IPL 2025: ಎಲ್ಲಾ ತಂಡಗಳ ಟಾರ್ಗೆಟ್ ಜೋಸ್ ಬಟ್ಲರ್..!
IPL 2025 Mega Auction: ಐಪಿಎಲ್ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ನಡೆಯಲಿದೆ. ಸೌದಿ ಅರೇಬಿಯಾದಲ್ಲಿ ನಡೆಯಲಿರುವ ಈ ಹರಾಜಿನಲ್ಲಿ ಜೋಸ್ ಬಟ್ಲರ್ ಅವರಿಗಾಗಿ ಮೊದಲು ಬಿಡ್ಡಿಂಗ್ ನಡೆಯುವ ಸಾಧ್ಯತೆಯಿದೆ.
1 / 5
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ಮೆಗಾ ಹರಾಜಿನ ಮಾರ್ಕ್ಯೂ ಲಿಸ್ಟ್ನ ಮೊದಲ ಸೆಟ್ನಲ್ಲಿ 6 ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಆರು ಆಟಗಾರರಲ್ಲಿ ಅಗ್ರಸ್ಥಾನದಲ್ಲಿರುವುದು ಇಂಗ್ಲೆಂಡ್ ಟಿ20 ತಂಡದ ನಾಯಕ ಜೋಸ್ ಬಟ್ಲರ್ ಎಂಬುದು ವಿಶೇಷ.
2 / 5
ಅಂದರೆ ಈ ಬಾರಿಯ ಮೆಗಾ ಹರಾಜಿನಲ್ಲಿ ಜೋಸ್ ಬಟ್ಲರ್ ಅವರಿಗಾಗಿ ಮೊದಲು ಬಿಡ್ಡಿಂಗ್ ನಡೆಯುವ ಸಾಧ್ಯತೆಯಿದೆ. ಏಕೆಂದರೆ ಎಲ್ಲಾ ಫ್ರಾಂಚೈಸಿಗಳ ಟಾರ್ಗೆಟ್ ಲಿಸ್ಟ್ನಲ್ಲಿ ಬಟ್ಲರ್ ಹೆಸರು ಕಾಣಿಸಿಕೊಂಡಿದ್ದು, ಹೀಗಾಗಿಯೇ ಅವರ ಹೆಸರು ಮಾರ್ಕ್ಯೂ ಲಿಸ್ಟ್ನಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ.
3 / 5
ಇಲ್ಲಿ ಪ್ರತಿ ಫ್ರಾಂಚೈಸಿಗಳು ಖರೀದಿಸಲು ಬಯಸುವ ಆಟಗಾರರನ್ನು ಮಾರ್ಕ್ಯೂ ಲಿಸ್ಟ್ನಲ್ಲಿ ಸೇರ್ಪಡೆಗೊಳಿಸಲಾಗುತ್ತದೆ. ಅದರಂತೆ ಈ ಬಾರಿ 12 ಆಟಗಾರರು ಮಾರ್ಕ್ಯೂ ಲಿಸ್ಟ್ನಲ್ಲಿ ಸ್ಥಾನ ಪಡೆದಿದ್ದಾರೆ. ಇವರಲ್ಲಿ ಎಲ್ಲಾ ಫ್ರಾಂಚೈಸಿಗಳ ಹಾಟ್ ಫೇವರೇಟ್ ಆಟಗಾರನಾಗಿ ಜೋಸ್ ಬಟ್ಲರ್ ಕಾಣಿಸಿಕೊಂಡಿದ್ದಾರೆ.
4 / 5
ಅತ್ತ ಜೋಸ್ ಬಟ್ಲರ್ ಖರೀದಿಯಿಂದ ಮೂರು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಬಹುದು. ಟಿ20 ಕ್ರಿಕೆಟ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಬಟ್ಲರ್, ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಇದರ ಜೊತೆಗೆ ನಾಯಕತ್ವವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿಯೇ ಎಲ್ಲಾ ಫ್ರಾಂಚೈಸಿಗಳು ಜೋಸ್ ಬಟ್ಲರ್ ಮೇಲೆ ಕಣ್ಣಿಟ್ಟಿದ್ದಾರೆ.
5 / 5
ಕಳೆದ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ 11 ಪಂದ್ಯಗಳನ್ನಾಡಿದ್ದ ಜೋಸ್ ಬಟ್ಲರ್ 2 ಭರ್ಜರಿ ಶತಕಗಳೊಂದಿಗೆ ಒಟ್ಟು 359 ರನ್ ಕಲೆಹಾಕಿದ್ದರು. ಅಲ್ಲದೆ 107 ಐಪಿಎಲ್ ಪಂದ್ಯಗಳಿಂದ ಒಟ್ಟು 3582 ರನ್ ಗಳಿಸಿದ್ದಾರೆ. ಈ ವೇಳೆ 7 ಶತಕ ಹಾಗೂ 19 ಅರ್ಧಶತಕಗಳನ್ನು ಬಾರಿಸಿದ್ದಾರೆ. ಹೀಗಾಗಿ ಜೋಸ್ ಬಟ್ಲರ್ ಖರೀದಿಗಾಗಿ ಈ ಬಾರಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.