ಶಮಿಗಾಗಿ ರಾಜಸ್ಥಾನ್ ಪಟ್ಟು, ಜೈಸ್ವಾಲ್ ಮೇಲೆ ಲಕ್ನೋ ಕಣ್ಣು; ಐಪಿಎಲ್‌ಗೂ ಮುನ್ನ ಬಿಗ್ ಟ್ರೇಡ್ ಚರ್ಚೆ

Updated on: Nov 14, 2026 | 3:41 PM

ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಆಟಗಾರರ ವಿನಿಮಯ ಮಾತುಕತೆ ತೀವ್ರಗೊಂಡಿದೆ. ರಾಜಸ್ಥಾನ್ ವೇಗಿ ಮೊಹಮ್ಮದ್ ಶಮಿಗಾಗಿ, ಲಕ್ನೋ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್‌ಗಾಗಿ ಆಸಕ್ತಿ ತೋರಿಸಿವೆ. ಶಮಿ ಬದಲಿಗೆ ಸ್ಯಾಮ್ ಕರಣ್, ಸಿದ್ಧಾರ್ಥ್ ಕೂಡ ಡೀಲ್ ಭಾಗವಾಗಬಹುದು. ಈ ಮಹತ್ವದ ವಹಿವಾಟು ಅಂತಿಮ ಹಂತ ತಲುಪುವ ನಿರೀಕ್ಷೆಯಿದೆ.

1 / 5
ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನವೇ ಆಟಗಾರರ ಟ್ರೇಡಿಂಗ್ ಚಟುವಟಿಕೆಗಳು ಜೋರಾಗಿವೆ. ಈ ನಡುವೆ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವೆ ಮಹತ್ವದ ಆಟಗಾರರ ವಿನಿಮಯದ ಕುರಿತು ಮಾತುಕತೆ ನಡೆಯುತ್ತಿದೆ. ರಾಜಸ್ಥಾನ್ ರಾಯಲ್ಸ್ ತಂಡವು ಲಕ್ನೋ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿದೆ. ಮತ್ತೊಂದೆಡೆ, ಶಮಿ ಬದಲಿಗೆ ಸ್ಯಾಮ್ ಕರನ್ ಅವರನ್ನು ಲಕ್ನೋ ತಂಡಕ್ಕೆ ಕಳುಹಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ(PC-PTI).

ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನವೇ ಆಟಗಾರರ ಟ್ರೇಡಿಂಗ್ ಚಟುವಟಿಕೆಗಳು ಜೋರಾಗಿವೆ. ಈ ನಡುವೆ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವೆ ಮಹತ್ವದ ಆಟಗಾರರ ವಿನಿಮಯದ ಕುರಿತು ಮಾತುಕತೆ ನಡೆಯುತ್ತಿದೆ. ರಾಜಸ್ಥಾನ್ ರಾಯಲ್ಸ್ ತಂಡವು ಲಕ್ನೋ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿದೆ. ಮತ್ತೊಂದೆಡೆ, ಶಮಿ ಬದಲಿಗೆ ಸ್ಯಾಮ್ ಕರನ್ ಅವರನ್ನು ಲಕ್ನೋ ತಂಡಕ್ಕೆ ಕಳುಹಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ(PC-PTI).

2 / 5

ಕ್ರಿಕ್‌ಬಜ್ ವರದಿಯ ಪ್ರಕಾರ, ಲಕ್ನೋ ಸೂಪರ್ ಜೈಂಟ್ಸ್ ತಂಡದ ಎಡಗೈ ಸ್ಪಿನ್ನರ್ ಮಣಿಮಾರನ್ ಸಿದ್ಧಾರ್ಥ್ ಕೂಡ ಈ ಆಟಗಾರರ ವಿನಿಮಯದ ಭಾಗವಾಗುವ ಸಾಧ್ಯತೆಯಿದೆ. ಈ ಬಗ್ಗೆ ಸಂಬಂಧಪಟ್ಟ ಆಟಗಾರರಿಗೂ ಮಾಹಿತಿ ನೀಡಲಾಗಿದ್ದು, ಅಗತ್ಯ ದಾಖಲೆಗಳ ಪ್ರಕ್ರಿಯೆ ನಡೆಯುತ್ತಿದೆ ಎಂದು ವರದಿಯಾಗಿದೆ. ಇದರ ನಡುವೆ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು ತಮ್ಮ ತಂಡಕ್ಕೆ ಕರೆತರಲು ಲಕ್ನೋ ಸೂಪರ್ ಜೈಂಟ್ಸ್ ಆಸಕ್ತಿ ತೋರಿಸಿದೆ. ಹೀಗಾಗಿ ಈ ವಹಿವಾಟು ಮತ್ತಷ್ಟು ಕುತೂಹಲ ಮೂಡಿಸಿದೆ(PC-PTI).

