AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BGT 2024: ಬಾರ್ಡರ್-ಗವಾಸ್ಕರ್ ಸರಣಿ ಅಶ್ವಿನ್ vs ಲಿಯಾನ್

R Ashwin Vs Nathan Lyon: ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಈಗ 38 ವರ್ಷ. ಅತ್ತ ಆಸ್ಟ್ರೇಲಿಯಾದ ಹಿರಿಯ ಸ್ಪಿನ್ನರ್ ನಾಥನ್ ಲಿಯಾನ್ ಅವರ ವಯಸ್ಸು 36. ಹೀಗಾಗಿ ಇಬ್ಬರು ದಿಗ್ಗಜ ಸ್ಪಿನ್ನರ್​ಗೆ ಇದು ಕೊನೆಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಎನ್ನಲಾಗುತ್ತಿದೆ.

ಝಾಹಿರ್ ಯೂಸುಫ್
|

Updated on: Nov 19, 2024 | 11:58 AM

Share
ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ದಿನಗಣನೆ ಶುರುವಾಗಿದೆ. ನವೆಂಬರ್ 22 ರಿಂದ ಆರಂಭವಾಗಲಿರುವ ಈ ಸರಣಿಯು ರವಿಚಂದ್ರನ್ ಅಶ್ವಿನ್ vs ನಾಥನ್ ಲಿಯಾನ್ ಸರಣಿಯಾಗಿ ಮಾರ್ಪಡಲಿದೆ. ಏಕೆಂದರೆ ಇಬ್ಬರಿಗೂ ಇದು ಕೊನೆಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ.

1 / 5
ಅತ್ತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್​ಗಳ ಪಟ್ಟಿಯಲ್ಲೂ ನಾಥನ್ ಲಿಯಾನ್ ಹಾಗೂ ರವಿಚಂದ್ರನ್ ಅಶ್ವಿನ್ ಮೊದಲೆರಡು ಸ್ಥಾನಗಳಲ್ಲಿದ್ದಾರೆ. ಹೀಗಾಗಿ ಈ ಬಾರಿಯ ಸರಣಿಯ ಮೂಲಕ ಯಾರು ನಂಬರ್ 1 ಎಂಬುದು ಕೂಡ ನಿರ್ಧಾರವಾಗಲಿದೆ.

2 / 5
ಪ್ರಸ್ತುತ ಪಟ್ಟಿಯಲ್ಲಿ ನಾಥನ್ ಲಿಯಾನ್ ಅಗ್ರಸ್ಥಾನದಲ್ಲಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 26 ಪಂದ್ಯಗಳನ್ನಾಡಿರುವ ಲಿಯಾನ್ 7378 ಎಸೆತಗಳನ್ನು ಎಸೆದಿದ್ದು, ಈ ವೇಳೆ ಒಟ್ಟು 116 ವಿಕೆಟ್ ಕಬಳಿಸಿದ್ದಾರೆ.

3 / 5
ಅತ್ತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 22 ಪಂದ್ಯಗಳನ್ನಾಡಿರುವ ರವಿಚಂದ್ರನ್ ಅಶ್ವಿನ್ 7163 ಎಸೆತಗಳ ಮೂಲಕ ಒಟ್ಟು 114 ವಿಕೆಟ್ ಕಬಳಿಸಿದ್ದಾರೆ. ಅಂದರೆ ಅಶ್ವಿನ್ ಹಾಗೂ ಲಿಯಾನ್ ನಡುವಣ ವಿಕೆಟ್​ಗಳ ವ್ಯತ್ಯಾಸ ಕೇವಲ 2 ಮಾತ್ರ.

4 / 5
ಅದರಂತೆ ಈ ಬಾರಿಯ ಸರಣಿಯಲ್ಲಿ ಇವರಿಬ್ಬರಲ್ಲಿ ಯಾರು ಅತ್ಯಧಿಕ ವಿಕೆಟ್ ಕಬಳಿಸುತ್ತಾರೋ ಅವರು ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿಯೇ ಈ ಬಾರಿಯ ಆಸ್ಟ್ರೇಲಿಯಾ vs ಭಾರತ ನಡುವಣ ಟೆಸ್ಟ್ ಸರಣಿಯು ನಾಥನ್ ಲಿಯಾನ್ vs ರವಿಚಂದ್ರನ್ ಅಶ್ವಿನ್ ಪೈಪೋಟಿಯಾಗಿ ಮಾರ್ಪಡುವುದರಲ್ಲಿ ಅನುಮಾನವೇ ಇಲ್ಲ.

5 / 5
Follow Us
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!

ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ

ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ

ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ

‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’

ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ

ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ

ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ

ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್

ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