IPL 2022: ಪಂಜಾಬ್ ಕಿಂಗ್ಸ್​ಗೆ ಕನ್ನಡಿಗನೇ ಕಿಂಗ್ ಆಗುವ ಸಾಧ್ಯತೆ..!

Edited By:

Updated on: Dec 12, 2021 | 9:33 PM

IPL 2022 Mega Auction: ಮಯಾಂಕ್ ಅಗರ್ವಾಲ್ ಟೀಮ್ ಇಂಡಿಯಾ ಟೆಸ್ಟ್ ತಂಡದ ಭಾಗವಾಗಿದ್ದಾರೆ. ಅದರಲ್ಲೂ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ದ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

1 / 9
ಐಪಿಎಲ್ ಮೆಗಾ ಹರಾಜಿಗೂ ಮುನ್ನ ಹಳೆಯ 8 ಫ್ರಾಂಚೈಸಿಗಳು ಒಟ್ಟು 27 ಆಟಗಾರರನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಪಂಜಾಬ್ ಕಿಂಗ್ಸ್ ತಂಡದಿಂದ​​ ರಿಲೀಸ್ ಮಾಡಿರುವ ಮಾಜಿ ನಾಯಕ ಕೆಎಲ್ ರಾಹುಲ್ ಕೂಡ ಇರುವುದು ವಿಶೇಷ. ಇದಾಗ್ಯೂ ಪಂಜಾಬ್ ಫ್ರಾಂಚೈಸಿಯು ಮಯಾಂಕ್ ಅಗರ್ವಾಲ್ ಹಾಗೂ ಅರ್ಷದೀಪ್ ಸಿಂಗ್​ ಅವರನ್ನು ಉಳಿಸಿಕೊಂಡಿದೆ.

ಐಪಿಎಲ್ ಮೆಗಾ ಹರಾಜಿಗೂ ಮುನ್ನ ಹಳೆಯ 8 ಫ್ರಾಂಚೈಸಿಗಳು ಒಟ್ಟು 27 ಆಟಗಾರರನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಪಂಜಾಬ್ ಕಿಂಗ್ಸ್ ತಂಡದಿಂದ​​ ರಿಲೀಸ್ ಮಾಡಿರುವ ಮಾಜಿ ನಾಯಕ ಕೆಎಲ್ ರಾಹುಲ್ ಕೂಡ ಇರುವುದು ವಿಶೇಷ. ಇದಾಗ್ಯೂ ಪಂಜಾಬ್ ಫ್ರಾಂಚೈಸಿಯು ಮಯಾಂಕ್ ಅಗರ್ವಾಲ್ ಹಾಗೂ ಅರ್ಷದೀಪ್ ಸಿಂಗ್​ ಅವರನ್ನು ಉಳಿಸಿಕೊಂಡಿದೆ.

2 / 9

ಆದರೆ ಅತ್ತ ತಂಡದ ನಾಯಕನೇ ಹೊರಬಂದಿರುವ ಕಾರಣ ಮುಂದಿನ ಸೀಸನ್​ನಲ್ಲಿ ಪಂಜಾಬ್ ತಂಡದ ನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ಮಯಾಂಕ್ ಅಗರ್ವಾಲ್.

3 / 9

ಹೌದು, ಪಂಜಾಬ್ ಕಿಂಗ್ಸ್​ ತಂಡವು ಮಯಾಂಕ್ ಅಗರ್ವಾಲ್​ ಅವರನ್ನು ಉಳಿಸಿಕೊಳ್ಳಲು ಮುಖ್ಯ ಕಾರಣ ಅತ್ಯುತ್ತಮ ಪ್ರದರ್ಶನ. ಕಳೆದ ಸೀಸನ್​ನಲ್ಲಿ ಮಯಾಂಕ್ 12 ಪಂದ್ಯಗಳಿಂದ ಕಲೆಹಾಕಿದ್ದು ಬರೋಬ್ಬರಿ 442 ರನ್​ಗಳು. ಇನ್ನು 2020ರ ಐಪಿಎಲ್​ ಸೀಸನ್​ನಲ್ಲೂ ಮಯಾಂಕ್ 424 ರನ್​ ಕಲೆಹಾಕಿದ್ದರು. ಹೀಗಾಗಿಯೇ ಮಯಾಂಕ್ ಅವರನ್ನು ಪಂಜಾಬ್ ಕಿಂಗ್ಸ್​ ಉಳಿಸಿಕೊಂಡಿದೆ.

