
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಗೂ ಮುನ್ನ ಆರು ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಹೀಗೆ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಇಂದು (ಅ.31) ಸಲ್ಲಿಸಬೇಕು. ಅದಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ರಿವೀಲ್ ಆಗಿದೆ. ಆ ಆಟಗಾರರು ಯಾರೆಂದರೆ....

ರುತುರಾಜ್ ಗಾಯಕ್ವಾಡ್: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ಮುಂದಿನ ಸೀಸನ್ಗಾಗಿ ತಂಡದಲ್ಲೇ ಉಳಿಸಿಕೊಳ್ಳಲಾಗಿದೆ. ಅಲ್ಲದೆ ಕಳೆದ ಸೀಸನ್ನಲ್ಲಿ ತಂಡವನ್ನು ಮುನ್ನಡೆಸಿರುವ ಕಾರಣ ಐಪಿಎಲ್ 2025 ರಲ್ಲೂ ರುತುರಾಜ್ ನಾಯಕರಾಗಿ ಕಾಣಿಸಿಕೊಳ್ಳುವುದು ಖಚಿತ ಎನ್ನಬಹುದು.

ರವೀಂದ್ರ ಜಡೇಜಾ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ಯೆಲ್ಲೋ ಆರ್ಮಿಯಲ್ಲೇ ಮುಂದುವರೆದಿದ್ದಾರೆ. ಕಳೆದ ಬಾರಿ 16 ಕೋಟಿ ರೂ. ಪಡೆದಿದ್ದ ಜಡ್ಡು ಈ ಬಾರಿ 18 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಶಿವಂ ದುಬೆ: ಸಿಎಸ್ಕೆ ಪರ ಕಳೆದ ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಶಿವಂ ದುಬೆ ಅವರನ್ನು ಸಹ ಮುಂದಿನ ಸೀಸನ್ಗಾಗಿ ಮುಂದುವರೆಸಿದ್ದಾರೆ. ಹೀಗಾಗಿ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ದುಬೆ ಕೂಡ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ.

ಮತೀಶ ಪತಿರಾಣ: ಶ್ರೀಲಂಕಾ ತಂಡದ ಯುವ ವೇಗಿ ಮತೀಶ ಪತಿರಾಣ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಬಿಡುಗಡೆ ಮಾಡಲು ಸುತಾರಂ ಸಿದ್ಧರಿಲ್ಲ. ಹೀಗಾಗಿಯೇ ಬೃಹತ್ ಮೊತ್ತ ನೀಡಿ ಯಾರ್ಕರ್ ಸ್ಪೆಷಲಿಸ್ಟ್ ಬೌಲರ್ನನ್ನು ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ. ಅದರಂತೆ ಐಪಿಎಲ್ 2025 ರಲ್ಲೂ ಪತಿರಾಣ ಸಿಎಸ್ಕೆ ಪರ ಕಣಕ್ಕಿಳಿಯಲಿದ್ದಾರೆ.

ಮಹೇಂದ್ರ ಸಿಂಗ್ ಧೋನಿ: ನಿರೀಕ್ಷೆಯಂತೆ ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2025 ರಲ್ಲೂ ಕಣಕ್ಕಿಳಿಯುವುದು ಖಚಿತವಾಗಿದೆ. ಆದರೆ ಈ ಬಾರಿ ಸಿಎಸ್ಕೆ ಫ್ರಾಂಚೈಸಿಯು ಧೋನಿಯನ್ನು ಅನ್ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಉಳಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಅದರಂತೆ ಐಪಿಎಲ್ ಸೀಸನ್-18 ರಲ್ಲೂ ಧೋನಿ ಹವಾ ಮುಂದುವರೆಯಲಿದೆ.