IPL 2025: ಯಾರಾಗ್ತಾರೆ KKR ತಂಡದ ಮೆಂಟರ್?
IPL 2025: ಐಪಿಎಲ್ 2024 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಇದೀಗ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಮುಂದಿನ ಸೀಸನ್ನಲ್ಲಿ ಕೆಕೆಆರ್ ಪರ ಅವರು ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಹೊಸ ಮೆಂಟರ್ ಆಯ್ಕೆಗೆ ಕೆಕೆಆರ್ ಮುಂದಾಗಿದೆ.
1 / 5
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ರ ಆರಂಭಕ್ಕೂ ಮುನ್ನ ತಂಡಕ್ಕೆ ಹೊಸ ಮೆಂಟರ್ ಅನ್ನು ನೇಮಕ ಮಾಡಲು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಮುಂದಾಗಿದೆ. ಕಳೆದ ಸೀಸನ್ನಲ್ಲಿ ಕೆಕೆಆರ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇದೀಗ ಟೀಮ್ ಇಂಡಿಯಾ ಕೋಚ್ ಆಗಿದ್ದಾರೆ. ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಹೊಸ ಮೆಂಟರ್ ಆಯ್ಕೆಗೆ ಮುಂದಾಗಿದೆ.
2 / 5
3 / 5
ಅದರಲ್ಲೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ಆಟಗಾರನಾಗಿ ಜಾಕ್ಸ್ ಕಾಲಿಸ್ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. 2012 ಮತ್ತು 2014 ರಲ್ಲಿ ಕೆಕೆಆರ್ ತಂಡವು ಚಾಂಪಿಯನ್ ಪಟ್ಟಕ್ಕೇರುವಲ್ಲಿ ಕಾಲಿಸ್ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಕೆಲ ಪಂದ್ಯಗಳಲ್ಲಿ ಕೆಕೆಆರ್ ತಂಡವನ್ನು ಮುನ್ನಡೆಸಿದ್ದಾರೆ. ಹೀಗಾಗಿಯೇ ಜಾಕ್ಸ್ ಕಾಲಿಸ್ ಅವರನ್ನು ಮೆಂಟರ್ ಸ್ಥಾನದಲ್ಲಿ ಕೂರಿಸಲು ಕೊಲ್ಕತ್ತಾ ನೈಟ್ ರೈಡರ್ಸ್ ಆಸಕ್ತಿ ತೋರಿಸಿದೆ.
4 / 5
ಮತ್ತೊಂದೆಡೆ ಆಸ್ಟ್ರೇಲಿಯಾ ಕ್ರಿಕೆಟಿಗ ರಿಕಿ ಪಾಂಟಿಂಗ್ ಕೂಡ ಕೆಕೆಆರ್ ತಂಡದ ಮಾಜಿ ಆಟಗಾರ. 2008 ರಲ್ಲಿ ಕೆಕೆಆರ್ ಪರ ಕಣಕ್ಕಿಳಿಯುವ ಮೂಲಕ ಅವರು ಐಪಿಎಲ್ ಕೆರಿಯರ್ ಆರಂಭಿಸಿದ್ದರು. ಅಲ್ಲದೆ ಕಳೆದ ಸೀಸನ್ವರೆಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹೀಗಾಗಿ ರಿಕಿ ಪಾಟಿಂಗ್ ಅವರೊಂದಿಗೂ ಕೆಕೆಆರ್ ಫ್ರಾಂಚೈಸಿ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ.
5 / 5
ಹೀಗಾಗಿ ಐಪಿಎಲ್ 2025 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಸ್ಥಾನದಲ್ಲಿ ಜಾಕ್ಸ್ ಕಾಲಿಸ್ ಅಥವಾ ರಿಕಿ ಪಾಂಟಿಂಗ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಅತ್ತ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಮುಂದಿನ ಸೀಸನ್ನಲ್ಲಿ ಕಣಕ್ಕಿಳಿಯಲಿರುವ ಕೆಕೆಆರ್ ತಂಡವು ಹೊಸ ಮೆಂಟರ್ ಅಧೀನದಲ್ಲಿ ಹೇಗೆ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.