IPL: ಐಪಿಎಲ್ ಇತಿಹಾಸದಲ್ಲಿ ಸೃಷ್ಟಿಯಾಗಿರುವ ಈ 5 ದಾಖಲೆಗಳನ್ನು ಮುರಿಯುವುದು ಕಷ್ಟಕಷ್ಟ..!

|

Updated on: Mar 10, 2023 | 12:27 PM

IPL: ಕಳೆದ 15 ವರ್ಷಗಳಲ್ಲಿ ಈ ಲೀಗ್‌ನಲ್ಲಿ ಸೃಷ್ಟಿಯಾಗಿರುವ ಕೆಲವು ದಾಖಲೆಗಳನ್ನು ಮುರಿಯವುದು ಅಸಾಧ್ಯವಾಗಿದ್ದು, ಅಂತಹ ಕೆಲವು ದಾಖಲೆಗಳ ವಿವರ ಇಲ್ಲಿದೆ.

1 / 6
16ನೇ ಆವೃತ್ತಿಯ ಐಪಿಎಲ್ ಇದೇ ತಿಂಗಳ ಅಂತ್ಯದಿಂದ ಆರಂಭವಾಗಿದೆ. ಇದಕ್ಕಾಗಿ ಸಿದ್ದತೆಗಳು ಕೂಡ ಪೂರ್ಣಗೊಂಡಿದ್ದು, ಕೆಲವು ತಂಡಗಳು ಕೂಡ ತಯಾರಿ ಆರಂಭಿಸಿವೆ. ಆದರೆ ಈ ನಡುವೆ ಕಳೆದ 15 ವರ್ಷಗಳಲ್ಲಿ ಈ ಲೀಗ್‌ನಲ್ಲಿ ಸೃಷ್ಟಿಯಾಗಿರುವ ಕೆಲವು ದಾಖಲೆಗಳನ್ನು ಮುರಿಯವುದು ಅಸಾಧ್ಯವಾಗಿದ್ದು, ಅಂತಹ ಕೆಲವು ದಾಖಲೆಗಳ ವಿವರ ಇಲ್ಲಿದೆ.

2 / 6
2016ರಲ್ಲಿಯೇ ವಿರಾಟ್ ಕೊಹ್ಲಿ ಅಸಾಧ್ಯ ದಾಖಲೆಯೊಂದು ಈ ಐಪಿಎಲ್​ನಲ್ಲಿ ನಿರ್ಮಿಸಿದ್ದರು. ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಇಬ್ಬರು ಜೊತೆಗೂಡಿ ವಿಶ್ವದಾಖಲೆಯ ಜೊತೆಯಾಟವನ್ನು ನಡೆಸಿದ್ದು, ಅದನ್ನು ಮುರಿಯುವುದು ಕಷ್ಟವೆಂತಲೇ ಹೇಳಲಾಗಿತ್ತದೆ. ಈ ಜೋಡಿಯು 14 ಮೇ 2016 ರಂದು ತನ್ನ ತವರು ಮೈದಾನವಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಎರಡನೇ ವಿಕೆಟ್‌ಗೆ 229 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡಿತ್ತು. ಇದು ಐಪಿಎಲ್‌ನಲ್ಲಿ ರನ್‌ಗಳ ವಿಷಯದಲ್ಲಿ ಐಪಿಎಲ್‌ನ ಅತಿದೊಡ್ಡ ಪಾಲುದಾರಿಕೆಯಾಗಿದೆ. ಈ ಪಂದ್ಯದಲ್ಲಿ ಕೊಹ್ಲಿ 109 ರನ್ ಬಾರಿಸಿದರೆ ಡಿವಿಲಿಯರ್ಸ್ 129 ರನ್ ಚಚ್ಚಿದ್ದರು.

