IPL 2026: ಡೆಲ್ಲಿ ತಂಡದ ನಾಯಕತ್ವದಿಂದ ಅಕ್ಷರ್​ ಪಟೇಲ್​ ಔಟ್; ಕನ್ನಡಿಗನಿಗೆ ನಾಯಕತ್ವ ಪಟ್ಟ

Updated on: Dec 22, 2025 | 7:17 PM

Delhi Capitals IPL 2026: ಡೆಲ್ಲಿ ಕ್ಯಾಪಿಟಲ್ಸ್ 2026ರ ಐಪಿಎಲ್‌ಗೆ ನಾಯಕತ್ವ ಬದಲಾವಣೆ ಮಾಡುತ್ತಿದೆ. ಅಕ್ಷರ್ ಪಟೇಲ್ ಬದಲು ಕೆಎಲ್ ರಾಹುಲ್ ನಾಯಕರಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಅಚ್ಚರಿಯೆಂದರೆ, ಡಿಸಿ ನಾಯಕತ್ವ ಕಳೆದುಕೊಂಡ ಅಕ್ಷರ್, ಐಸಿಸಿ ಟಿ20 ವಿಶ್ವಕಪ್ 2026ಕ್ಕೆ ಟೀಂ ಇಂಡಿಯಾದ ಉಪನಾಯಕರಾಗಿ ಬಡ್ತಿ ಪಡೆದಿದ್ದಾರೆ. ಅವರ ಸ್ಥಿರ ಪ್ರದರ್ಶನದಿಂದಾಗಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.

1 / 6
2026 ರ ಐಪಿಎಲ್​ಗಾಗಿ ಸಿದ್ಧತೆಗಳು ಈಗಾಗಗಲೇ ಆರಂಭವಾಗಿವೆ. ಅದರಂತೆ ಕೆಲವೇ ದಿನಗಳ ಹಿಂದೆ ನಡೆದ ಮಿನಿ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸುವ ಮೂಲಕ ತಮ್ಮ ತಮ್ಮ ತಂಡಗಳನ್ನು ಬಲಿಷ್ಠಗೊಳಿಸಿವೆ. ಏತನ್ಮಧ್ಯೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ನಾಯಕತ್ವ ಬದಲಾವಣೆಯಾಗುತ್ತಿದೆ ಎಂದು ವರದಿಯಾಗಿದೆ.

2 / 6
ಮಾಧ್ಯಮ ವರದಿಗಳ ಪ್ರಕಾರ ಡೆಲ್ಲಿ ಫ್ರಾಂಚೈಸಿ, ಸ್ಟಾರ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿದೆ. 2025 ರ ಐಪಿಎಲ್ ಆವೃತ್ತಿಯಲ್ಲಿ ಅಕ್ಷರ್ ತಂಡದ ನಾಯಕರಾಗಿದ್ದರು, ಆದರೆ ಈ ಆವೃತ್ತಿಯಲ್ಲಿ ಅವರು ಆಟಗಾರನಾಗಿ ಮಾತ್ರ ಆಡಲಿದ್ದಾರೆ. ಇದರ ಜೊತೆಗೆ ಅಕ್ಷರ್ ಬದಲಿಗೆ ಯಾರು ತಂಡದ ನಾಯಕತ್ವವಹಿಸಿಕೊಳ್ಳಲಿದ್ದಾರೆ ಎಂಬುದರ ಕುರಿತು ಪ್ರಮುಖ ಮಾಹಿತಿ ಹೊರಬಿದ್ದಿದೆ.

