IPL 2025: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಿಷಭ್ ಪಂತ್ ಗುಡ್ ಬೈ: ಯುವ ಆಟಗಾರರು ರಿಟೈನ್

|

Updated on: Oct 31, 2024 | 1:42 PM

IPL 2025 Retention: ಐಪಿಎಲ್ ಸೀಸನ್-18ರ ಮೆಗಾ ಹರಾಜು ಮುಂದಿನ ತಿಂಗಳು ನಡೆಯಲಿದೆ. ಇದಕ್ಕೂ ಮುನ್ನ ಪ್ರತಿ ಫ್ರಾಂಚೈಸಿಗಳು ಗರಿಷ್ಠ 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು. ಅದರಂತೆ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ನಾಲ್ವರನ್ನು ತಂಡದಲ್ಲೇ ಉಳಿಸಿಕೊಳ್ಳಲು ಮುಂದಾಗಿದೆ.

1 / 5
IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ನಾಲ್ವರು ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಳ್ಳಲು ನಿರ್ಧರಿಸಿದೆ. ಈ ಪಟ್ಟಿಯಲ್ಲಿ ರಿಷಭ್ ಪಂತ್ ಅವರ ಹೆಸರಿಲ್ಲ ಎಂಬುದು ವಿಶೇಷ. ಅಂದರೆ ಈ ಬಾರಿಯ ಮೆಗಾ ಹರಾಜಿನ ಮೂಲಕ ಪಂತ್ ಅದೃಷ್ಟ ಪರೀಕ್ಷೆಗೆ ಇಳಿಯಲು ನಿರ್ಧರಿಸಿದ್ದಾರೆ. ಹೀಗಾಗಿಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಅವರು ರಿಟೈನ್ ಆಗಿಲ್ಲ. ಇನ್ನು ಡೆಲ್ಲಿ ಫ್ರಾಂಚೈಸಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

2 / 5
ಅಕ್ಷರ್ ಪಟೇಲ್: ಐಪಿಎಲ್ 2019 ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿರುವ ಅಕ್ಷರ್ ಪಟೇಲ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ಡಿಸಿ ನಿರ್ಧರಿಸಿದೆ. ಅದರಂತೆ ಕಳೆದ ಬಾರಿ 9 ಕೋಟಿ ರೂ.ಗೆ ಡೆಲ್ಲಿ ಪರ ಕಣಕ್ಕಿಳಿದಿದ್ದ ಅಕ್ಷರ್ ಈ ಬಾರಿ ಬೃಹತ್ ಮೊತ್ತದೊಂದಿಗೆ ರಿಟೈನ್ ಆಗಿದ್ದಾರೆ.

3 / 5
ಕುಲ್ದೀಪ್ ಯಾದವ್: ಅನುಭವಿ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಸಹ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರಿಟೈನ್ ಮಾಡಿಕೊಳ್ಳಲು ಮುಂದಾಗಿದೆ. ಕಳೆದ ಸೀಸನ್​ನಲ್ಲಿ ಕೇವಲ 2 ಕೋಟಿ ರೂ. ಮಾತ್ರ ಪಡೆದಿದ್ದ ಕುಲ್ದೀಪ್ ಅವರಿಗೆ ಈ ಬಾರಿ ಹೆಚ್ಚಿನ ಮೊತ್ತ ನೀಡಲು ಡೆಲ್ಲಿ ಕ್ಯಾಪಿಟಲ್ಸ್ ನಿರ್ಧರಿಸಿದೆ.

4 / 5
ಟ್ರಿಸ್ಟನ್ ಸ್ಟಬ್ಸ್: ಸೌತ್ ಆಫ್ರಿಕಾದ ಸ್ಪೋಟಕ ದಾಂಡಿಗ ಟ್ರಿಸ್ಟನ್ ಸ್ಟಬ್ಸ್ ಕಳೆದ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಪಡೆದ ಸಂಭಾವನೆ ಕೇವಲ 50 ಲಕ್ಷ ರೂ. ಮಾತ್ರ. ಇದಾಗ್ಯೂ ಅದ್ಭುತ ಬ್ಯಾಟಿಂಗ್​ನೊಂದಿಗೆ ಗಮನ ಸೆಳೆದಿದ್ದ ಯುವ ದಾಂಡಿಗನನ್ನು ಈ ಬಾರಿ ಕೋಟಿ ಮೊತ್ತದೊಂದಿಗೆ ಉಳಿಸಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್ ಮುಂದಾಗಿದೆ.

5 / 5
ಅಭಿಷೇಕ್ ಪೊರೆಲ್: ಕಳೆದ ಸೀಸನ್​ನಲ್ಲಿ ಕೇವಲ 20 ಲಕ್ಷ ರೂ.ಗೆ ಆಡಿದ್ದ ಅಭಿಷೇಕ್ ಪೊರೆಲ್ ಅವರನ್ನು ಈ ಬಾರಿ ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ರಿಟೈನ್ ಮಾಡಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್ ನಿರ್ಧರಿಸಿದೆ. ಅದರಂತೆ 4 ಕೋಟಿ ರೂ.ಗೆ ಯುವ ವಿಕೆಟ್ ಕೀಪರ್​ ಬ್ಯಾಟ್ಸ್​ಮನ್​ ಅನ್ನು ಡೆಲ್ಲಿ ಕ್ಯಾಪಿಟಲ್ಸ್ ರಿಟೈನ್ ಮಾಡಿಕೊಂಡಿದೆ.

Published On - 1:09 pm, Thu, 31 October 24