IPL 2024: ಭಾಗಶಃ ತಂಡಗಳ ಒತ್ತಾಯ; ಆರ್​ಸಿಬಿಗೆ ಎದುರಾಯ್ತು ಸಂಕಷ್ಟ..!

Updated on: Apr 10, 2024 | 6:07 PM

IPL 2024: ಮುಂದಿನ ವರ್ಷ ನಡೆಯಲ್ಲಿರುವ ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಳ್ಳಬಹುದಾದ ಆಟಗಾರರ ಸಂಖ್ಯೆಯನ್ನು 4 ರ ಬದಲು 8 ಕ್ಕೆ ಏರಿಸಬೇಕು ಎಂದು ಭಾಗಶಃ ಫ್ರಾಂಚೈಸಿಗಳು ಬಿಸಿಸಿಐ ಮುಂದೆ ಬೇಡಿಕೆ ಇಟ್ಟಿವೆ ಎಂದು ವರದಿಯಾಗಿದೆ.

1 / 8
ಐಪಿಎಲ್ 17ನೇ ಆವೃತ್ತಿಯ ಮೊದಲಾರ್ಧ ಮುಗಿದಿದ್ದು, ಇದೀಗ ದ್ವಿತೀಯಾರ್ಧ ಆರಂಭವಾಗಿದೆ. ಇಲ್ಲಿಯವರೆಗೆ ನಡೆದಿರುವ ಎಲ್ಲಾ ಪಂದ್ಯಗಳು ಅಭಿಮಾನಿಗಳನ್ನು ರಂಜಿಸಲು ಯಶಸ್ವಿಯಾಗಿವೆ. ಈ ನಡುವೆ ಮುಂದಿನ ಐಪಿಎಲ್ ಬಗ್ಗೆ ಚರ್ಚೆ ಶುರುವಾಗಿದ್ದು, ಮುಂದಿನ ವರ್ಷ ನಡೆಯಲ್ಲಿರುವ ಮೆಗಾ ಹರಾಜಿನ ಬಗ್ಗೆ ಬಿಗ್ ಅಪ್​ಡೇಟ್ ಹೊರಬಿದ್ದಿದೆ.

ಐಪಿಎಲ್ 17ನೇ ಆವೃತ್ತಿಯ ಮೊದಲಾರ್ಧ ಮುಗಿದಿದ್ದು, ಇದೀಗ ದ್ವಿತೀಯಾರ್ಧ ಆರಂಭವಾಗಿದೆ. ಇಲ್ಲಿಯವರೆಗೆ ನಡೆದಿರುವ ಎಲ್ಲಾ ಪಂದ್ಯಗಳು ಅಭಿಮಾನಿಗಳನ್ನು ರಂಜಿಸಲು ಯಶಸ್ವಿಯಾಗಿವೆ. ಈ ನಡುವೆ ಮುಂದಿನ ಐಪಿಎಲ್ ಬಗ್ಗೆ ಚರ್ಚೆ ಶುರುವಾಗಿದ್ದು, ಮುಂದಿನ ವರ್ಷ ನಡೆಯಲ್ಲಿರುವ ಮೆಗಾ ಹರಾಜಿನ ಬಗ್ಗೆ ಬಿಗ್ ಅಪ್​ಡೇಟ್ ಹೊರಬಿದ್ದಿದೆ.

2 / 8

ವಾಸ್ತವವಾಗಿ ಮುಂದಿನ ವರ್ಷ ಅಂದರೆ 2025 ರ ಐಪಿಎಲ್ ಆರಂಭಕ್ಕೂ ಮುನ್ನ ಮೆಗಾ ಹರಾಜು ನಡೆಯಲ್ಲಿದೆ. ಇದರರ್ಥ ಎಲ್ಲಾ ತಂಡಗಳು ಕೇವಲ 4 ಆಟಗಾರರನ್ನು ಮಾತ್ರ ತಮ್ಮಲ್ಲಿ ಉಳಿಸಿಕೊಂಡು ಮಿಕ್ಕವರೆಲ್ಲರನ್ನು ತಂಡದಿಂದ ಬಿಡುಗಡೆ ಮಾಡಬೇಕು.

3 / 8

ಹೀಗೆ ತಂಡದಿಂದ ಬಿಡುಗಡೆಯಾದ ಆಟಗಾರರು ಮತ್ತೊಮ್ಮೆ ಹರಾಜಿಗೆ ಬರಲಿದ್ದಾರೆ. ಅಲ್ಲಿ ಕಳೆದ ಆವೃತ್ತಿಗೆ ಅಧಿಕ ಮೊತ್ತ ಅಥವಾ ಕಡಿಮೆ ಮೊತ್ತ ಪಡೆಯಲ್ಲಿದ್ದಾರೆ. ಇದರೊಂದಿಗೆ ಅವರು ಹೊಸ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆದರೆ ಇದೀಗ ಭಾಗಶಃ ಪ್ರಾಂಚೈಸಿಗಳು ಬಿಸಿಸಿಐ ಮುಂದೆ ಒಂದೇ ಬೇಡಿಕೆ ಇಟ್ಟಿವೆ.

