ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್‌ನ ಮೊದಲ ದಿನದಂದು, ಉಸ್ಮಾನ್ ಖವಾಜಾ ಅದ್ಭುತ ಇನ್ನಿಂಗ್ಸ್ ಆಡಿ, ತಮ್ಮ ಟೆಸ್ಟ್ ವೃತ್ತಿಜೀವನದ 14 ನೇ ಶತಕ ಬಾರಿಸಿದರು. ಇದು ಭಾರತದ ವಿರುದ್ಧ ಅವರ ವೃತ್ತಿ ಜೀವನದ ಮೊದಲ ಶತಕವಾಗಿರುವುದು ಮತ್ತಷ್ಟು ವಿಶೇಷವಾಗಿತ್ತು. ಸತತ ನಿರ್ಲಕ್ಷ್ಯದ ನಂತರ ಭಾರತದಲ್ಲಿ ಆಡುವ ಅವಕಾಶ ಸಿಕ್ಕಿದ್ದರಿಂದ ಖವಾಜಾಗೂ ಕುಡ ಈ ಶತಕ ಬಹಳ ವಿಶೇಷವಾಗಿತ್ತು.