Smriti Mandhana: ಸತತ ನಾಲ್ಕನೇ ಸೋಲು: ಪಂದ್ಯದ ಬಳಿಕ ಶಾಕಿಂಗ್ ಹೇಳಿಕೆ ನೀಡಿದ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ

RCB vs UPW, WPL 2023: ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್​ನ ಪಂದ್ಯದಲ್ಲಿ ಆರ್​ಸಿಬಿ ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತಾದರೂ ನಂತರದಲ್ಲಿ ದಿಢೀರ್ ಕುಸಿತ ಕಂಡಿತು. ಯುಪಿ ವಾರಿಯರ್ಸ್ ವಿರುದ್ಧ ಬೌಲರ್​ಗಳಂತು ಅದೇ ಕಳಪೆ ಆಟ ಮುಂದುವರೆಸಿದರು.

Vinay Bhat
|

Updated on: Mar 11, 2023 | 9:24 AM

ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಕಳಪೆ ಪ್ರದರ್ಶನ ಮುಂದುವರೆದಿದೆ. ಇದುವರೆಗೆ ಗೆಲುವಿನ ಖಾತೆ ತೆರೆಯುವಲ್ಲಿ ವಿಫಲವಾಗಿರುವ ಆರ್​ಸಿಬಿ ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಶುಕ್ರವಾರ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲೂ ಬೆಂಗಳೂರು ಗೆಲ್ಲುವಲ್ಲಿ ಎಡವಿತು.

1 / 10
ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತಾದರೂ ನಂತರದಲ್ಲಿ ದಿಢೀರ್ ಕುಸಿತ ಕಂಡಿತು. ಬೌಲರ್​ಗಳಂತು ಅದೇ ಕಳಪೆ ಆಟ ಮುಂದುವರೆಸಿದರು. ಈ ಬಾರಿ ಕೂಡ ಎದುರಾಳಿಯ ಒಂದೂ ವಿಕೆಟ್ ಕೀಳಲು ಸಾಧ್ಯವಾಗಲಿಲ್ಲ.

2 / 10
ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ತಂಡದ ಸೋಲಿಗೆ ನಾನೇ ಕಾರಣ ಎಂದಿರುವ ಮಂಧಾನ ಇದರ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಹೇಳಿದ್ದಾರೆ.

3 / 10
ಕಳೆದ ನಾಲ್ಕು ಪಂದ್ಯಗಳಲ್ಲಿ ನಮ್ಮ ತಂಡದಿಂದ ಇದೇ ಪ್ರದರ್ಶನ ಬರುತ್ತಿದೆ. ನಾವು ಉತ್ತಮ ಆರಂಭ ಪಡೆದುಕೊಳ್ಳುತ್ತೇವೆ. ಆದರೆ, ನಂತರ ದಿಢೀರ್ ವಿಕೆಟ್​ಗಳು ಪತನಗೊಳುತ್ತವೆ. ಈ ಸೋಲಿನ ಹೊಣೆಯನ್ನು ನಾನು ತೆಗೆದುಕೊಳ್ಳುತ್ತೇನೆ. ನಮ್ಮ ಬೌಲರ್​ಗಳು ಏನಾದರು ಮಾಡಬೇಕು ಎಂದರೆ ನಾವು ಮೊದಲಿಗೆ ರನ್ ಗಳಿಸಬೇಕು. ಆದರೆ, ಅದು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

4 / 10
ಪಂದ್ಯ ಆರಂಭಕ್ಕೂ ಮುನ್ನ ಕೆಲ ಯೋಜನೆ ಹಾಕಿಕೊಂಡಿದ್ದೆವು. 7 ರಿಂದ 15 ಓವರ್ ವರೆಗೆ ಪ್ರತಿ ಓವರ್​ನಲ್ಲಿ 7 ರಿಂದ 8 ರನ್ ಹೊಡೆಯುವ ಬಗ್ಗೆ ಚರ್ಚೆಸಿದ್ದೆವು. ಆದರೆ, ಈ ಪ್ಲಾನ್ ವರ್ಕ್ ಆಗಲಿಲ್ಲ. ಇದು ಯಾವರೀತಿ ಸಾಗುತ್ತದೆ ಎಂಬುದನ್ನು ನೋಡಬೇಕಿದೆ. ತಂಡದ ಎಲ್ಲ ಆಟಗಾರ್ತಿಯರ ಜೊತೆ ಈ ಬಗ್ಗೆ ನಾನು ಮಾತನಾಡುತ್ತೇನೆ. - ಸ್ಮೃತಿ ಮಂಧಾನ.

