- Kannada News Photo gallery Cricket photos IND vs AUS 4th test usman khawaja cameron green 208 runs partnership in ahemdabad test
IND vs AUS: 43 ವರ್ಷಗಳ ನಂತರ ದಾಖಲೆ! ಭಾರತಕ್ಕೆ ದುಬಾರಿಯಾದ ದ್ವಿಶತಕದ ಜೊತೆಯಾಟ
IND vs AUS: ಉಸ್ಮಾನ್ ಖವಾಜಾ ಮತ್ತು ಕ್ಯಾಮರೂನ್ ಗ್ರೀನ್ ಐದನೇ ವಿಕೆಟ್‌ಗೆ 208 ರನ್ ಜೊತೆಯಾಟ ಹಂಚಿಕೊಳ್ಳುವುದರೊಂದಿಗೆ 43 ವರ್ಷಗಳ ನಂತರ ಭಾರತದ ನೆಲದಲ್ಲಿ ಅತಿ ದೊಡ್ಡ ಜೊತೆಯಾಟ ನಡೆಸಿದ ದಾಖಲೆ ನಿರ್ಮಿಸಿದ್ದಾರೆ.
Updated on: Mar 10, 2023 | 2:48 PM

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಮೂರು ಟೆಸ್ಟ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಕ್ರೀಸ್‌ನಲ್ಲಿ ನಿಲ್ಲುವುದು ಕೂಡ ಕಷ್ಟಕರವಾಗಿತ್ತು. ಆದರೆ ಅಹಮದಾಬಾದ್‌ನಲ್ಲಿ ಕಥೆಯೇ ಬದಲಾಗಿದೆ. ಅಹಮದಾಬಾದ್ ಟೆಸ್ಟ್‌ನಲ್ಲಿ ಆಸೀಸ್ ದಾಂಡಿಗರು ಟೀಂ ಇಂಡಿಯಾ ಬೌಲರ್ಗಳ ಮೇಲೆ ಸವಾರಿ ನಡೆಸಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕರಾದ ಉಸ್ಮಾನ್ ಖವಾಜಾ ಮತ್ತು ಕ್ಯಾಮೆರಾನ್ ಗ್ರೀನ್ ಅದ್ಭುತ ಶತಕ ಬಾರಿಸಿದಲ್ಲದೆ ದಾಖಲೆ ಕೂಡ ಮಾಡಿದ್ದಾರೆ.

ಉಸ್ಮಾನ್ ಖವಾಜಾ ಮತ್ತು ಕ್ಯಾಮರೂನ್ ಗ್ರೀನ್ ಐದನೇ ವಿಕೆಟ್‌ಗೆ 208 ರನ್ ಜೊತೆಯಾಟ ಹಂಚಿಕೊಳ್ಳುವುದರೊಂದಿಗೆ 43 ವರ್ಷಗಳ ನಂತರ ಭಾರತದ ನೆಲದಲ್ಲಿ ಅತಿ ದೊಡ್ಡ ಜೊತೆಯಾಟ ನಡೆಸಿದ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ 1979-80ರಲ್ಲಿ ಆಡಿದ ಚೆನ್ನೈ ಟೆಸ್ಟ್‌ನಲ್ಲಿ ಅಲೆನ್ ಬಾರ್ಡರ್ ಮತ್ತು ಕಿಮ್ ಹ್ಯೂಸ್ 222 ರನ್ ಜೊತೆಯಾಟವನ್ನು ಹಂಚಿಕೊಂಡಿದ್ದರು.

ವಾಸ್ತವವಾಗಿ ವಿದೇಶಿ ಬ್ಯಾಟ್ಸ್‌ಮನ್‌ಗಳು ಭಾರತದಲ್ಲಿ 200 ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವನ್ನು ಹಂಚಿಕೊಳ್ಳುವುದು ದೊಡ್ಡ ವಿಷಯ. ಕಳೆದ 10 ವರ್ಷಗಳಲ್ಲಿ ಎರಡು ಜೋಡಿಗಳು ಮಾತ್ರ ದ್ವಿಶತಕದ ಜೊತೆಯಾಟ ಆಡಿವೆ. 2021 ರಲ್ಲಿ ಇಂಗ್ಲೆಂಡ್ ತಂಡದ ಡೊಮ್ ಸಿಬ್ಲಿ ಮತ್ತು ಜೋ ರೂಟ್ ದ್ವಿಶತಕದ ಜೊತೆಯಾಟವನ್ನಾಡಿದ್ದರೆ, ಈಗ ಖವಾಜಾ ಮತ್ತು ಗ್ರೀನ್ ಈ ಜೊತೆಯಾಟವನ್ನಾಡಿದ್ದಾರೆ.

ಕ್ಯಾಮರೂನ್ ಗ್ರೀನ್ ಮತ್ತು ಉಸ್ಮಾನ್ ಖವಾಜಾ ಜೋಡಿ 208 ರನ್ ಸೇರಿಸಿದ್ದಲ್ಲದೆ ಬರೋಬ್ಬರಿ 358 ಎಸೆತಗಳನ್ನು ಎದುರಿಸಿದರು.

ಈ ದ್ವಿಶತಕದ ಜೊತೆಯಾಟದ ದಾಖಲೆಯೊಂದಿಗೆ ವೈಯಕ್ತಿಕವಾಗಿ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಕ್ಯಾಮರಾನ್ ಗ್ರೀನ್, ಬೃಹತ್ ಟಾರ್ಗೆಟ್ ಸೆಟ್ ಮಾಡುವಲ್ಲಿ ತಂಡಕ್ಕೆ ನೆರವಾದರು.



















