IPL 2025: LSG ರಿಟೈನ್ ಮಾಡಿಕೊಂಡಿರುವ 5 ಆಟಗಾರರು ಇವರೇ

|

Updated on: Oct 28, 2024 | 1:42 PM

IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳಿಗೆ ಒಟ್ಟು 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶವಿದೆ. ಒಂದು ವೇಳೆ ಫ್ರಾಂಚೈಸಿಯೊಂದು ಐವರನ್ನು ರಿಟೈನ್ ಮಾಡಿಕೊಂಡರೆ, ಓರ್ವ ಆಟಗಾರನ ಮೇಲೆ ಆರ್​ಟಿಎಂ ಕಾರ್ಡ್ ಬಳಸಿಕೊಳ್ಳಬಹುದು. ಅದರಂತೆ ಇದೀಗ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಐವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ನಿರ್ಧರಿಸಿದೆ.

1 / 7
ಐಪಿಎಲ್ ಮೆಗಾ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು 5 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ನಿರ್ಧರಿಸಿದೆ. ಈ ಐದು ಆಟಗಾರರಲ್ಲಿ ತಂಡದ ನಾಯಕ ಕೆಎಲ್ ರಾಹುಲ್ ಇಲ್ಲ ಎಂಬುದು ಖಚಿತವಾಗಿದೆ. ಹೀಗಾಗಿ ಐಪಿಎಲ್ ಸೀಸನ್-18 ರ ಮೆಗಾ ಹರಾಜಿನಲ್ಲಿ ರಾಹುಲ್ ಕಾಣಿಸಿಕೊಳ್ಳುವುದು ಕನ್ಫರ್ಮ್. ಇನ್ನು LSG ಫ್ರಾಂಚೈಸಿ ರಿಟೈನ್ ಮಾಡಿಕೊಂಡಿರುವ 5 ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

2 / 7
ನಿಕೋಲಸ್ ಪೂರನ್: ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ತನ್ನ ಮೊದಲ ರಿಟೈನ್ ಆಗಿ ವೆಸ್ಟ್ ಇಂಡೀಸ್ ಆಟಗಾರ ನಿಕೋಲಸ್ ಪೂರನ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಇದಕ್ಕಾಗಿ ಪೂರನ್​ಗೆ 18 ಕೋಟಿ ರೂ. ನೀಡಲು ಎಲ್​ಎಸ್​ಜಿ ಫ್ರಾಂಚೈಸಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

3 / 7
ಮಯಾಂಕ್ ಯಾದವ್: ಲಕ್ನೋ ಸೂಪರ್ ಜೈಂಟ್ಸ್ ತಂಡದ ಎರಡನೇ ರಿಟೈನ್ ಯುವ ವೇಗಿ ಮಯಾಂಕ್ ಯಾದವ್. ಟೀಮ್ ಇಂಡಿಯಾ ಆಟಗಾರನನ್ನು ಎಲ್​ಎಸ್​ಜಿ 14 ಕೋಟಿ ರೂ.ಗೆ ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ.

4 / 7
ರವಿ ಬಿಷ್ಣೋಯ್: ಎಲ್​ಎಸ್​ಜಿ ಫ್ರಾಂಚೈಸಿಯ ಮೂರನೇ ರಿಟೈನ್ ಯುವ ಸ್ಪಿನ್ನರ್ ರವಿ ಬಿಷ್ಣೋಯ್. ಕಳೆದ ಮೂರು ಸೀಸನ್​ಗಳಿಂದ ಲಕ್ನೋ ತಂಡದ ಭಾಗವಾಗಿರುವ ಬಿಷ್ಣೋಯ್ ಮುಂಬರುವ ಐಪಿಎಲ್​ನಲ್ಲೂ ಎಲ್​ಎಸ್​ಜಿ ಪರ ಕಣಕ್ಕಿಳಿಯುವುದು ಖಚಿತವಾಗಿದೆ.

5 / 7
ಆಯುಷ್ ಬದೋನಿ: ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಯುವ ಆಟಗಾರ ಆಯುಷ್ ಬದೋನಿಯನ್ನು ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ತಂಡದಲ್ಲೇ ಉಳಿಸಿಕೊಂಡಿದೆ. ಅದರಂತೆ ಯುವ ಆಟಗಾರನಿಗೆ 4 ಕೋಟಿ ರೂ. ನೀಡುವ ಸಾಧ್ಯತೆಯಿದೆ.

6 / 7
ಮೊಹ್ಸಿನ್ ಖಾನ್: ಎಲ್​ಎಸ್​ಜಿ ಫ್ರಾಂಚೈಸಿಯು ಎಡಗೈ ವೇಗಿ ಮೊಹ್ಸಿನ್ ಖಾನ್ ಅವರನ್ನು ಸಹ ರಿಟೈನ್ ಮಾಡಿಕೊಳ್ಳಲು ನಿರ್ಧರಿಸಿದೆ. ಟೀಮ್ ಇಂಡಿಯಾ ಪರ ಆಡಿರದ ಕಾರಣ ಮೊಹ್ಸಿನ್ ಖಾನ್ ಕೂಡ ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ರಿಟೈನ್ ಆಗಲಿದ್ದಾರೆ.

7 / 7
ಇನ್ನು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಓರ್ವ ಆಟಗಾರನ ಮೇಲೆ ಆರ್​ಟಿಎಂ ಕಾರ್ಡ್ ಬಳಸುವ ಸಾಧ್ಯತೆಯಿದೆ. ಆದರೆ ಆ ಆಟಗಾರ ಯಾರೆಂಬುದು ಇನ್ನೂ ಸಹ ನಿರ್ಧಾರವಾಗಿಲ್ಲ. ಅತ್ತ ತಂಡದಲ್ಲಿ ಮಾರ್ಕಸ್ ಸ್ಟೊಯಿನಿಸ್, ಕ್ವಿಂಟನ್ ಡಿಕಾಕ್, ಕೃನಾಲ್ ಪಾಂಡ್ಯ ಸೇರಿದಂತೆ ಪ್ರಮುಖ ಆಟಗಾರರಿದ್ದು, ಹೀಗಾಗಿ ಇವರಲ್ಲಿ ಒಬ್ಬರನ್ನು ಆರ್​ಟಿಎಂ ಬಳಸಿ ಹರಾಜಿಗೆ ಬಿಡುಗಡೆ ಮಾಡಬಹುದು.