IPL 2025: ಐಪಿಎಲ್ ಹರಾಜಿಗೂ ಮುನ್ನ 8 ಆಟಗಾರರು ರಿಟೈನ್..?

|

Updated on: May 28, 2024 | 1:53 PM

IPL 2025: ಐಪಿಎಲ್ 2025 ಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದೆ. ಈ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳು ಕೆಲವೇ ಕೆಲವು ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಂಡು, ಉಳಿದೆಲ್ಲಾ ಆಟಗಾರರನ್ನು ಬಿಡುಗಡೆ ಮಾಡಬೇಕಾಗುತ್ತದೆ. ಆದರೆ ಈ ನಿಯಮದಲ್ಲಿ ಬದಲಾವಣೆ ಮಾಡಬೇಕೆಂದು ಇದೀಗ ಕೆಲ ಫ್ರಾಂಚೈಸಿಗಳು ಬಿಸಿಸಿಐಗೆ ಮನವಿ ಸಲ್ಲಿಸಿದೆ.

1 / 10
ಐಪಿಎಲ್ ಸೀಸನ್ 17 ಮುಕ್ತಾಯದ ಬೆನ್ನಲ್ಲೇ, ಐಪಿಎಲ್ 2025ರ ಚರ್ಚೆಗಳು ಶುರುವಾಗಿದೆ. ಈ ಚರ್ಚೆಗಳು ಆರಂಭವಾಗಿರುವುದೇ ಆಟಗಾರರ ರಿಟೈನ್ ವಿಚಾರದೊಂದಿಗೆ ಎಂಬುದು ವಿಶೇಷ. ಅಂದರೆ ಐಪಿಎಲ್ 2025 ಕ್ಕಾಗಿ ಮೆಗಾ ಹರಾಜು ನಡೆಯಲಿದೆ. ಈ ಮೆಗಾ  ಹರಾಜಿಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದೆ.

2 / 10
ಆದರೆ ಈ ಬಾರಿ 8 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕೆಂದು ಕೆಲ ಫ್ರಾಂಚೈಸಿಗಳು ಬಿಸಿಸಿಐಗೆ ಮನವಿ ಮಾಡಿದ್ದಾರೆ. ಅಂದರೆ 2022ರಲ್ಲಿ ನಡೆದ ಮೆಗಾ ಹರಾಜಿನ ವೇಳೆ ಕೇವಲ 4 ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಅಲ್ಲದೆ ಈ ರಿಟೈನ್​ಗಾಗಿ ಒಂದಷ್ಟು ಷರತ್ತುಗಳನ್ನು ವಿಧಿಸಿದ್ದರು.

3 / 10
ಈ ಷರತ್ತುಗಳಂತೆ, ಒಂದು ತಂಡವು ನಾಲ್ವರನ್ನು ಉಳಿಸಿಕೊಳ್ಳಲು ಬಯಸಿದರೆ 42 ಕೋಟಿ ರೂ. ವ್ಯಯಿಸಬೇಕಿತ್ತು. ಒಂದು ವೇಳೆ ಮೂವರನ್ನು ಮಾತ್ರ ಉಳಿಸುವುದಾದರೆ 33 ಕೋಟಿ ರೂ. ನೀಡಬೇಕಾಗಿತ್ತು. ಇನ್ನು ಇಬ್ಬರು ಆಟಗಾರರನ್ನು ಉಳಿಸಿಕೊಂಡರೆ 24 ಕೋಟಿ. ರೂ ನೀಡಬೇಕಿತ್ತು. ಒಂದು ವೇಳೆ ಒಬ್ಬ ಆಟಗಾರನನ್ನು ಮಾತ್ರ ಉಳಿಸಿಕೊಂಡರೆ 14 ಕೋಟಿ. ರೂ ನೀಡಬೇಕು ಎಂದು ತಿಳಿಸಿದ್ದರು. ಅದರಂತೆ...

4 / 10
4 ಆಟಗಾರರನ್ನು ಉಳಿಸಿಕೊಂಡರೆ: ಮೊದಲ ಆಟಗಾರನಿಗೆ 16 ಕೋಟಿ ರೂ, 2ನೇ ಆಟಗಾರನಿಗೆ 12 ಕೋಟಿ ರೂ, 3ನೇ ಆಟಗಾರನಿಗೆ 8 ಕೋಟಿ ರೂ , 4ನೇ ಆಟಗಾರನಿಗೆ 6 ಕೋಟಿ ರೂ. ನೀಡಬೇಕು. ಅದರಂತೆ ಒಟ್ಟು ಮೊತ್ತ 42 ಕೋಟಿ ಆಗಲಿದೆ.

5 / 10
3 ಆಟಗಾರರನ್ನು ಉಳಿಸಿಕೊಂಡರೆ: ಮೊದಲ ಆಟಗಾರನಿಗೆ 15 ಕೋಟಿ ರೂ,2ನೇ ಆಟಗಾರನಿಗೆ 11 ಕೋಟಿ ರೂ, 3ನೇ ಆಟಗಾರನಿಗೆ 7 ಕೋಟಿ ರೂ. ನೀಡಬೇಕು. ಅದರಂತೆ ಒಟ್ಟು ಮೊತ್ತ 33 ಕೋಟಿ ರೂ. ವ್ಯಯಿಸಬೇಕು.

