
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಹರಾಜು ಶುರುವಾಗಿದೆ. ಮೊದಲ ಸುತ್ತಿನಲ್ಲಿ ಒಟ್ಟು 6 ಆಟಗಾರರಿಗಾಗಿ ಬಿಡ್ಡಿಂಗ್ ನಡೆದಿದ್ದು, ಇವರಲ್ಲಿ ಕೇವಲ ಇಬ್ಬರು ಮಾತ್ರ ಬಿಕರಿಯಾಗಿದ್ದಾರೆ. ಇನ್ನುಳಿದ ನಾಲ್ವರು ಮೊದಲ ಸುತ್ತಿನಲ್ಲಿ ಅನ್ಸೋಲ್ಡ್ ಆಗಿ ಉಳಿದಿದ್ದಾರೆ. ಅದರಂತೆ ಮೊದಲ ಸುತ್ತಿನಲ್ಲಿ ಸೋಲ್ಡ್ ಹಾಗೂ ಅನ್ಸೋಲ್ಡ್ ಆದ 6 ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

ಡೆವೊನ್ ಕಾನ್ವೆ: ನ್ಯೂಝಿಲೆಂಡ್ ತಂಡದ ಎಡಗೈ ದಾಂಡಿಗ ಡೆವೊನ್ ಕಾನ್ವೆ ಕಳೆದ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರು. ಈ ಬಾರಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಕಾನ್ವೆಯನ್ನು ಸಹ ಯಾವುದೇ ಮೊದಲ ಸುತ್ತಿನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸಿಲ್ಲ.

ಜೇಕ್ ಫ್ರೇಸರ್ ಮೆಕ್ಗುರ್ಕ್: ಆಸ್ಟ್ರೇಲಿಯಾದ ಯುವ ಸ್ಫೋಟಕ ದಾಂಡಿಗ ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದರು. ಈ ಬಾರಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಜೇಕ್ ಪ್ರೇಸರ್ನನ್ನು ಮೊದಲ ಸುತ್ತಿನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸಿಲ್ಲ.

ಡೇವಿಡ್ ಮಿಲ್ಲರ್: ಸೌತ್ ಆಫ್ರಿಕಾ ತಂಡದ ಸ್ಫೋಟಕ ದಾಂಡಿಗ ಡೇವಿಡ್ ಮಿಲ್ಲರ್ ಐಪಿಎಲ್ 2025 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕಣಕ್ಕಿಳಿದಿದ್ದರು. ಈ ಬಾರಿ 2 ಕೋಟಿ ರೂ. ಆಕ್ಷನ್ ಪ್ರೈಸ್ ಘೋಷಿಸಿದ್ದ ಮಿಲ್ಲರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮೂಲ ಬೆಲೆಗೆ ಖರೀದಿಸಿದೆ.

ಪೃಥ್ವಿ ಶಾ: ಟೀಮ್ ಇಂಡಿಯಾ ದಾಂಡಿಗ ಪೃಥ್ವಿ ಶಾ ಕಳೆದ ಸೀಸನ್ನಲ್ಲಿ ಬಿಕರಿಯಾಗದೇ ಉಳಿದಿದ್ದರು. ಈ ಬಾರಿ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಪೃಥ್ವಿ ಶಾ ಅವರನ್ನು ಮೊದಲ ಸುತ್ತಿನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸಿಲ್ಲ.

ಕ್ಯಾಮರೋನ್ ಗ್ರೀನ್: ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಇತ್ತ ಗ್ರೀನ್ ಖರೀದಿಗೆ ಕೆಕೆಆರ್ ಹಾಗೂ ಸಿಎಸ್ಕೆ ನಡುವೆ ಭರ್ಜರಿ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಕೆಕೆಆರ್ ಬರೋಬ್ಬರಿ 25.20 ಕೋಟಿ ರೂ.ಗೆ ಖರೀದಿಸಿದೆ.

ಸರ್ಫರಾಝ್ ಖಾನ್: ಭಾರತದ ಬಲಗೈ ದಾಂಡಿಗ ಸರ್ಫರಾಝ್ ಖಾನ್ ಕಳೆದ ಸೀಸನ್ನಲ್ಲಿ ಅನ್ಸೋಲ್ಡ್ ಆಗಿದ್ದರು. ಆದರೆ ಈ ಬಾರಿ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸರ್ಫರಾಝ್ ಅವರನ್ನು ಸಹ ಮೊದಲ ಸುತ್ತಿನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸಿಲ್ಲ.
Published On - 3:03 pm, Tue, 16 December 25