IPL 2025: ಪಂಜಾಬ್ ಕಿಂಗ್ಸ್ ನಾಯಕತ್ವದ ಮೇಲೆ ಕಣ್ಣು ಹಾಕಿದ ಅನ್​ಕ್ಯಾಪ್ಡ್ ಪ್ಲೇಯರ್

|

Updated on: Nov 17, 2024 | 10:36 PM

IPL 2025: ನಾಯಕನಾಗುವ ಸಾಮರ್ಥ್ಯ ನನಗಿದೆ. ತಂಡಕ್ಕೆ ಚಾಂಪಿಯನ್‌ಶಿಪ್ ಗೆಲ್ಲಲು ನಾನು ಸಹಾಯ ಮಾಡಬಲ್ಲೆ. ಪಂಜಾಬ್ ತಂಡ ನನಗೆ ನಾಯನಾಗುವ ಅವಕಾಶ ನೀಡಿದರೆ, ನಾನು ಆ ಅವಕಾಶವನ್ನು ಬಳಸಿಕೊಳ್ಳಲು ಬಯಸುತ್ತೇನೆ. ನಾನು 5 ವರ್ಷಗಳ ಕಾಲ ಡಿವೈ ಪಾಟೀಲ್ ಟಿ20 ಪಂದ್ಯಾವಳಿಯ ನಾಯಕತ್ವ ವಹಿಸಿದ್ದೇನೆ. ಶಿಖರ್ ಧವನ್ ಮತ್ತು ದಿನೇಶ್ ಕಾರ್ತಿಕ್ ಅವರಂತಹ ಆಟಗಾರರು ಕೂಡ ನನ್ನ ನಾಯಕತ್ವದಲ್ಲಿ ಆಡಿದ್ದಾರೆ ಎಂದಿದ್ದಾರೆ.

1 / 5
ಈ ಬಾರಿ ಪಂಜಾಬ್ ಕಿಂಗ್ಸ್ ಐಪಿಎಲ್ ಮೆಗಾ ಹರಾಜಿಗೂ ಮೊದಲು ಕೇವಲ ಇಬ್ಬರು ಅನ್‌ಕ್ಯಾಪ್ಡ್ ಆಟಗಾರರನ್ನು ಮಾತ್ರ ತಂಡದಲ್ಲಿ ಉಳಿಸಿಕೊಂಡಿದೆ. ತಂಡದ ಈ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಏಕೆಂದರೆ, ತಂಡದಲ್ಲಿ ಸ್ಟಾರ್ ಆಟಗಾರರೇ ಇದ್ದರೂ ಅವರೆಲ್ಲರನ್ನು ಕೈಬಿಟ್ಟು, ಇಬ್ಬರು ಅನ್‌ಕ್ಯಾಪ್ಡ್ ಭಾರತೀಯ ಆಟಗಾರನನ್ನು ಉಳಿಸಿಕೊಳ್ಳುವ ಮಹತ್ವದ ನಿರ್ಧಾರವನ್ನು ಫ್ರಾಂಚೈಸಿ ತೆಗೆದುಕೊಂಡಿದೆ.

2 / 5
ಇನ್ನು ಪಂಜಾಬ್ ಉಳಿಸಿಕೊಂಡಿರುವ ಎರಡು ಆಟಗಾರರಲ್ಲಿ ಒಂದು ಹೆಸರು ಶಶಾಂಕ್ ಸಿಂಗ್ ಅವರದ್ದು. ಐಪಿಎಲ್ 2024 ರಲ್ಲಿ ಪಂಜಾಬ್ ಅವರನ್ನು 20 ಲಕ್ಷಕ್ಕೆ ಖರೀದಿಸಿತ್ತು. ಆದರೆ ತೆಗೆದುಕೊಂಡ ಸಂಬಳಕ್ಕಿಂತಲೂ ಅದ್ಭುತ ಪ್ರದರ್ಶನ ನೀಡಿದ್ದ ಶಶಾಂಕ್ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಪಂಜಾಬ್ ಪರ ಹಲವು ಸ್ಮರಣೀಯ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಈ ಕಾರಣಕ್ಕೆ ಪಂಜಾಬ್ ಅವರನ್ನು ಈ ಬಾರಿ 5.5 ಕೋಟಿಗೆ ಉಳಿಸಿಕೊಂಡಿದೆ.

3 / 5
ಪಂಜಾಬ್ ತಂಡದಲ್ಲಿ ಉಳಿದುಕೊಂಡ ಬಳಿಕ ನೀಡಿದ ಸಂದರ್ಶವೊಂದರಲ್ಲಿ ಮಾತನಾಡಿರುವ ಶಶಾಂಕ್, ತಾನು ಧೋನಿಯ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಆಸೆಯನ್ನು ಶಶಾಂಕ್ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಈ ಸಂದರ್ಶನದಲ್ಲಿ ಅವರು ಪಂಜಾಬ್ ತಂಡದ ನಾಯಕನಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

4 / 5
ಈ ಬಗ್ಗೆ ಮಾತನಾಡಿರುವ ಅವರು, ನಾಯಕನಾಗುವ ಸಾಮರ್ಥ್ಯ ನನಗಿದೆ. ತಂಡಕ್ಕೆ ಚಾಂಪಿಯನ್‌ಶಿಪ್ ಗೆಲ್ಲಲು ನಾನು ಸಹಾಯ ಮಾಡಬಲ್ಲೆ. ಪಂಜಾಬ್ ತಂಡ ನನಗೆ ನಾಯನಾಗುವ ಅವಕಾಶ ನೀಡಿದರೆ, ನಾನು ಆ ಅವಕಾಶವನ್ನು ಬಳಸಿಕೊಳ್ಳಲು ಬಯಸುತ್ತೇನೆ. ನಾನು 5 ವರ್ಷಗಳ ಕಾಲ ಡಿವೈ ಪಾಟೀಲ್ ಟಿ20 ಪಂದ್ಯಾವಳಿಯ ನಾಯಕತ್ವ ವಹಿಸಿದ್ದೇನೆ. ಶಿಖರ್ ಧವನ್ ಮತ್ತು ದಿನೇಶ್ ಕಾರ್ತಿಕ್ ಅವರಂತಹ ಆಟಗಾರರು ಕೂಡ ನನ್ನ ನಾಯಕತ್ವದಲ್ಲಿ ಆಡಿದ್ದಾರೆ ಎಂದಿದ್ದಾರೆ.

5 / 5
ಇನ್ನು ತಂಡದಲ್ಲಿ ಉಳಿದುಕೊಂಡಿರುವ ಬಗ್ಗೆ ಮಾತನಾಡಿದ ಅವರು, ಕಳೆದ ಬಾರಿಯೂ ನನಗೆ ಯಾರೂ ಬಿಡ್ ಮಾಡಿರಲಿಲ್ಲ. ಹೀಗಾಗಿ ಪಂಜಾಬ್ ತಂಡ ನನ್ನನ್ನು ಉಳಿಸಿಕೊಳ್ಳಲು ಎಂದು ಪೋಷಕರು ತುಂಬಾ ಚಿಂತಿತರಾಗಿದ್ದರು. ಆದರೆ ನನ್ನನ್ನು ತಂಡದಲ್ಲಿ ಉಳಿಸಿಕೊಂಡ ಸುದ್ದಿ ಬಂದಾಗ ಅವರು ನೆಮ್ಮದಿಯ ನಿಟ್ಟುಸಿರು ಬಿಟ್ಟರು ಎಂದಿದ್ದಾರೆ.