6 / 10
2 ಆಟಗಾರರನ್ನು ಉಳಿಸಿಕೊಂಡರೆ: ಮೊದಲ ಆಟಗಾರನಿಗೆ 14 ಕೋಟಿ ರೂ, 2ನೇ ಆಟಗಾರನಿಗೆ 10 ಕೋಟಿ ರೂ. ನೀಡಬೇಕು. ಅದರಂತೆ ಒಟ್ಟು ಮೊತ್ತ 24 ಕೋಟಿ ರೂ. ನೀಡಬೇಕಾಗುತ್ತದೆ. ಇನ್ನು ಒಬ್ಬ ಆಟಗಾರನನ್ನು ಮಾತ್ರ ಉಳಿಸಿಕೊಂಡರೆ 14 ಕೋಟಿ ರೂ. ನೀಡಬೇಕಾಗುತ್ತದೆ. ಇದಾಗ್ಯೂ ರಾಷ್ಟ್ರೀಯ ತಂಡದಲ್ಲಿ ಆಡದ ಒಬ್ಬ ಆಟಗಾರನನ್ನು ಉಳಿಸಿಕೊಂಡರೆ 4 ಕೋಟಿ ನೀಡಬೇಕಾಗುತ್ತದೆ.

7 / 10
ಈ ಮೂಲಕ ಒಟ್ಟು 4 ಆಟಗಾರರನ್ನು ಉಳಿಸಿಕೊಳ್ಳಲು ಬಿಸಿಸಿಐ ಅವಕಾಶ ನೀಡಿತ್ತು. ಆದರೆ ಇದೀಗ ಕೆಲ ಐಪಿಎಲ್ ಫ್ರಾಂಚೈಸಿಗಳು 8 ಆಟಗಾರರ ರಿಟೈನ್​ಗೆ ಬೇಡಿಕೆ ಇಟ್ಟಿದೆ. ಇದರಿಂದ ಒಂದು ತಂಡದ ಬ್ರ್ಯಾಂಡ್ ವ್ಯಾಲ್ಯೂ ಕಡಿಮೆಯಾಗುವುದಿಲ್ಲ ಎಂಬ ವಾದವನ್ನು ಫ್ರಾಂಚೈಸಿಗಳು ಮುಂದಿಟ್ಟಿದ್ದಾರೆ. ಆದರೆ ಮತ್ತೊಂಡೆದೆ ಕೆಲ ಫ್ರಾಂಚೈಸಿಗಳು ಈ ಬೇಡಿಕೆಗೆ ವಿರೋಧವನ್ನೂ ಸಹ ವ್ಯಕ್ತಪಡಿಸಿದ್ದಾರೆ.

8 / 10
ಇದಕ್ಕೆ ಮುಖ್ಯ ಕಾರಣ, ಬಲಿಷ್ಠ ಎನಿಸಿಕೊಂಡಿರುವ ಕೆಲ ತಂಡಗಳು 8 ಆಟಗಾರರನ್ನು ಉಳಿಸಿಕೊಂಡರೆ, ಇತರೆ ತಂಡಗಳಿಗೆ ಅತ್ಯುತ್ತಮ ಆಟಗಾರರ ಆಯ್ಕೆ ಇರುವುದಿಲ್ಲ. ಉದಾಹರಣೆಗೆ ಹಾಲಿ ಚಾಂಪಿಯನ್ ಕೆಕೆಆರ್ ತಂಡ 8 ಆಟಗಾರರನ್ನು ಉಳಿಸಿಕೊಂಡರೆ, ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಂಡ ಬಹುತೇಕ ಆಟಗಾರರು ರಿಟೈನ್ ಆಗಲಿದ್ದಾರೆ.

9 / 10
ಇನ್ನೊಂದೆಡೆ ಈ ಬಾರಿ ಕಳಪೆ ಪ್ರದರ್ಶನ ನೀಡಿದ ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗಳು ಮೆಗಾ ಹರಾಜಿನ ಮೂಲಕ ಹೊಸ ತಂಡಗಳನ್ನು ಕಟ್ಟುವ ಇರಾದೆಯಲ್ಲಿದೆ. ಆದರೆ ಇತ್ತ ಕೆಕೆಆರ್, ಎಸ್​ಆರ್​ಹೆಚ್​, ಮುಂಬೈ ಇಂಡಿಯನ್ಸ್​ನಂತಹ ಫ್ರಾಂಚೈಸಿಗಳು 8 ಪ್ರಮುಖ ಆಟಗಾರರನ್ನು ಉಳಿಸಿಕೊಂಡರೆ, ಮೆಗಾ ಹರಾಜಿನಲ್ಲಿ ಸ್ಟಾರ್ ಎನಿಸಿಕೊಳ್ಳುವ ಆಟಗಾರರು ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಹೀಗಾಗಿ 8 ಆಟಗಾರರ ರಿಟೈನ್​ಗೆ ಕೆಲ ಫ್ರಾಂಚೈಸಿಗಳು ಆರಂಭದಲ್ಲೇ ವಿರೋಧ ವ್ಯಕ್ತಪಡಿಸಿವೆ.

10 / 10
ಇದಾಗ್ಯೂ ಐಪಿಎಲ್ ಫ್ರಾಂಚೈಸಿಗಳ ಮನವಿಯನ್ನು ಬಿಸಿಸಿಐ ಇನ್ನೂ ಸಹ ತಳ್ಳಿ ಹಾಕಿಲ್ಲ. ಹೀಗಾಗಿ ಪರ-ವಿರೋಧವನ್ನು ಗಮನಿಸಿ ಹೊಸ ಸಿದ್ಧ ಸೂತ್ರವನ್ನು ಸಿದ್ಧಪಡಿಸಬಹುದು. ಈ ಮೂಲಕ ಮೆಗಾ ಹರಾಜಿಗೂ ಮುನ್ನ ಆಟಗಾರರ ರಿಟೈನ್​ಗೆ ಬಿಸಿಸಿಐ ಹೊಸ ನಿಯಮ ರೂಪಿಸುವ ಸಾಧ್ಯತೆ ಹೆಚ್ಚಿದೆ.