IPL 2025: 75 ಕೋಟಿ ರೂ. ನೀಡಿ 5 ಆಟಗಾರರನ್ನು ಉಳಿಸಿಕೊಂಡ SRH

|

Updated on: Oct 31, 2024 | 9:23 AM

IPL 2025 Retention: ಐಪಿಎಲ್​ನ ಮುಂದಿನ ಸೀಸನ್​ಗಾಗಿ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಒಟ್ಟು ಐವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಅದು ಕೂಡ 75 ಕೋಟಿ ರೂ. ನೀಡುವ ಮೂಲಕ. ಅಂದರೆ ಎಸ್​ಆರ್​ಹೆಚ್​ ಫ್ರಾಂಚೈಸಿಯು ಒಟ್ಟು ಹರಾಜು ಮೊತ್ತ 120 ಕೋಟಿ ರೂ.ನಿಂದ ಈಗಾಗಲೇ 75 ಕೋಟಿ ರೂ. ಅನ್ನು ಖರ್ಚು ಮಾಡಿದೆ.

1 / 6
ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2025) 18ನೇ ಆವೃತ್ತಿಗೂ ಮುನ್ನ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಐವರು ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ. ಈ ಐವರು ಆಟಗಾರರಿಗಾಗಿ ಎಸ್​ಆರ್​ಹೆಚ್ ಫ್ರಾಂಚೈಸಿಯು ವ್ಯಯಿಸಿರುವುದು ಬರೋಬ್ಬರಿ 75 ಕೋಟಿ ರೂ. ಎಂಬುದು ವಿಶೇಷ. ಅದರಂತೆ ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲೇ ಮುಂದುವರೆಯಲಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

2 / 6
ಹೆನ್ರಿಕ್ ಕ್ಲಾಸೆನ್: ಸೌತ್ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ಅವರನ್ನು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮೊದಲ ರಿಟೈನ್ ಆಗಿ ತಂಡದಲ್ಲೇ ಉಳಿಸಿಕೊಂಡಿದೆ. ಇದಕ್ಕಾಗಿ ಕ್ಲಾಸೆನ್ ಅವರಿಗೆ ನೀಡಿರುವ ಮೊತ್ತ ಬರೋಬ್ಬರಿ 23 ಕೋಟಿ ರೂ. ಎಂಬುದು ವಿಶೇಷ.

3 / 6
ಪ್ಯಾಟ್ ಕಮಿನ್ಸ್: ಸನ್​ರೈಸರ್ಸ್ ಹೈದರಾಬಾದ್ ತಂಡದ 2ನೇ ಆಯ್ಕೆ ಪ್ಯಾಟ್ ಕಮಿನ್ಸ್. ಆಸ್ಟ್ರೇಲಿಯಾದ ಆಲ್​ರೌಂಡರ್​ನನ್ನು ಎಸ್​ಆರ್​ಹೆಚ್ ಫ್ರಾಂಚೈಸಿಯು 18 ಕೋಟಿ ರೂ.ಗೆ ರಿಟೈನ್ ಮಾಡಿಕೊಂಡಿದೆ. ಹೀಗಾಗಿ ಮುಂದಿನ ಸೀಸನ್​ನಲ್ಲೂ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಕಮಿನ್ಸ್ ಮುನ್ನಡೆಸಲಿದ್ದಾರೆ.

4 / 6
ಅಭಿಷೇಕ್ ಶರ್ಮಾ: ಎಸ್​ಆರ್​ಹೆಚ್ ಫ್ರಾಂಚೈಸಿಯು ಯುವ ಎಡಗೈ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರನ್ನು ಸಹ ತಂಡದಲ್ಲೇ ಉಳಿಸಿಕೊಂಡಿದೆ. ಬರೋಬ್ಬರಿ 14 ಕೋಟಿ ರೂ. ನೀಡಿ ಅಭಿಷೇಕ್ ಶರ್ಮಾ ಅವರನ್ನು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ರಿಟೈನ್ ಮಾಡಿಕೊಂಡಿದೆ.

5 / 6
ಟ್ರಾವಿಸ್ ಹೆಡ್: ಸನ್​ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರನ್ನು ಬರೋಬ್ಬರಿ 14 ಕೋಟಿ ರೂ. ನೀಡಿ ತಂಡದಲ್ಲೇ ಉಳಿಸಿಕೊಂಡಿದ್ದಾರೆ. ಹೀಗಾಗಿ ಮುಂದಿನ ಸೀಸನ್ ಐಪಿಎಲ್​ನಲ್ಲೂ ಹೆಡ್-ಅಭಿಷೇಕ್ ಜೋಡಿ ಎಸ್​ಆರ್​ಹೆಚ್ ಪರ ಇನಿಂಗ್ಸ್ ಆರಂಭಿಸುವುದನ್ನು ಎದುರು ನೋಡಬಹುದು.

6 / 6
ನಿತೀಶ್ ಕುಮಾರ್ ರೆಡ್ಡಿ: ಯುವ ಆಲ್​ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು 6 ಕೋಟಿ ರೂ.ಗೆ ಉಳಿಸಿಕೊಂಡಿದ್ದು, ಈ ಮೂಲಕ ಹೈದರಾಬಾದ್ ಆಟಗಾರನನ್ನು ಮುಂದಿನ ಸೀಸನ್​ನಲ್ಲೂ ತಂಡದಲ್ಲೇ ಮುಂದುವರೆಸಲು ಎಸ್​ಆರ್​ಹೆಚ್ ಫ್ರಾಂಚೈಸಿ ನಿರ್ಧರಿಸಿದೆ.