IPL 2025: RCB ಕಲ್ಲುಪ್ಪು ಜೋಡಿ ನಿಂತರೆ ಎದುರಾಳಿ ಬೌಲರ್‌ಗಳು ಉಡೀಸ್

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್) 18ನೇ ಆವೃತ್ತಿಗಾಗಿ ಆರ್​​ಸಿಬಿ ಹೊಸ ತಂಡ ಕಟ್ಟಿದೆ. ಈ ತಂಡದಲ್ಲಿ ಇಂಗ್ಲೆಂಡ್​ನ ಸ್ಪೋಟಕ ದಾಂಡಿಗರಾದ ಲಿಯಾಮ್ ಲಿವಿಂಗ್​ಸ್ಟೋನ್ ಹಾಗೂ ಫಿಲ್ ಸಾಲ್ಟ್ ಕಾಣಿಸಿಕೊಂಡಿದ್ದಾರೆ. ಈ ಇಬ್ಬರು ಆಟಗಾರರ ಹೊಡಿಬಡಿ ಬ್ಯಾಟಿಂಗ್​​ಗೆ ಹೆಸರುವಾಸಿ. ಹೀಗಾಗಿಯೇ ಈ ಬಾರಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಿಕ್ಸ್​​ಗಳ ಸುರಿಮಳೆ ನಿರೀಕ್ಷಿಸಬಹುದು.

ಝಾಹಿರ್ ಯೂಸುಫ್
|

Updated on: Nov 27, 2024 | 1:24 PM

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಐಪಿಎಲ್ ಸೀಸನ್​-18 ಕ್ಕಾಗಿ ಬಲಿಷ್ಠ ಪಡೆಯನ್ನು ರೂಪಿಸಿದೆ. ಮೆಗಾ ಹರಾಜಿಗೂ ಮುನ್ನ ಮೂವರನ್ನು ಉಳಿಸಿಕೊಂಡಿದ್ದ ಆರ್​​ಸಿಬಿ, ಆಕ್ಷನ್​​ ಮೂಲಕ 19 ಆಟಗಾರರನ್ನು ಖರೀದಿಸಿದೆ. ಈ ಹತ್ತೊಂಬತ್ತು ಮಂದಿಯಲ್ಲಿ ಇಂಗ್ಲೆಂಡ್​​ನ ಇಬ್ಬರು ಸ್ಪೋಟಕ ದಾಂಡಿಗರು ಇರುವುದು ವಿಶೇಷ.

1 / 6
ಟಿ20 ಕ್ರಿಕೆಟ್​​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ಲಿಯಾಮ್ ಲಿವಿಂಗ್​ಸ್ಟೋನ್ ಹಾಗೂ ಫಿಲ್ ಸಾಲ್ಟ್ ಇದೀಗ ಆರ್​​​ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿಯೇ ಈ ಬಾರಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಿಕ್ಸ್​​​ಗಳ ಸುರಿಮಳೆಗೈಯ್ಯುವುದು ನಿಶ್ಚಿತ ಎನ್ನಲಾಗುತ್ತಿದೆ. ಏಕೆಂದರೆ...

2 / 6
ಇಂಗ್ಲೆಂಡ್ ಪರ 42 ಟಿ20 ಇನಿಂಗ್ಸ್ ಆಡಿರುವ ಲಿಯಾಮ್ ಲಿವಿಂಗ್​​ಸ್ಟೋನ್ 151ರ ಸ್ಟ್ರೈಕ್ ರೇಟ್​​ನಲ್ಲಿ ಬ್ಯಾಟ್ ಬೀಸಿ 583 ಎಸೆತಗಳಲ್ಲಿ 881 ರನ್ ಕಲೆಹಾಕಿದ್ದಾರೆ. ಈ ವೇಳೆ ಅವರ ಬ್ಯಾಟ್​​ನಿಂದ ಸಿಡಿದಿರುವ ಸಿಕ್ಸ್​​ಗಳ ಸಂಖ್ಯೆ 54. ಹಾಗೆಯೇ ಐಪಿಎಲ್​​ನಲ್ಲಿ 39 ಇನಿಂಗ್ಸ್ ಆಡಿರುವ ಲಿಯಾಮ್ ಲಿವಿಂಗ್​​ಸ್ಟೋನ್ 162ರ ಸ್ಟ್ರೈಕ್ ರೇಟ್​​ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಈ ವೇಳೆ ಎದುರಿಸಿದ 578 ಎಸೆತಗಳಲ್ಲಿ 939	ರನ್ ಕಲೆಹಾಕಿದ್ದಾರೆ. ಇದೇ ವೇಳೆ ಲಿಯಾಮ್ ಬ್ಯಾಟ್ನಿಂದ ಬರೋಬ್ಬರಿ 66 ಸಿಕ್ಸ್​​ಗಳು ಮೂಡಿಬಂದಿವೆ.