3 / 6
ವರದಿಗಳ ಪ್ರಕಾರ, ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆಎಲ್ ರಾಹುಲ್​ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನ ರೇಸ್​ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರಾಹುಲ್​ಗೆ ಈಗಾಗಲೇ ನಾಯಕತ್ವದ ಅನುಭವವಿದ್ದು, ಈ ಹಿಂದೆ ಅವರು ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್‌ ತಂಡವನ್ನು ಮುನ್ನಡೆಸಿದ್ದ ಅನುಭವವನ್ನು ಹೊಂದಿದ್ದಾರೆ. ಹೀಗಾಗಿ ರಾಹುಲ್ ಅವರನ್ನು ನಾಯಕನಾಗಿ ನೇಮಿಸಿಲು ಆಡಳಿತ ಮಂಡಳಿ ಮುಂದಾಗಿದೆ.

4 / 6
ಆದರೆ ಈ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಮಾಡಲಾಗಿಲ್ಲವಾದರೂ, ರಾಹುಲ್ ಅವರ ಹೆಸರು ಮುಂಚೂಣಿಯಲ್ಲಿದೆ. ಇದೆಲ್ಲದರ ನಡುವೆ ಡೆಲ್ಲಿ ಆಡಳಿತ ಮಂಡಳಿಯ ನಾಯಕತ್ವ ಬದಲಾವಣೆಯ ನಿರ್ಧಾರ ಕೊಂಚ ಆಶ್ಚರ್ಯವನ್ನುಂಟು ಮಾಡಿದೆ. ಏಕೆಂದರೆ ಅಕ್ಷರ್ ತಮ್ಮ ನಾಯಕತ್ವದಲ್ಲಿ ಆಡಿದ 14 ಪಂದ್ಯಗಳಲ್ಲಿ ತಂಡವನ್ನು ಏಳು ಗೆಲುವುಗಳಿಗೆ ಮುನ್ನಡೆಸಿದ್ದರು. ಆದರೆ ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ತಂಡವು ವಿಫಲವಾಯಿತು. ಹೀಗಾಗಿ ಅಕ್ಷರ್ ಅವರನ್ನು ಆಟಗಾರನಾಗಿ ಆಡಿಸಲು ಡೆಲ್ಲಿ ಮುಂದಾಗಿದೆ ಎಂದು ವರದಿಯಾಗಿದೆ.

5 / 6
ಅಚ್ಚರಿಯ ಸಂಗತಿಯೆಂದರೆ ಡೆಲ್ಲಿ ತಂಡದ ನಾಯಕತ್ವ ಕಳೆದುಕೊಳ್ಳುತ್ತಿರುವ ಅಕ್ಷರ್ ಪಟೇಲ್​ಗೆ ಟೀಂ ಇಂಡಿಯಾದಲ್ಲಿ ಬಡ್ತಿ ಸಿಕ್ಕಿದೆ. ಬಿಸಿಸಿಐ ಅಕ್ಷರ್ ಪಟೇಲ್ ಅವರನ್ನು ಐಸಿಸಿ ಟಿ20 ವಿಶ್ವಕಪ್ 2026 ಕ್ಕೆ ಉಪನಾಯಕನನ್ನಾಗಿ ನೇಮಿಸಿದೆ.

6 / 6
ಅಕ್ಷರ್ ಪಟೇಲ್ ಅವರ ಸ್ಥಿರ ಫಾರ್ಮ್ ಅನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ. ಮಾಜಿ ಉಪನಾಯಕ ಶುಭ್​ಮನ್ ಗಿಲ್ ಬದಲಿಗೆ ಅಕ್ಷರ್ ಅವರನ್ನು ಈ ಪಾತ್ರಕ್ಕೆ ನೇಮಿಸಲಾಗಿದೆ. ಅಕ್ಷರ್ ಈ ಹಿಂದೆ ಟೀಂ ಇಂಡಿಯಾ ಪರ ಈ ಪಾತ್ರವನ್ನು ನಿರ್ವಹಿಸಿದ್ದು, ಇದೀಗ ಐಪಿಎಲ್‌ನಲ್ಲಿಯೂ ಅದೇ ಪಾತ್ರವನ್ನು ನಿರ್ವಹಿಸಬಹುದು.