5 / 10
ಕಳೆದ ಒಂದು ವಾರ ನಮ್ಮ ತಂಡಕ್ಕೆ ತುಂಬಾ ಕಠಿಣವಾಗಿತ್ತು. ಕೆಲಸ ಮಾಡಲು ಸಾಕಷ್ಟಿದೆ. ಕಳೆದ ವಾರ ನಿಜವಾಗಿಯೂ ಕಠಿಣವಾಗಿದೆ ಎಂದು ಒಪ್ಪಿಕೊಳ್ಳಬೇಕು. ಸಾಕಷ್ಟು ಜನ ನನ್ನ ಬಳಿ ಮಾತನಾಡಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟಿಗರಾದ ನಾವು ಈ ರೀತಿಯ ಸಂದರ್ಭವನ್ನು ಎದುರಿಸಿದ್ದೇವೆ. ಮುಂದಿನ ಪಂದ್ಯದಲ್ಲಿ ಕಮ್​ಬ್ಯಾಕ್ ಮಾಡುತ್ತೇವೆ ಎಂಬುದು ಮಂಧಾನ ಮಾತು.

6 / 10
ಈ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್​ಸಿಬಿ ಆರಂಭದಲ್ಲೇ ನಾಯಕಿ ಸ್ಮೃತಿ ಮಂಧಾನಾ (4) ವಿಕೆಟ್‌ ಕಳೆದುಕೊಂಡಿತು. ಸೋಫಿ ಡಿವೈನ್‌ 24 ಎಸೆತಗಳಲ್ಲಿ 36 ರನ್‌ ಸಿಡಿಸಿ ಕೊಂಚ ಚೇತರಿಕೆ ತಂದುಕೊಟ್ಟರು. ಅವರೊಟ್ಟಿಗೆ ಸ್ಟಾರ್ ಆಲ್‌ರೌಂಡರ್‌ ಎಲೀಸ್‌ ಪೆರಿ ಉತ್ತಮ ಜೊತೆಯಾಟ ಕಟ್ಟಿದರು.

7 / 10
ಹೆದರ್‌ ನೈಟ್‌ (8) ರನ್‌ಔಟ್‌ ಆಗಿದ್ದು ಆರ್‌ಸಿಬಿಗೆ ನುಂಗಲಾರದ ತುತ್ತಾಯಿತು. 39 ಎಸೆತಗಳಲ್ಲಿ 6 ಫೋರ್‌ ಮತ್ತು 1 ಸಿಕ್ಸರ್‌ನೊಂದಿಗೆ 52 ರನ್‌ ಸಿಡಿದ್ದ ಎಲೀಸ್‌ ಪೆರಿ ಅಂತಿಮ ಹಂತದ ವರೆಗೆ ನಿಲ್ಲಲಿಲ್ಲ. ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟರ್‌ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿದರು. ಆರ್​ಸಿಬಿ 19.3 ಓವರ್‌ಗಳಲ್ಲಿ 138 ರನ್‌ಗಳಿಗೆ ಆಲ್‌ಔಟ್‌ ಆಯಿತು.

8 / 10
ಯುಪಿ ಪರ ಸೋಫಿ ಎಕ್ಲೇಸ್ಟೋನ್‌ 3.3 ಓವರ್‌ಗಳಲ್ಲಿ ಕೇವಲ 13 ರನ್‌ ನೀಡಿ 4 ವಿಕೆಟ್‌ಗಳನ್ನು ಪಡೆದು ಯಶಸ್ವಿ ಬೌಲರ್‌ ಎನಿಸಿಕೊಂಡರು. ದೀಪ್ತಿ ಶರ್ಮಾ 3 ರಾಜೇಶ್ವರಿ ಗಾಯಕ್ವಾಡ್‌ ಒಂದು ವಿಕೆಟ್‌ ಕಿತ್ತರು.

9 / 10
ಸುಲಭ ಟಾರ್ಗೆಟ್ ಬೆನ್ನಟ್ಟಿದ ವಾರಿಯರ್ಸ್‌ ಶರವೇಗದಲ್ಲಿ ಗುರಿ ತಲುಪಿತು. ದೇವಿಕಾ ವೈದ್ಯ (ಅಜೇಯ 36) ಮತ್ತು ಅಲಿಸಾ ಹೀಲಿ (ಅಜೇಯ 96) ಆರ್‌ಸಿಬಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ 13 ಓವರ್‌ಗಳಲ್ಲೇ ಗೆಲುವು ಸಾಧಿಸುವಂತೆ ಮಾಡಿದರು. ಈ ಮೂಲಕ ಯುಪಿ 10 ವಿಕೆಟ್​ಗಳ ಅಮೋಘ ಜಯ ಸಾಧಿಸಿತು.

10 / 10
Follow us
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ

ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್