
ಇಶಾನ್ ಕಿಶನ್ಗೆ ಈ ಬಾರಿ ದೊಡ್ಡ ಮೊತ್ತದ ಬಿಡ್ ಸಿಗುತ್ತದೆ ಎಂದು ನಿರೀಕ್ಷಿಸಲಾಗಿತ್ತು . ಈಗ ಆ ನಿರೀಕ್ಷೆ ನಿಜವಾಗಿದೆ. ಮುಂಬೈ ಇಂಡಿಯನ್ಸ್ ಇಶಾನ್ ಕಿಶನ್ಗೆ 15.5 ಕೋಟಿ ಖರ್ಚು ಮಾಡಿ ತಂಡಕ್ಕೆ ಸೇರಿಸಿಕೊಂಡಿದೆ

ದೆಹಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಈ ವರ್ಷ ಮಾರ್ಕ್ಯೂ ಆಟಗಾರರಲ್ಲಿ ಸೇರಿಸಲಾಯಿತು. ಕೋಲ್ಕತ್ತಾ ನೈಟ್ ರೈಡರ್ಸ್ ಅಯ್ಯರ್‌ಗೆ ಎರಡು ಕೋಟಿ ಮೂಲ ಬೆಲೆಯೊಂದಿಗೆ 12.25 ಕೋಟಿ ಖರ್ಚು ಮಾಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ತನ್ನ ಇತಿಹಾಸದಲ್ಲಿ ದೀಪಕ್ ಚಾಹರ್ ಮೇಲೆ ಅತಿ ದೊಡ್ಡ ಬಿಡ್ ಮಾಡಿದೆ. CSK ದೀಪಕ್ ಅವರನ್ನು ಖರೀದಿಸುವ ಮೂಲಕ ಮಹೇಂದ್ರ ಸಿಂಗ್ ಧೋನಿಗಿಂತಲೂ ಹೆಚ್ಚು ಹಣ ನೀಡಿ ಖರೀದಿಸಿದೆ. ಚಹರ್‌ಗಾಗಿ ಚೆನ್ನೈ 14 ಕೋಟಿ ಖರ್ಚು ಮಾಡಿದೆ.

ಕಳೆದ ವರ್ಷ ಪರ್ಪಲ್ ಕ್ಯಾಪ್ ಗೆದ್ದ ಹರ್ಷಲ್ ಪಟೇಲ್ ಮೇಲೆ ಹಲವು ತಂಡಗಳು ಬಿಡ್ ಮಾಡಿದವು, ಆದರೆ ಅಂತಿಮವಾಗಿ RCB ಮತ್ತೆ ತಮ್ಮ ಬೌಲರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು. ಹರ್ಷ ಪಟೇಲ್‌ಗೆ ಆರ್‌ಸಿಬಿ 10 ಕೋಟಿ 75 ಲಕ್ಷ ರೂ. ಖರ್ಚು ಮಾಡಿದೆ.

ಈ ಹರಾಜು ದೆಹಲಿ ಕ್ಯಾಪಿಟಲ್ಸ್‌ಗಾಗಿ ಆಡಿದ ಅವೇಶ್ ಖಾನ್‌ಗೆ ವಿಶೇಷವಾಗಿತ್ತು. ಮಧ್ಯಪ್ರದೇಶದ ಈ ಸ್ಟಾರ್ ಬೌಲರನ್ನು ಲಕ್ನೋ ಸೂಪರ್ ಜೈಂಟ್ಸ್ 10 ಕೋಟಿಗೆ ಖರೀದಿಸಿತು. ಜೊತೆಗೆ ಅವೇಶ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಆಟಗಾರದರು.