IPL 2025: RCB ಹಿಂದಿ ಖಾತೆ ವಿರುದ್ಧ ತಿರುಗಿಬಿದ್ದ ಕನ್ನಡಿಗರು

|

Updated on: Nov 27, 2024 | 10:30 AM

IPL 2025: ಐಪಿಎಲ್ ಮೆಗಾ ಹರಾಜಿನ ಮೂಲಕ ಆರ್​​ಸಿಬಿ ಫ್ರಾಂಚೈಸಿಯು ಕೇವಲ ಇಬ್ಬರು ಕನ್ನಡಿಗರನ್ನು ಮಾತ್ರ ಖರೀದಿಸಿದೆ. ಅದರಂತೆ ದೇವದತ್ ಪಡಿಕ್ಕಲ್ ಹಾಗೂ ಮನೋಜ್ ಭಾಂಡಗೆ ಆರ್​​ಸಿಬಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದಾಗ್ಯೂ ಕರ್ನಾಟಕದ ಬೇರೆ ಆಟಗಾರರಿಗೆ ಮಣೆ ಹಾಕದಿರುವ ಬಗ್ಗೆ ಆರ್​​ಸಿಬಿ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಇದೀಗ ಹಿಂದಿ ಖಾತೆ ತೆರೆಯುವ ಮೂಲಕ ಮತ್ತೊಮ್ಮೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

1 / 5
ರಾಯಲ್ ಚಾಲೆಂಜರ್ಸ್ ಬೆಂಗಳೂರು… ಇದು ಕನ್ನಡಿಗರ ಪಾಲಿಗೆ ಕೇವಲ ತಂಡವಲ್ಲ. ಅದೊಂದು ಭಾವನೆ. ಹೀಗಾಗಿಯೇ ಸೋತರೂ, ಗೆದ್ದರೂ ಕಳೆದ 17 ವರ್ಷಗಳಿಂದ ಆರ್​​ಸಿಬಿ ತಂಡವನ್ನು ಕನ್ನಡಿಗರು ಕೈ ಬಿಟ್ಟಿಲ್ಲ. ಆದರೆ ಇದೀಗ ಆರ್​​ಸಿಬಿ ಫ್ರಾಂಚೈಸಿ ತೆಗೆದುಕೊಂಡ ಒಂದು ನಿರ್ಧಾರದ ವಿರುದ್ಧ ಕರ್ನಾಟಕದ ಅಭಿಮಾನಿಗಳೇ ತಿರುಗಿ ಬಿದ್ದಿದ್ದಾರೆ.

2 / 5
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತ ಹಿಂದಿ ಖಾತೆಯನ್ನು ತೆರೆದಿದೆ. ಆರ್​ಸಿಬಿಯ ಈ ನಿರ್ಧಾರಕ್ಕೆ ಇದೀಗ ಕನ್ನಡಿಗರು ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

3 / 5
RCB ಫ್ರಾಂಚೈಸಿ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಹಿಂದಿಯನ್ನು ಬಳಸುವುದನ್ನು ನೋಡಲು ಬೇಸರವಾಗುತ್ತದೆ. ಬೆಂಗಳೂರು ಕನ್ನಡ  ಸಂಸ್ಕೃತಿ ಮತ್ತು ಭಾಷೆಯನ್ನು ಪ್ರತಿನಿಧಿಸುತ್ತದೆ. ಹೀಗಾಗಿ RCB ಕನ್ನಡ ಮತ್ತು ಇಂಗ್ಲಿಷ್​​ಗೆ ಆದ್ಯತೆ ನೀಡುವ ಮೂಲಕ ಇದನ್ನು ಗೌರವಿಸಬೇಕು ಎಂದು ವ್ಯಕ್ತಿಯೊಬ್ಬರು ಬರೆದುಕೊಂಡಿದ್ದಾರೆ. ಇನ್ನು ಮತ್ತೊಬ್ಬರು ಕರ್ನಾಟಕಕ್ಕೂ ಹಿಂದಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಆರ್​​ಸಿಬಿ ಹಿಂದಿ ಖಾತೆಯನ್ನು ಡಿಲೀಟ್ ಮಾಡಬೇಕೆಂದು ಅನೇಕರು ಆಗ್ರಹಿಸಿದ್ದಾರೆ.

4 / 5
ಇನ್ನೂ ಕೆಲವರು ಆರ್​​ಸಿಬಿ ಹಿಂದಿ ಖಾತೆಯನ್ನು ಬ್ಲಾಕ್ ಮಾಡುವಂತೆ ಅಭಿಯಾನ ಆರಂಭಿಸಿದ್ದಾರೆ. ಹಾಗೆಯೇ ಆರ್​​ಸಿಬಿ ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕೆಂದು ಕೆಲ ಕನ್ನಡಿಗರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಆರ್​​ಸಿಬಿ ಹಿಂದಿಯ ಖಾತೆಗೆ ಇದೀಗ ಆರ್​​ಸಿಬಿ ಅಭಿಮಾನಿಗಳಿಂದಲೇ ಆಕ್ರೋಶ ಮೂಡಿ ಬರುತ್ತಿದೆ.

5 / 5
ಇಲ್ಲಿ ಕನ್ನಡಿಗರು ಮುಂದಿಡುತ್ತಿರುವ ಪ್ರಶ್ನೆಯೆಂದರೆ… ಕರ್ನಾಟಕದಲ್ಲಿ ಇತರೆ ತಂಡಗಳ ಅಭಿಮಾನಿಗಳಿದ್ದಾರೆ. ಇದಾಗ್ಯೂ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್​, ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿಗಳು ಕನ್ನಡದಲ್ಲಿ ಖಾತೆ ತೆರೆದಿಲ್ಲ. ಆದರೆ ಆರ್​​ಸಿಬಿ ಫ್ರಾಂಚೈಸಿಗೇಕೆ ಈ ದರದು? ಎಂದು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಇದು ಹಿಂದಿ ಹೇರಿಕೆಯ ಮತ್ತೊಂದು ವಾಮಮಾರ್ಗ ಎಂದು ಅನೇಕರು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಒಂದು ಖಾತೆಯಿಂದ ಆರ್​ಸಿಬಿ ಫ್ರಾಂಚೈಸಿಯು ಇದೀಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.