4 / 9

ಆದರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಮಯಾಂಕ್ ಅಗರ್ವಾಲ್ ಅವರಿಗೆ ನೀಡಿರುವ ಮೊತ್ತ. ಅಂದರೆ ಕಳೆದ ಸೀಸನ್​ನಲ್ಲಿ ಮಯಾಂಕ್ ಪಡೆದಿದ್ದ ಸಂಭಾವನೆ ಕೇವಲ 1 ಕೋಟಿ ರೂ. ಆದರೆ ಈ ಬಾರಿ ಬರೋಬ್ಬರಿ 1100% ಏರಿಕೆಯಾಗಿದೆ. ಅದರಂತೆ 12 ಕೋಟಿ ರೂ. ನೀಡಿ ಪಂಜಾಬ್ ಕಿಂಗ್ಸ್​ ಮಯಾಂಕ್ ಅಗರ್ವಾಲ್ ಅವರನ್ನು ಉಳಿಸಿಕೊಂಡಿದೆ.

5 / 9

ಪಂಜಾಬ್ ಕಿಂಗ್ಸ್​ ತಂಡವು ಮಯಾಂಕ್​ ಅವರಿಗೆ ಇಷ್ಟೊಂದು ಮೊತ್ತ ನೀಡಿ ಉಳಿಸಿಕೊಳ್ಳಲು ಕಾರಣ ನಾಯಕತ್ವ ನೀಡಲು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಏಕೆಂದರೆ ಈ ಹಿಂದೆ ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಪಂಜಾಬ್ ತಂಡವನ್ನು ಮಯಾಂಕ್ ಮುನ್ನಡೆಸಿದ್ದರು. ಅಷ್ಟೇ ಅಲ್ಲದೆ ತಂಡದ ಉಪನಾಯಕರಾಗಿದ್ದ ಮಯಾಂಕ್​ ಪಂಜಾಬ್ ಫ್ರಾಂಚೈಸಿ ಹಾಗೂ ಸಿಬ್ಬಂದಿಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ.

6 / 9

ಅದರಲ್ಲೂ ಮುಖ್ಯವಾಗಿ ಪಂಜಾಬ್ ಕಿಂಗ್ಸ್​ ತಂಡದ ಕೋಚ್ ಕರ್ನಾಟಕದ ಅನಿಲ್ ಕುಂಬ್ಳೆ. ಅವರ ಸಲಹೆಯಂತೆ ಮಯಾಂಕ್ ಅಗರ್ವಾಲ್ ಅವರನ್ನು ಪಂಜಾಬ್ ಫ್ರಾಂಚೈಸಿ ಉಳಿಸಿಕೊಂಡಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಹೀಗಾಗಿ ನಾಯಕನಾಗಿ ಕುಂಬ್ಳೆ ಮಯಾಂಕ್ ಅಗರ್ವಾಲ್ ಅವರನ್ನೇ ಆಯ್ಕೆ ಮಾಡಲಿದ್ದಾರೆ ಎನ್ನಲಾಗಿದೆ.

7 / 9

ಇನ್ನು ಮಯಾಂಕ್ ಅಗರ್ವಾಲ್ ಟೀಮ್ ಇಂಡಿಯಾ ಟೆಸ್ಟ್ ತಂಡದ ಭಾಗವಾಗಿದ್ದಾರೆ. ಅದರಲ್ಲೂ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ದ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಅಂದರೆ ಮಯಾಂಕ್ ಅಗರ್ವಾಲ್ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಚಿರಪರಿಚಿತ ಹೆಸರು.

8 / 9

ಹೀಗಾಗಿ ಕೆಎಲ್ ರಾಹುಲ್​ನಿಂದ ತೆರವಾದ ಸ್ಥಾನ ಹಾಗೂ ನಾಯಕತ್ವವನ್ನು ತುಂಬಬಲ್ಲ ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಸ್ಟಾರ್ ಆಟಗಾರನೆಂದರೆ ಮಯಾಂಕ್ ಅಗರ್ವಾಲ್. ಇದೇ ಕಾರಣದಿಂದ ಬ್ರಾಂಡ್ ವಾಲ್ಯೂ ಉಳಿಸಿಕೊಳ್ಳಲು ಪಂಜಾಬ್ ಕಿಂಗ್ಸ್​ ಫ್ರಾಂಚೈಸಿ ಮಯಾಂಕ್ ಅಗರ್ವಾಲ್ ಅವರಿಗೆ ಪಟ್ಟ ಕಟ್ಟಲಿದೆ ಎಂದು ಹೇಳಲಾಗುತ್ತಿದೆ.

9 / 9

ಪಂಜಾಬ್ ಕಿಂಗ್ಸ್

Loading...
Unable to load recommendations.
Follow Us