IPL 2025: ಕಿಲ್ಲರ್ ಮಿಲ್ಲರ್​ನ ಖರೀದಿಸಲು RCBಗೆ ಎಬಿಡಿ ಸಲಹೆ

IPL 2025 Mega Auction: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್​ಸಿಬಿ ಮೂವರನ್ನು ರಿಟೈನ್ ಮಾಡಿಕೊಂಡಿದೆ. ಅದರಂತೆ ಇದೀಗ ತಂಡದಲ್ಲಿ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಹಾಗೂ ಯಶ್ ದಯಾಳ್ ಉಳಿದುಕೊಂಡಿದ್ದಾರೆ. ಇನ್ನು ಮೆಗಾ ಹರಾಜಿನ ಮೂಲಕ ಆರ್​ಸಿಬಿ 22 ಆಟಗಾರರನ್ನು ಖರೀದಿಸಬಹುದು.

ಝಾಹಿರ್ ಯೂಸುಫ್
|

Updated on: Nov 18, 2024 | 7:58 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ಮೆಗಾ ಹರಾಜಿಗೆ ಇನ್ನು ಕೆಲವೇ ದಿನಗಳು ಮಾತ್ರ ಉಳಿದಿವೆ. ಈ ಹರಾಜಿಗಾಗಿ ಎಲ್ಲಾ ಫ್ರಾಂಚೈಸಿಗಳು ಇದೀಗ ಭರ್ಜರಿ ಪ್ಲ್ಯಾನ್​ಗಳನ್ನು ರೂಪಿಸುತ್ತಿದೆ. ಈ ಪ್ಲ್ಯಾನ್​ಗಳ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಯಾರನ್ನು ಖರೀದಿಸಬೇಕೆಂದು ಮಾಜಿ ಆಟಗಾರ ಎಬಿಡಿ ಡಿವಿಲಿಯರ್ಸ್ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.

1 / 5
ಪ್ರಸ್ತುತ ಆರ್​ಸಿಬಿ ತಂಡಕ್ಕೆ ಫಿನಿಶರ್ ಒಬ್ಬರ ಅಗತ್ಯವಿದೆ. ಹೀಗಾಗಿ 6ನೇ ಕ್ರಮಾಂಕಕ್ಕಾಗಿ ಸೌತ್ ಆಫ್ರಿಕಾದ ಸ್ಪೋಟಕ ದಾಂಡಿಗ ಡೇವಿಡ್ ಮಿಲ್ಲರ್ ಅವರನ್ನು ಖರೀದಿಸಬೇಕು. ಆರ್‌ಸಿಬಿ ಅವರನ್ನು ಹರಾಜಿನಲ್ಲಿ ಖರೀದಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಮಿಲ್ಲರ್ ಆಗಮನದಿಂದಾಗಿ ಆರ್​ಸಿಬಿ ತಂಡವು ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಹೇಳಿದ್ದಾರೆ.

2 / 5
ಡೇವಿಡ್ ಮಿಲ್ಲರ್ ಕಳೆದ ಸೀಸನ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದಿದ್ದರು. ಅಲ್ಲದೆ ಇದುವರೆಗೆ 130 ಪಂದ್ಯಗಳನ್ನಾಡಿರುವ ಅವರು 36.55 ರ ಸರಾಸರಿಯಲ್ಲಿ 2924 ರನ್ ಗಳಿಸಿದ್ದಾರೆ. ಇದರಲ್ಲಿ 13 ಅರ್ಧ ಶತಕ ಮತ್ತು 1 ಶತಕವನ್ನು ಗಳಿಸಿದ್ದಾರೆ. ಇನ್ನು 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೆಂಚುರಿ ಸಿಡಿಸಿದ್ದರು.

3 / 5
ಇದೀಗ ಮೆಗಾ ಹರಾಜಿನಲ್ಲಿರುವ ಕಿಲ್ಲರ್ ಮಿಲ್ಲರ್ ಖ್ಯಾತಿಯ ಸೌತ್ ಆಫ್ರಿಕಾ ಫಿನಿಶರ್ ಅನ್ನು ಆರ್​ಸಿಬಿ ತಂಡ ಖರೀದಿಸುವುದು ಉತ್ತಮ. ಈ ಮೂಲಕ ಬ್ಯಾಟಿಂಗ್ ಲೈನಪ್​ ಅನ್ನು ಮತ್ತಷ್ಟು ಬಲಿಷ್ಠಗೊಳಿಸಬಹುದು ಎಂದು ಎಬಿ ಡಿವಿಲಿಯರ್ಸ್ ಸಲಹೆ ನೀಡಿದ್ದಾರೆ. ಈ ಸಲಹೆಯನ್ನು ಆರ್​ಸಿಬಿ ಗಂಭೀರವಾಗಿ ಪರಿಗಣನಿಸಲಿದೆಯಾ ಎಂಬುದು ಈ ಬಾರಿಯ ಮೆಗಾ ಹರಾಜಿನಿಂದ ತಿಳಿದು ಬರಲಿದೆ.

4 / 5
ಇನ್ನು ಮೆಗಾ ಹರಾಜಿಗೂ ಮುನ್ನ ಆರ್​ಸಿಬಿ ಫ್ರಾಂಚೈಸಿ ಒಟ್ಟು ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಇಲ್ಲಿ ವಿರಾಟ್ ಕೊಹ್ಲಿಯನ್ನು 21 ಕೋಟಿ ರೂ. ನೀಡಿ ಉಳಿಸಿಕೊಂಡರೆ, ರಜತ್ ಪಾಟಿದಾರ್​ಗೆ 11 ಕೋಟಿ ರೂ. ನೀಡಲಾಗಿದೆ. ಹಾಗೆಯೇ ಯಶ್ ದಯಾಳ್ 5 ಕೋಟಿ ರೂ.ಗೆ ರಿಟೈನ್ ಆಗಿದ್ದಾರೆ. ಅಂದರೆ ಆರ್​ಸಿಬಿ ಫ್ರಾಂಚೈಸಿಯು ಮೂವರು ಆಟಗಾರರನ್ನು ಉಳಿಸಿಕೊಳ್ಳಲು 37 ಕೋಟಿ ರೂ. ಖರ್ಚು ಮಾಡಿದೆ. ಇನ್ನುಳಿದ 83 ಕೋಟಿ ರೂ. ನಲ್ಲಿ 22 ಆಟಗಾರರನ್ನು ಖರೀದಿಸಬಹುದು.

5 / 5
Follow us