3 / 6
ಮತ್ತೊಂದೆಡೆ ಫಿಲ್ ಸಾಲ್ಟ್ ಕೂಡ ತೂಫಾನ್ ಬ್ಯಾಟಿಂಗ್​​ಗೆ ಹೆಸರುವಾಸಿ. ಇಂಗ್ಲೆಂಡ್​ ಪರ 35 ಇನಿಂಗ್ಸ್ ಆಡಿರುವ ಸಾಲ್ಟ್ 165ರ ಸ್ಟ್ರೈಕ್ ರೇಟ್​​ನಲ್ಲಿ 669 ಎಸೆತಗಳಲ್ಲಿ 1106 ರನ್ ಕಲೆಹಾಕಿದ್ದಾರೆ. ಈ ವೇಳೆ ಅವರ ಬ್ಯಾಟ್​​ನಿಂದ ಮೂಡಿಬಂದ ಸಿಕ್ಸ್​ಗಳ ಸಂಖ್ಯೆ 58. ಹಾಗೆಯೇ ಐಪಿಎಲ್​ನಲ್ಲಿ 21 ಇನಿಂಗ್ಸ್ ಆಡಿರುವ ಫಿಲ್ ಸಾಲ್ಟ್ 175ರ ಸ್ಟ್ರೈಕ್ ರೇಟ್​​ನಲ್ಲಿ 653 ರನ್ ಕಲೆಹಾಕಿದ್ದಾರೆ. ಈ ವೇಳೆ ಸಿಡಿಸಿದ ಸಿಕ್ಸ್​​ಗಳ ಸಂಖ್ಯೆ 34.

4 / 6
ಅಂದರೆ ಇಲ್ಲಿ ಫಿಲ್ ಸಾಲ್ಟ್ ಹಾಗೂ ಲಿಯಾಮ್ ಲಿವಿಂಗ್​​ಸ್ಟೋನ್ ಅವರ ಸ್ಟ್ರೈಕ್ ರೇಟ​ 150 ಕ್ಕಿಂತ ಹೆಚ್ಚಿದೆ. ಅದರಲ್ಲೂ ಆಡಿರುವ ಪಂದ್ಯಕ್ಕಿಂತ ಹೆಚ್ಚು ಸಿಕ್ಸ್​-ಫೋರ್​​ಗಳನ್ನು ಸಿಡಿಸಿದ್ದಾರೆ. ಹೀಗಾಗಿ ಆರ್​​ಸಿಬಿ ಪರ ಈ ಇಬ್ಬರು ಸ್ಪೋಟಕ ದಾಂಡಿಗರು ಕಣಕ್ಕಿಳಿದರೆ ಎದುರಾಳಿ ಬೌಲರ್​​​ಗಳಿಗೆ ನಡುಕು ಶುರುವಾಗುವುದು ಗ್ಯಾರಂಟಿ.

5 / 6
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್, ಲಿಯಾಮ್ ಲಿವಿಂಗ್​ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹ್ಯಾಝಲ್​ವುಡ್, ರಸಿಖ್ ಸಲಾಂ, ಸುಯೇಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ನುವಾನ್ ತುಷಾರ, ರೊಮಾರಿಯೋ ಶೆಫರ್ಡ್, ಜೇಕೊಬ್ ಬೆಥೆಲ್, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕಾರ, ದೇವದತ್​ ಪಡಿಕ್ಕಲ್, ಮೋಹಿತ್ ರಾಠಿ, ಅಭಿನಂದನ್ ಸಿಂಗ್, ಲುಂಗಿ ಎನ್​ಗಿಡಿ.

6 / 6
Follow us
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