IPL 2025: ಅಣ್ಣ ಅನ್​ಸೋಲ್ಡ್​, ತಮ್ಮನಿಗೆ ಖುಲಾಯಿಸಿದ ಅದೃಷ್ಟ

IPL 2025 Sarfaraz Khan: ಸರ್ಫರಾಝ್ ಖಾನ್ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದಾರೆ. ಈ ವೇಳೆ 37 ಇನಿಂಗ್ಸ್​​ಗಳಲ್ಲಿ ಬ್ಯಾಟ್ ಬೀಸಿರುವ ಅವರು ಕಲೆಹಾಕಿರುವುದು ಕೇವಲ 585 ರನ್​ಗಳಿಸಲಷ್ಟೇ.

ಝಾಹಿರ್ ಯೂಸುಫ್
|

Updated on: Nov 26, 2024 | 10:54 AM

ಇಂಡಿಯನ್ ಪ್ರೀಮಿಯರ್ ಲೀಗ್​ (IPL 2025) ಸೀಸನ್-18ರ ಮೆಗಾ ಹರಾಜಿನಲ್ಲಿ ಸರ್ಫರಾಝ್ ಖಾನ್ ಬಿಕರಿಯಾಗದೇ ಉಳಿದಿದ್ದಾರೆ. ಆದರೆ ಅತ್ತ ಅವರ ತಮ್ಮ ಮುಶೀರ್ ಖಾನ್​ ಚೊಚ್ಚಲ ಬಾರಿ ಐಪಿಎಲ್​​ಗೆ ಆಯ್ಕೆಯಾಗಿದ್ದಾರೆ. 2023 ರಲ್ಲಿ ಕೊನೆಯ ಬಾರಿಗೆ ಐಪಿಎಲ್​ನಲ್ಲಿ ಕಾಣಿಸಿಕೊಂಡಿದ್ದ ಸರ್ಫರಾಝ್ ಖಾನ್ ಈ ಬಾರಿ ಮತ್ತೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು.

1 / 5
ಅದರಂತೆ ಮೆಗಾ ಹರಾಜಿನಲ್ಲಿ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸರ್ಫರಾಝ್ ಖಾನ್ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ. ಇದರೊಂದಿಗೆ ಐಪಿಎಲ್​​ಗೆ ಕಂಬ್ಯಾಕ್ ಮಾಡುವ ಸರ್ಫರಾಝ್ ಅವರ ಕನಸು ಕಮರಿದೆ.

2 / 5
ಇದಾಗ್ಯೂ ಸರ್ಫರಾಝ್ ಸಹೋದರ ಮುಶೀರ್ ಖಾನ್ ಚೊಚ್ಚಲ ಬಾರಿಗೆ ಐಪಿಎಲ್​​ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಮುಶೀರ್​ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಬೇಸ್ ಪ್ರೈಸ್​ಗೆ ಖರೀದಿಸಿದೆ.

3 / 5
ಈಗಾಗಲೇ ಭಾರತ ಅಂಡರ್-19 ಹಾಗೂ ಮುಂಬೈ ತಂಡಗಳ ಪರ ಕಣಕ್ಕಿಳಿದಿರುವ ಮುಶೀರ್ ಖಾನ್ ಅತ್ಯುತ್ತಮ ಆಲ್​​ರೌಂಡರ್. ಅದರಲ್ಲೂ ಸ್ಪೋಟಕ ಬ್ಯಾಟಿಂಗ್​​​ಗೆ ಹೆಸರುವಾಸಿ. ಇದೇ ಕಾರಣದಿಂದಾಗಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಮುಶೀರ್ ಖಾನ್ ರನ್ನು ಖರೀದಿಸಿದ್ದಾರೆ.

4 / 5
ಇನ್ನು 2015 ರಲ್ಲಿ ಆರ್​ಸಿಬಿ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ್ದ ಸರ್ಫರಾಝ್ ಖಾನ್ 37 ಇನಿಂಗ್ಸ್​ ಮೂಲಕ ಕಲೆಹಾಕಿದ್ದು ಕೇವಲ 585 ರನ್​ಗಳಷ್ಟೇ. ಅದರಲ್ಲೂ 2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಸರ್ಫರಾಝ್ ಖರೀದಿಗೆ ಯಾವುದೇ ಫ್ರಾಂಚೈಸಿ ತೋರಿಲ್ಲ. ಇದಾಗ್ಯೂ ಬದಲಿ ಆಟಗಾರನಾಗಿ ಅವರು ಐಪಿಎಲ್​​ಗೆ ಎಂಟ್ರಿ ಕೊಡಲಿದ್ದಾರಾ ಕಾದು ನೋಡಬೇಕಿದೆ.

5 / 5
Follow us
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ

ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?

ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್

ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು

ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ

ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ

ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ

ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ

‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?

‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