146 ರನ್​​ಗಳ ಗುರಿ… ಸ್ಪೋಟಕ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ಬರೆದ ಸೈಮ್ ಅಯ್ಯೂಬ್

Zimbabwe vs Pakistan: ಝಿಂಬಾಬ್ವೆ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಜಯ ಸಾಧಿಸಿದೆ. ಇದಕ್ಕೂ ಮುನ್ನ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಝಿಂಬಾಬ್ವೆ ಜಯಭೇರಿ ಬಾರಿಸಿತ್ತು.

ಝಾಹಿರ್ ಯೂಸುಫ್
|

Updated on: Nov 27, 2024 | 11:23 AM

ಬುಲವಾಯೊದಲ್ಲಿ ನಡೆದ ಝಿಂಬಾಬ್ವೆ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸಿ ಪಾಕಿಸ್ತಾನ್ ತಂಡದ ಯುವ ದಾಂಡಿಗ ಸೈಮ್ ಅಯ್ಯೂಬ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಇದುವರೆಗೆ ಯಾರಿಂದಲೂ ಸಾಧ್ಯವಾಗದ ಭರ್ಜರಿ ದಾಖಲೆ ಬರೆಯುವ ಮೂಲಕ ಎಂಬುದು ವಿಶೇಷ.

1 / 6
ಈ ಪಂದ್ಯದಲ್ಲಿ ಟಾಸ್ ಗೆದ್ದ ಮೊದಲು ಬ್ಯಾಟ್ ಮಾಡಿದ ಆತಿಥೇಯ ಝಿಂಬಾಬ್ವೆ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಸೀನ್ ವಿಲಿಯಮ್ಸ್ 31 ರನ್ ಬಾರಿಸಿದರು. ಈ ಮೂಲಕ ಝಿಂಬಾಬ್ವೆ ತಂಡವು 32.3 ಓವರ್​ಗಳಲ್ಲಿ 145 ರನ್​​ಗಳಿಸಿ ಆಲೌಟ್ ಆಯಿತು.

2 / 6
146 ರನ್​​ಗಳ ಸುಲಭ ಗುರಿ ಪಡೆದ ಪಾಕಿಸ್ತಾನ್ ತಂಡಕ್ಕೆ ಯುವ ಎಡಗೈ ದಾಂಡಿಗ ಸೈಮ್ ಅಯ್ಯೂಬ್ ಹಾಗೂ ಅಬ್ದುಲ್ಲಾ ಶಫೀಕ್ ಉತ್ತಮ ಆರಂಭ ಒದಗಿಸಿದ್ದರು. ಅದರಲ್ಲೂ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​​ಗೆ ಒತ್ತು ನೀಡಿದ ಸೈಮ್ ಕೇವಲ 53 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲದೆ 62 ಎಸೆತಗಳಲ್ಲಿ 17 ಫೋರ್​ ಹಾಗೂ 3 ಸಿಕ್ಸ್​ಗಳೊಂದಿಗೆ ಅಜೇಯ 113 ರನ್ ಬಾರಿಸಿ 18.2 ಓವರ್​​​ಗಳಲ್ಲಿ ತಂಡವನ್ನು ಗುರಿ ತಲುಪಿಸಿದರು.

3 / 6
ಈ ಶತಕದೊಂದಿಗೆ ಸೈಮ್ ಅಯ್ಯೂಬ್ ಏಕದಿನ ಕ್ರಿಕೆಟ್​​ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಅಂದರೆ ಅತೀ ಕಡಿಮೆ ರನ್​​​​ ಚೇಸ್ ವೇಳೆ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಇಂತಹದೊಂದು ದಾಖಲೆ ಜಾರ್ಜ್​ ಮುನ್ಸಿ ಹೆಸರಿನಲ್ಲಿತ್ತು.

4 / 6
2023ರ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ನಮೀಬಿಯಾ ನೀಡಿದ 157 ರನ್​​ಗನ್ನು ಬೆನ್ನತ್ತಿದ ಸ್ಕಾಟ್ಲೆಂಡ್ ಪರ ಜಾರ್ಜ್​ ಮುನ್ಸಿ ಶತಕ ಸಿಡಿಸಿದ್ದರು. ಇದೀಗ ಈ ದಾಖಲೆಯನ್ನು ಸೈಮ್ ಅಯ್ಯೂಬ್ ಮುರಿದಿದ್ದಾರೆ.

5 / 6
ಅದರಲ್ಲೂ 150 ಕ್ಕಿಂತ ಕಡಿಮೆ ಸ್ಕೋರ್ ಚೇಸ್ ವೇಳೆ ಶತಕ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯ್ನು ಸೈಮ್ ಅಯ್ಯೂಬ್ ತಮ್ಮದಾಗಿಸಿಕೊಂಡಿದ್ದಾರೆ. ವಿಶೇಷ ಎಂದರೆ ಇದು ಪಾಕ್ ಯುವ ದಾಂಡಿಗನ ಮೊದಲ ಏಕದಿನ ಶತಕ. ಇದೀಗ ಚೊಚ್ಚಲ ಸೆಂಚುರಿಯೊಂದಿಗೆ ಸೈಮ್ ಅಯ್ಯೂಬ್ ವಿಶೇಷ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿರುವುದು ವಿಶೇಷ.

6 / 6
Follow us