IPL 2025: RCB ಯಲ್ಲಿ ಇಬ್ಬರು, DC ಯಲ್ಲಿ ಮೂವರು ಕನ್ನಡಿಗರು..!

|

Updated on: Nov 26, 2024 | 1:54 PM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರ ಮೆಗಾ ಹರಾಜಿನಲ್ಲಿ ಕರ್ನಾಟಕದ 24 ಆಟಗಾರರು ಕಾಣಿಸಿಕೊಂಡಿದ್ದರು. ಇವರಲ್ಲಿ ಆರ್​​ಸಿಬಿ ಫ್ರಾಂಚೈಸಿಯು ಕೇವಲ ಇಬ್ಬರನ್ನು ಮಾತ್ರ ಖರೀದಿಸಿದೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ಮೂವರನ್ನು ಖರೀದಿಸಿ ಒಂದು ಹೆಜ್ಜೆ ಮುಂದೆ ಹೋಗಿರುವುದು ವಿಶೇಷ.

1 / 5
ಐಪಿಎಲ್ ಮೆಗಾ ಹರಾಜಿನ ಮೂಲಕ RCB ಫ್ರಾಂಚೈಸಿಯು 22 ಸದಸ್ಯರ ಬಲಿಷ್ಠ ಬಳಗವನ್ನು ರೂಪಿಸಿದೆ. ಈ ಬಳಗದಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುವುದು ಕೇವಲ ಇಬ್ಬರು ಮಾತ್ರ ಎಂಬುದೇ ಅಚ್ಚರಿ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕರ್ನಾಟಕದ ಯುವ ಪ್ರತಿಭೆಗಳನ್ನು ನಿರ್ಲಕ್ಷಿಸಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ.

2 / 5
ಏಕೆಂದರೆ ಆರ್​​ಸಿಬಿ ಈ ಬಾರಿ ಖರೀದಿಸಿರುವುದು ಮಾಜಿ ಆಟಗಾರರನ್ನು ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ಈ ಹಿಂದೆ ಆರ್​​ಸಿಬಿ ಪರ ಆಡಿದ್ದ ದೇವದತ್ ಪಡಿಕ್ಕಲ್​ ಅವರನ್ನು ಮತ್ತೆ ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಹಾಗೆಯೇ ಕಳೆದ ಎರಡು ಸೀಸನ್​​ಗಳಿಂದ ಆರ್​ಸಿಬಿ ಬಳಗದಲ್ಲಿದ್ದ ಮನೋಜ್ ಭಾಂಡಗೆಯನ್ನು ಮತ್ತೆ ಖರೀದಿಸಿದ್ದಾರೆ.

3 / 5
ಅದರಂತೆ ಐಪಿಎಲ್​ 2025 ರಲ್ಲಿ ಆರ್​​ಸಿಬಿ ಪಡೆಯ ಕನ್ನಡಿಗರಾಗಿ ದೇವದತ್ ಪಡಿಕ್ಕಲ್ ಹಾಗೂ ಮನೋಜ್ ಭಾಂಡಗೆ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ಇಂಟ್ರೆಸ್ಟಿಗ್ ವಿಷಯ ಎಂದರೆ ಆರ್​​ಸಿಬಿಗಿಂತ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಕನ್ನಡಿಗರಿಗೆ ಮಣೆ ಹಾಕಿರುವುದು.

4 / 5
ಅಂದರೆ ಡೆಲ್ಲಿ ಕ್ಯಾಪಿಟಲ್ಸ್ ರೂಪಿಸಿರುವ 23 ಆಟಗಾರರ ಬಳಗದಲ್ಲಿ ಮೂವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಅದರಂತೆ ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕೆಎಲ್ ರಾಹುಲ್, ಕರುಣ್ ನಾಯರ್ ಹಾಗೂ ಮನ್ವಂತ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ.

5 / 5
ಇತ್ತ ಐಪಿಎಲ್ ಮೆಗಾ ಹರಾಜಿನಲ್ಲಿ ಕರ್ನಾಟಕದ 24 ಆಟಗಾರರು ಕಾಣಿಸಿಕೊಂಡಿದ್ದರೂ, ಆರ್​ಸಿಬಿ ಫ್ರಾಂಚೈಸಿ ಸ್ಥಳೀಯ ಆಟಗಾರರನ್ನು ನಿರ್ಲಕ್ಷಿಸಿರುವುದು ಇದೀಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಕೆಎಲ್ ರಾಹುಲ್​ನಂತಹ ಆಟಗಾರನಿಗಾಗಿ ಬಿಡ್ಡಿಂಗ್​ನಲ್ಲಿ ಪೈಪೋಟಿ ನೀಡಿದಿರುವ ಬಗ್ಗೆ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಇವೆಲ್ಲದರ ನಡುವೆ ಬಲಿಷ್ಠ ಪಡೆಯನ್ನು ರೂಪಿಸಿರುವ ಆರ್​​ಸಿಬಿ ಈ ಬಾರಿಯಾದರೂ ಕಪ್ ಗೆಲ್ಲಲಿದೆಯಾ ಕಾದು ನೋಡಬೇಕಿದೆ.