಪಂಜಾಬ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಶುತೋಷ್ ಶರ್ಮಾ ಕೂಡ ಕಾಣಿಸಿಕೊಂಡಿದ್ದಾರೆ.
2 / 5
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆರ್ಸಿಬಿ ತಂಡದ ಟ್ರಯಲ್ಸ್ನಲ್ಲಿ ಅಶುತೋಷ್ ಶರ್ಮಾ ಕೂಡ ಭಾಗವಹಿಸಿದ್ದು, ಈ ಮೂಲಕ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ.
3 / 5
ಇತ್ತ ಪ್ರಮುಖ ಆಟಗಾರರೊಬ್ಬರು ಟ್ರಯಲ್ಸ್ನಲ್ಲಿ ಭಾಗವಹಿಸಿರುವುದರಿಂದ ನಿರೀಕ್ಷೆಗಳು ಹೆಚ್ಚಾಗಿವೆ. ಅದರಲ್ಲೂ ಆರ್ಸಿಬಿ ಉತ್ತಮ ಫಿನಿಶರ್ನ ಹುಡುಕಾಟದಲ್ಲಿದ್ದು, ಹೀಗಾಗಿಯೇ ಅಶುತೋಷ್ ಅವರನ್ನು ಟ್ರಯಲ್ಸ್ಗೆ ಕರೆಸಿಕೊಂಡಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಮೆಗಾ ಹರಾಜಿನಲ್ಲಿ ಆರ್ಸಿಬಿ ಅಶುತೋಷ್ ಖರೀದಿಗೆ ಬಿಡ್ಡಿಂಗ್ ನಡೆಸುವ ಸಾಧ್ಯತೆ ಹೆಚ್ಚಿದೆ.
4 / 5
ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ಪರ 11 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅಶುತೋಷ್ ಶರ್ಮಾ 9 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದರು. ಈ ವೇಳೆ 167ರ ಸ್ಟ್ರೈಕ್ ರೇಟ್ನಲ್ಲಿ ಒಟ್ಟು 189 ರನ್ ಕಲೆಹಾಕಿದ್ದಾರೆ. ಅದರಲ್ಲೂ ಯುವ ದಾಂಡಿಗ ಪಂಜಾಬ್ ಕಿಂಗ್ಸ್ ತಂಡದ ಫಿನಿಶಿಂಗ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಇದೇ ಕಾರಣದಿಂದಾಗಿ ಇದೀಗ ಆರ್ಸಿಬಿ ಕೂಡ ಅಶುತೋಷ್ ಶರ್ಮಾ ಮೇಲೆ ಕಣ್ಣಿಟ್ಟಿದೆ.
5 / 5
ಇನ್ನು ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ಫ್ರಾಂಚೈಸಿ ಒಟ್ಟು ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಇಲ್ಲಿ ವಿರಾಟ್ ಕೊಹ್ಲಿಯನ್ನು 21 ಕೋಟಿ ರೂ. ನೀಡಿ ಉಳಿಸಿಕೊಂಡರೆ, ರಜತ್ ಪಾಟಿದಾರ್ಗೆ 11 ಕೋಟಿ ರೂ. ನೀಡಲಾಗಿದೆ. ಹಾಗೆಯೇ ಯಶ್ ದಯಾಳ್ 5 ಕೋಟಿ ರೂ.ಗೆ ರಿಟೈನ್ ಆಗಿದ್ದಾರೆ. ಅಂದರೆ ಆರ್ಸಿಬಿ ಫ್ರಾಂಚೈಸಿಯು ಮೂವರು ಆಟಗಾರರನ್ನು ಉಳಿಸಿಕೊಳ್ಳಲು 37 ಕೋಟಿ ರೂ. ಖರ್ಚು ಮಾಡಿದೆ. ಇನ್ನುಳಿದ 83 ಕೋಟಿ ರೂ. ನಲ್ಲಿ 22 ಆಟಗಾರರನ್ನು ಖರೀದಿಸಬಹುದು.