4 / 8

ಅದೆನೆಂದರೆ ಮುಂದಿನ ವರ್ಷ ನಡೆಯಲ್ಲಿರುವ ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಳ್ಳಬಹುದಾದ ಆಟಗಾರರ ಸಂಖ್ಯೆಯನ್ನು 4 ರ ಬದಲು 8 ಕ್ಕೆ ಏರಿಸಬೇಕು ಎಂದು ಭಾಗಶಃ ಫ್ರಾಂಚೈಸಿಗಳು ಬಿಸಿಸಿಐ ಮುಂದೆ ಬೇಡಿಕೆ ಇಟ್ಟಿವೆ ಎಂದು ವರದಿಯಾಗಿದೆ.

5 / 8

ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಬಿಸಿಸಿಐ ಕೂಡ ಫ್ರಾಂಚೈಸಿಗಳ ಈ ಮನವಿಗೆ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ. ಹೀಗಾಗಿ ಈಗಾಗಲೇ ಬಲಿಷ್ಠ ತಂಡವನ್ನು ಕಟ್ಟಿಕೊಂಡಿರುವ ಮುಂಬೈ, ಚೆನ್ನೈ, ಹೈದರಾಬಾದ್, ರಾಜಸ್ಥಾನ್, ಕೆಕೆಆರ್ ತಂಡಗಳು ತಮಗೆ ಬೇಕಾದ 8 ಆಟಗಾರನನ್ನು ತಮ್ಮಲ್ಲೇ ಉಳಿಸಿಕೊಳ್ಳಲಿವೆ.

6 / 8

ಮುಂಬರುವ ಹರಾಜಿನಲ್ಲಿ ಉಳಿದಂತೆ ತಮಗೆ ಬೇಕಾದ ಆಟಗಾರನನ್ನು ಖರೀದಿಸಲಿವೆ. ಈ ನಿಯಮ ಜಾರಿಗೆ ಬಂದರೆ ಕೆಲವು ತಂಡಗಳಿಗೆ ಇದು ವರವಾದರೆ ಇನ್ನು ಕೆಲವು ತಂಡಗಳಿಗೆ ಇದು ಶಾಪವಾಗಲಿದೆ. ಅದರಲ್ಲೂ ಯಾವ ವಿಭಾಗದಲ್ಲೂ ಬಲಿಷ್ಠವಾಗಿರದ ಆರ್​ಸಿಬಿ ಕಥೆ ಇನ್ನು ಹೇಳ ತೀರದಾಗುತ್ತದೆ.

7 / 8

ಮುಂಬರುವ ಮೆಗಾ ಹರಾಜಿಗೂ ಮುನ್ನ ಆರ್​ಸಿಬಿ ಕೇವಲ 2 ರಿಂದ 3 ಆಟಗಾರನನ್ನು ತನ್ನಲ್ಲಿ ಉಳಿಸಿಕೊಂಡು ಮಿಕ್ಕವರನ್ನು ತಂಡದಿಂದ ಬಿಡುಗಡೆ ಮಾಡಿ, ಆ ನಂತರ ಮೆಗಾ ಹರಾಜಿನಲ್ಲಿ ಅವಶ್ಯಕ ಆಟಗಾರರನ್ನು ಖರೀದಿಸುವ ಮೂಲಕ ಬಲಿಷ್ಠ ತಂಡವನ್ನು ಕಟ್ಟುವ ಇರಾದೆಯಲ್ಲಿತ್ತು.

8 / 8

ಆದರೀಗ 8 ಆಟಗಾರನನ್ನು ತಂಡದಲ್ಲಿ ಉಳಿಸಿಕೊಳ್ಳಬಹುದು ಎಂಬ ನಿಯಮ ಜಾರಿಗೆ ಬಂದರೆ, ಆರ್​ಸಿಬಿಗೆ ಬೇಕಾದ ಆಟಗಾರರು ಹರಾಜಿಗೆ ಬರಲು ಸಾಧ್ಯವಿಲ್ಲ. ಪ್ರಮುಖ ಆಟಗಾರನನ್ನು ಫ್ರಾಂಚೈಸಿಗಳು ತಮ್ಮಲ್ಲೇ ಉಳಿಸಿಕೊಳ್ಳುವುದರಿಂದ ಆರ್​ಸಿಬಿ ಮತ್ತೊಮ್ಮೆ ಅನಗತ್ಯ ಆಟಗಾರರ ಮೊರೆ ಹೋಗಬೇಕಾಗುತ್ತದೆ. ಇದರ ಪರಿಣಾಮವಾಗಿ ತಂಡ ಮತ್ತೆ ಕಳಪೆ ಆಟದಿಂದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

Loading...
Unable to load recommendations.
Follow Us