IPL 2025: 112 ಕೋಟಿ ರೂ.ನೊಂದಿಗೆ ಐಪಿಎಲ್ ಹರಾಜಿಗೆ ಪಂಜಾಬ್ ಕಿಂಗ್ಸ್

|

Updated on: Oct 31, 2024 | 10:22 AM

IPL 2025 Retention: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಕೇವಲ ಇಬ್ಬರು ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಳ್ಳಲು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ನಿರ್ಧರಿಸಿದೆ. ಈ ಮೂಲಕ ಐಪಿಎಲ್ 2025 ಕ್ಕಾಗಿ ಹೊಸ ತಂಡ ಕಟ್ಟುವ ಇರಾದೆಯಲ್ಲಿದೆ. ಹೀಗಾಗಿ ಐಪಿಎಲ್ ಸೀಸನ್-18 ರಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಮಹತ್ವದ ಬದಲಾವಣೆ ಕಂಡು ಬರುವುದು ಖಚಿತ ಎನ್ನಬಹುದು.

1 / 6
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಗಾಗಿ ಮುನ್ನ ಪ್ರತಿ ಫ್ರಾಂಚೈಸಿಗಳು 6 ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಬಹುದು. ಆದರೆ ಈ ಆಯ್ಕೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಪಂಜಾಬ್ ಕಿಂಗ್ಸ್ ಹಿಂದೇಟು ಹಾಕಿದೆ. ಅಲ್ಲದೆ ಕೇವಲ ಇಬ್ಬರು ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಳ್ಳಲು ನಿರ್ಧರಿಸಿದೆ. ಅದು ಕೂಡ ಅನ್​ಕ್ಯಾಪ್ಡ್ ಆಟಗಾರರನ್ನು ಎಂಬುದು ವಿಶೇಷ.

2 / 6
ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಮೂಲಗಳ ಮಾಹಿತಿ ಪ್ರಕಾರ, ಮುಂದಿನ ಸೀಸನ್​ಗಾಗಿ ಕೇವಲ ಇಬ್ಬರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಮುಂದಾಗಿದೆ. ಅಲ್ಲದೆ ಕಳೆದ ಸೀಸನ್​ನಲ್ಲಿ ತಂಡದಲ್ಲಿದ್ದ ಎಲ್ಲಾ ಸ್ಟಾರ್ ಆಟಗಾರರನ್ನು ಬಿಡುಗಡೆ ಮಾಡಲು ಪಂಜಾಬ್ ಕಿಂಗ್ಸ್ ನಿರ್ಧರಿಸಿದೆ ಎಂದು ವರದಿಯಾಗಿದೆ. ಈ ಮೂಲಕ ಐಪಿಎಲ್ 2025 ಕ್ಕಾಗಿ ಹೊಸ ತಂಡ ಕಟ್ಟುವ ಇರಾದೆಯಲ್ಲಿದ್ದಾರೆ. ಇನ್ನು ಎಲ್ಲಾ ಆಟಗಾರರನ್ನು ಬಿಡುಗಡೆ ಮಾಡಿ ಪಂಜಾಬ್ ಕಿಂಗ್ಸ್ ಉಳಿಸಿಕೊಳ್ಳುವ ಆಟಗಾರರೆಂದರೆ...

3 / 6
ಶಶಾಂಕ್ ಸಿಂಗ್: ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ಪರ 14 ಪಂದ್ಯಗಳನ್ನಾಡಿದ್ದ ಶಶಾಂಕ್ ಸಿಂಗ್ 2 ಸ್ಪೋಟಕ ಅರ್ಧಶತಕಗಳೊಂದಿಗೆ ಒಟ್ಟು 354	 ರನ್ ಕಲೆಹಾಕಿದ್ದರು. ಅಲ್ಲದೆ ತಂಡದ ಗೆಲುವುಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಶಶಾಂಕ್ ಸಿಂಗ್ ಅವರನ್ನು ಪಂಜಾಬ್ ಕಿಂಗ್ಸ್​ ಅನ್​ಕ್ಯಾಪ್ಡ್​ ಆಟಗಾರರ ಪಟ್ಟಿಯಲ್ಲಿ ರಿಟೈನ್ ಮಾಡಿಕೊಳ್ಳಲು ನಿರ್ಧರಿಸಿದೆ.

4 / 6
ಪ್ರಭ್​ಸಿಮ್ರಾನ್ ಸಿಂಗ್: ಪಂಜಾಬ್ ಕಿಂಗ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದಿರುವ ಪ್ರಭ್​ಸಿಮ್ರಾನ್ ಸಿಂಗ್ ಕೂಡ ಸ್ಪೋಟಕ ಬ್ಯಾಟಿಂಗ್​ಗೆ ಹೆಸರುವಾಸಿ. ಅದರಲ್ಲೂ ಕಳೆದ ಸೀಸನ್​ನಲ್ಲಿ 14 ಪಂದ್ಯಗಳಿಂದ 2 ಅರ್ಧಶತಕಗಳೊಂದಿಗೆ 334 ರನ್ ಕಲೆಹಾಕಿದ್ದರು. ಹೀಗಾಗಿ ಪ್ರಭ್​ಸಿಮ್ರಾನ್ ಅವರನ್ನು ಸಹ ತಂಡದಲ್ಲೇ ಉಳಿಸಿಕೊಳ್ಳಲು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಮುಂದಾಗಿದೆ.

5 / 6
ಇಲ್ಲಿ ಪ್ರಭ್​ಸಿಮ್ರಾನ್ ಸಿಂಗ್ ಹಾಗೂ ಶಶಾಂಕ್ ಸಿಂಗ್ ರಾಷ್ಟ್ರೀಯ ತಂಡದ ಪರ ಆಡದ ಆಟಗಾರರು. ಹೀಗಾಗಿ ಇವರನ್ನು ಅನ್​ಕ್ಯಾಪ್ಡ್​ ಆಟಗಾರರ ಪಟ್ಟಿಯಲ್ಲಿ ರಿಟೈನ್ ಮಾಡಿಕೊಳ್ಳಬಹುದು. ಅದರಂತೆ ಇಬ್ಬರಿಗೆ ತಲಾ 4 ಕೋಟಿ ರೂ. ನೀಡಿ ತಂಡದಲ್ಲೇ ಉಳಿಸಿಕೊಳ್ಳಲು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಪ್ಲ್ಯಾನ್ ರೂಪಿಸಿದೆ.

6 / 6
ಇತ್ತ ಇಬ್ಬರಿಗೆ ನೀಡಲಾಗುವ 8 ಕೋಟಿ ರೂ. ಅನ್ನು ಒಟ್ಟು ಹರಾಜು ಮೊತ್ತದಿಂದ ಕಡಿತ ಮಾಡಲಾಗುತ್ತದೆ. ಅದರಂತೆ ಐಪಿಎಲ್ ಮೆಗಾ ಹರಾಜಿಗೂ ಮುನ್ನ 120 ಕೋಟಿ ರೂ. ನಿಂದ 8 ಕೋಟಿ ರೂ. ಕಡಿಮೆಯಾಗಲಿದ್ದು, ಇನ್ನುಳಿದ 112 ಕೋಟಿ ರೂ. ನೊಂದಿಗೆ ಪಂಜಾಬ್ ಕಿಂಗ್ಸ್ ಮೆಗಾ ಆಕ್ಷನ್​ನಲ್ಲಿ ಕಾಣಿಸಿಕೊಳ್ಳಲಿದೆ.