3 / 5

ಟೀಂ ಇಂಡಿಯಾದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು ಖರೀದಿಸಲು ಲಕ್ನೋ ಸೂಪರ್ ಜೈಂಟ್ಸ್ ಪ್ರಯತ್ನಿಸುತ್ತಿದೆ. ಆದರೆ, ಜೈಸ್ವಾಲ್ ಅವರನ್ನು ಬಿಟ್ಟುಕೊಡುವ ವಿಚಾರದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಕೆಲವು ಬೇಡಿಕೆಗಳನ್ನು ಮುಂದಿಟ್ಟಿದೆ. ಲಕ್ನೋ ತಂಡದಿಂದ ಮತ್ತೊಬ್ಬ ಭಾರತೀಯ ಬೌಲರ್‌ನನ್ನು ಪಡೆಯಲು ರಾಜಸ್ಥಾನ್ ಆಸಕ್ತಿ ತೋರಿದೆ ಎನ್ನಲಾಗಿದೆ. ಆದರೆ, ಈ ವಿಚಾರದಲ್ಲಿ ಎರಡೂ ಫ್ರಾಂಚೈಸಿಗಳ ನಡುವೆ ಇನ್ನೂ ಅಂತಿಮ ಒಪ್ಪಂದವಾಗಿಲ್ಲ. ಜೈಸ್ವಾಲ್ ಲಕ್ನೋ ತಂಡ ಸೇರಿದರೆ, ತಂಡಕ್ಕೆ ಬಲಿಷ್ಠ ಆರಂಭಿಕ ಆಟಗಾರನ ಜೊತೆಗೆ ಭವಿಷ್ಯದ ನಾಯಕತ್ವಕ್ಕೂ ಉತ್ತಮ ಆಯ್ಕೆ ಸಿಗಲಿದೆ(PC-PTI).

4 / 5

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವೇಗದ ಬೌಲಿಂಗ್ ವಿಭಾಗವೇ ದೊಡ್ಡ ತಲೆನೋವಾಗಿದೆ. ಜೋಫ್ರಾ ಆರ್ಚರ್ ಜೊತೆಗೆ ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ, ಕ್ವೆನಾ ಮಫಾಕಾ ಮತ್ತು ನಾಂಡ್ರೆ ಬರ್ಗರ್ ಅವರಂತಹ ಬೌಲರ್‌ಗಳು ತಂಡದಲ್ಲಿದ್ದರೂ, ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಹೀಗಾಗಿ ಅನುಭವಿ ವೇಗಿ ಮೊಹಮ್ಮದ್ ಶಮಿ ತಂಡಕ್ಕೆ ಬಂದರೆ ರಾಜಸ್ಥಾನ್‌ಗೆ ಹೆಚ್ಚಿನ ಬಲ ಸಿಗಲಿದೆ ಎಂಬ ಲೆಕ್ಕಾಚಾರವಿದೆ(PC-PTI).

5 / 5

ಇತ್ತ ಸ್ಯಾಮ್ ಕರನ್ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿದರೆ, ತಂಡಕ್ಕೆ ಉತ್ತಮ ವೇಗದ ಬೌಲಿಂಗ್ ಆಲ್‌ರೌಂಡರ್ ಸಿಕ್ಕಂತಾಗುತ್ತದೆ. ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಂಡಕ್ಕೆ ನೆರವಾಗಬಲ್ಲರು. ಹೀಗಾಗಿ ಐಪಿಎಲ್ 2027ಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಈ ಆಟಗಾರರ ಟ್ರೆಡ್ ಮಾತುಕತೆ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸದ್ಯಕ್ಕೆ ಇದು ಚರ್ಚೆಯ ಹಂತದಲ್ಲಿದ್ದು, ಅಂತಿಮ ಒಪ್ಪಂದದ ಬಗ್ಗೆ ಅಧಿಕೃತ ಘೋಷಣೆ ಹೊರಬಿದ್ದಿಲ್ಲ(PC-PTI).

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us