3 / 6
ಯೂನಿವರ್ಸಲ್ ಬಾಲ್ ಎಂದು ಕರೆಯಲ್ಪಡುವ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದರು. ಆದರೆ, 2013ರಲ್ಲಿ ಅವರು ಆಡಿದ್ದ ಇನ್ನಿಂಗ್ಸ್‌ ಅನ್ನು ಯಾರಿಗೂ ಇದುವರೆಗು ಪುನರಾವರ್ತನೆ ಮಾಡಲು ಸಾಧ್ಯವಾಗಿಲ್ಲ. 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಪರ ಕಣಕ್ಕಿಳಿದಿದ್ದ ಗೇಲ್ ಅಜೇಯ 175 ರನ್ ಬಾರಿಸಿದ್ದರು. ಗೇಲ್ 66 ಎಸೆತಗಳಲ್ಲಿ 17 ಸಿಕ್ಸರ್‌ಗಳ ನೆರವಿನಿಂದ 175 ರನ್ ಚಚ್ಚಿದ್ದರು. ಇಲ್ಲಿಯವರೆಗೆ ಯಾವುದೇ ಬ್ಯಾಟ್ಸ್‌ಮನ್ ಈ ದಾಖಲೆಯ ಸಮೀಪ ಕೂಡ ತಲುಪಿಲ್ಲ.

4 / 6
ಐಪಿಎಲ್‌ನ ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಈಗಲೂ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 2016ರಲ್ಲಿ ಆರ್‌ಸಿಬಿ ಪರ 16 ಪಂದ್ಯಗಳನ್ನು ಆಡಿದ್ದ ಕೊಹ್ಲಿ ಒಟ್ಟು 973 ರನ್ ಗಳಿಸಿದ್ದರು. ಇದುವರೆಗೆ ಯಾವುದೇ ಆಟಗಾರರು ಒಂದು ಸೀಸನ್​ನಲ್ಲಿ 900 ರನ್ ದಾಟಲು ಸಾಧ್ಯವಾಗಿಲ್ಲ. ಈ ಸೀಸನ್​ನಲ್ಲಿ ಕೊಹ್ಲಿ ನಾಲ್ಕು ಶತಕ ಮತ್ತು ಏಳು ಅರ್ಧ ಶತಕಗಳನ್ನು ಬಾರಿಸಿದ್ದಾರೆ.

5 / 6
ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಇತಿಹಾಸದಲ್ಲಿ ಸತತ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆ ಮಾಡಿದೆ. 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸತತ 10 ಪಂದ್ಯಗಳನ್ನು ಗೆದ್ದು ದಾಖಲೆ ಬರೆದಿತ್ತು. ಅದೇ ವರ್ಷದಲ್ಲಿ ಈ ತಂಡವೂ ಚಾಂಪಿಯನ್ ಆಯಿತು.

6 / 6
ಕ್ರಿಸ್ ಗೇಲ್ ಮತ್ತು ರವೀಂದ್ರ ಜಡೇಜಾ ಐಪಿಎಲ್‌ನಲ್ಲಿ ಒಂದೇ ಓವರ್‌ನಲ್ಲಿ 37 ರನ್ ಗಳಿಸಿದ ದಾಖಲೆ ಬರೆದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವಾಗ ಕೊಚ್ಚಿ ಟಸ್ಕರ್ಸ್ ವಿರುದ್ಧ ಗೇಲ್ ಒಂದು ಓವರ್‌ನಲ್ಲಿ 37 ರನ್ ಬಾರಿಸಿದ್ದರು. ಪ್ರಶಾಂತ್ ಪರಮೇಶ್ವರನ್ ಅವರ ಓವರ್‌ನಲ್ಲಿ ಗೇಲ್ ನೋಬಾಲ್ ಸೇರಿದಂತೆ 4 ಸಿಕ್ಸರ್ ಮತ್ತು 3 ಬೌಂಡರಿ ಬಾರಿಸಿದರು. ಇನ್ನು ಐಪಿಎಲ್ 2021 ರಲ್ಲಿ ಹರ್ಷಲ್ ಪಟೇಲ್ ಅವರ ಓವರ್‌ನಲ್ಲಿ ಜಡೇಜಾ 37 ರನ್ ಬಾರಿಸಿದರು. ಈ ಓವರ್‌ನಲ್ಲಿ ಜಡೇಜಾ ಐದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. ಆ ಓವರ್‌ನ ಒಂದು ಬಾಲ್ ನೋ ಬಾಲ್ ಕೂಡ ಆಗಿತ್ತು.

Published On - 12:24 pm, Fri, 10 March 23