
ಐಪಿಎಲ್ 2026 ರ ಮಿನಿ ಹರಾಜು ಸಾಕಷ್ಟು ಅಚ್ಚರಿಗಳಿಗೆ ಸಾಕ್ಷಿಯಾಯಿತು. ಯಾವ ಸ್ಟಾರ್ ಆಟಗಾರರು ದುಬಾರಿ ಬೆಲೆಗೆ ಬಿಕರಿಯಾಗುತ್ತಾರೆ ಎಂದು ಎಲ್ಲರೂ ಊಹಿಸಿದ್ದರೂ ಆ ಆಟಗಾರರಲ್ಲಿ ಕೆಲವರು ಹರಾಜಾಗದೆ ಉಳಿದರೆ, ಇನ್ನು ಕೇವಲ ಲಕ್ಷ ರೂಗಳೊಂದಿಗೆ ಹರಾಜಿಗೆ ಬಂದಿದ್ದ ಭಾರತ ಲೋಕಲ್ ಸ್ಟಾರ್ಗಳು ಕೋಟಿ ಕೋಟಿ ಮೊತ್ತಕ್ಕೆ ಹರಾಜಾದರು. ಅಂದರೆ ಒಂದೇ ದಿನದಲ್ಲಿ ಐಪಿಎಲ್ ಅವರ ಬದುಕು ಬದಲಿಸಿತು ಎಂದರೆ ತಪ್ಪಿಲ್ಲ.

ಈ ಬಾರಿಯ ಮಿನಿ ಹರಾಜು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಅನ್‌ಕ್ಯಾಪ್ಡ್ ಆಟಗಾರರ ದಾಖಲೆಯನ್ನು ಸಹ ಮುರಿಯಿತು. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಇಬ್ಬರು ಅನ್‌ಕ್ಯಾಪ್ಡ್ ಆಟಗಾರರಿಗಾಗಿ ಕೋಟಿ ಕೋಟಿ ಖರ್ಚು ಮಾಡಿತು. ಸಿಎಸ್ಕೆಯಂತೆಯೇ ಇತರ ಫ್ರಾಂಚೈಸಿಗಳು ಕೂಡ ಅನ್‌ಕ್ಯಾಪ್ಡ್ ಆಟಗಾರರಿಗೆ ಕೋಟಿ ಕೋಟಿ ಖರ್ಚು ಮಾಡಿತು. ಹಾಗೆ ಕೋಟಿ ಬೆಲೆಗೆ ಮಾರಾಟವಾದ ಅನ್‌ಕ್ಯಾಪ್ಡ್ ಆಟಗಾರರು ಯಾರು ಎಂಬುದರ ಪಟ್ಟಿ ಇಲ್ಲಿದೆ.

ಭಾರತೀಯ ದೇಶೀಯ ಕ್ರಿಕೆಟ್‌ನ ಇಬ್ಬರು ಹೊಸ ಮುಖಗಳಾದ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 14.20 ಕೋಟಿ ರೂ.ಗೆ ಖರೀದಿಸಿತು. ಇದರೊಂದಿಗೆ, ಇಬ್ಬರೂ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಆಟಗಾರರಾಗಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಪ್ರಶಾಂತ್ ವೀರ್‌ಗಾಗಿ 14 ಕೋಟಿ ರೂ.ವರೆಗೆ ಬಿಡ್ ಮಾಡಿತ್ತು, ಆದರೆ ಅಂತಿಮವಾಗಿ ಚೆನ್ನೈ ಬಿಡ್ ಗೆದ್ದಿತು.

20 ವರ್ಷದ ಪ್ರಶಾಂತ್ ಬ್ಯಾಟಿಂಗ್ ಮತ್ತು ಬಾಲ್ ಎರಡರಲ್ಲೂ ಅದ್ಭುತಗಳನ್ನು ಮಾಡಬಲ್ಲ ಆಲ್‌ರೌಂಡರ್. ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ನಂತರ ಹೈದರಾಬಾದ್ ಕಾರ್ತಿಕ್‌ಗಾಗಿ ಉತ್ತಮ ಬಿಡ್ ಮಾಡಿತು. ಆದರೆ ಚೆನ್ನೈ ಈ ಇಬ್ಬರನ್ನೂ 14.20 ಕೋಟಿ ರೂ.ಗೆ ತನ್ನ ತಂಡದಲ್ಲಿ ಸೇರಿಸಿಕೊಂಡಿತು. 19 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕಾರ್ತಿಕ್ ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ.

ಈ ಆವೃತ್ತಿಯಲ್ಲಿ ಆಕಿಬ್ ನಬಿ ದಾರ್ ಮೂರನೇ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಆಟಗಾರ. ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು 8.40 ಕೋಟಿ ರೂ.ಗೆ ಖರೀದಿಸಿತು. ಆಕಿಬ್ 34 ಟಿ20 ಪಂದ್ಯಗಳಲ್ಲಿ 43 ವಿಕೆಟ್‌ಗಳನ್ನು ಕಬಳಿಸಿದ್ದಾರೆ, ಇದರಲ್ಲಿ ಎರಡು ನಾಲ್ಕು ವಿಕೆಟ್‌ಗಳು ಸೇರಿವೆ, ಟಿ20 ಎಕಾನಮಿ ರೇಟ್ 7.74. ಅವರು 141 ರನ್‌ಗಳನ್ನು ಸಹ ಗಳಿಸಿದ್ದಾರೆ.

ಹಾಗೆಯೇ ಆಲ್‌ರೌಂಡರ್ ಮಂಗೇಶ್ ಯಾದವ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 5.20 ಕೋಟಿ ರೂ.ಗೆ ಖರೀದಿಸಿತು. ಇವರಲ್ಲದೆ, ತೇಜಸ್ವಿ ದಹಿಯಾ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 3 ಕೋಟಿ ರೂ.ಗೆ ಖರೀದಿಸಿದರೆ, ಸನ್‌ರೈಸರ್ಸ್ ಹೈದರಾಬಾದ್ ಸಲೀಲ್ ಅರೋರಾ ಅವರನ್ನು 1.5 ಕೋಟಿ ರೂ.ಗೆ ತಮ್ಮ ತಂಡದ ಭಾಗವಾಗಿಸಿಕೊಂಡಿತು.

ಲಕ್ನೋ ಸೂಪರ್ ಜೈಂಟ್ಸ್ ತಂಡ ಕೋಟ್ಯಂತರ ರೂಪಾಯಿ ಪಾವತಿಸಿ ಮೂವರು ಅನ್‌ಕ್ಯಾಪ್ಡ್ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಮುಕುಲ್ ಚೌಧರಿ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ 2.60 ಕೋಟಿ ರೂಪಾಯಿಗಳಿಗೆ, ಅಕ್ಷತ್ ರಘುವಂಶಿ ಅವರನ್ನು 2.20 ಕೋಟಿ ರೂಪಾಯಿಗಳಿಗೆ ಮತ್ತು ನಮನ್ ತಿವಾರಿ ಅವರನ್ನು 1 ಕೋಟಿ ರೂಪಾಯಿಗಳಿಗೆ ಖರೀದಿಸಿತು.