IPL Records: ಐಪಿಎಲ್​ನಲ್ಲಿ ವೇಗದ ಶತಕ ಸಿಡಿಸಿದ ಭಾರತೀಯ ಆಟಗಾರ ಯಾರು ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Mar 28, 2023 | 10:08 PM

IPL Fastest Centuries: ಈ ಬಾರಿ ಐಪಿಎಲ್​ ಭಾರತದಲ್ಲಿ ನಡೆಯುತ್ತಿರುವುದರಿಂದ ಭಾರತೀಯ ಆಟಗಾರರಿಂದ ಒಂದಷ್ಟು ಸ್ಪೋಟಕ ಇನಿಂಗ್ಸ್​ ನಿರೀಕ್ಷಿಸಬಹುದು. ಇದರಿಂದ ಭಾರತೀಯರ ಹೆಸರಿನಲ್ಲಿರುವ ವೇಗದ ಶತಕಗಳ ದಾಖಲೆಗಳೂ ಕೂಡ ಅಳಿಸಿ ಹೋಗಬಹುದು. ಹಾಗಿದ್ರೆ ಐಪಿಎಲ್​ನಲ್ಲಿ ಅತೀ ವೇಗದ ಶತಕ ಬಾರಿಸಿದ ಭಾರತೀಯರು ಯಾರೆಲ್ಲಾ ಎಂದು ನೋಡೋಣ...

1 / 10
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕೌಂಟ್​ಡೌನ್ ಶುರುವಾಗಿದೆ. ಮಾರ್ಚ್ 31 ರಿಂದ ಶುರುವಾಗಲಿರುವ ಈ ಬಾರಿಯ ಐಪಿಎಲ್​ನಲ್ಲೂ ಒಂದಷ್ಟು ದಾಖಲೆಗಳನ್ನು ನಿರೀಕ್ಷಿಸಬಹುದು. ಅದರಲ್ಲೂ ಐಪಿಎಲ್​ನ ಅತೀ ವೇಗದ ಶತಕದ ದಾಖಲೆಯನ್ನು ಈ ಬಾರಿಯಾದರೂ ಮುರಿಯಲಿದ್ದಾರಾ ಎಂಬುದೇ ಪ್ರಶ್ನೆ.

2 / 10
ಏಕೆಂದರೆ 2013 ರಲ್ಲಿ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಆಟಗಾರ ಕ್ರಿಸ್ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಇದಾಗಿ 10 ವರ್ಷಗಳು ಕಳೆದರೂ ಇನ್ನೂ ಕೂಡ ಈ ಸ್ಪೋಟಕ ಶತಕ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.

3 / 10
ಇತ್ತ ಈ ಬಾರಿ ಐಪಿಎಲ್​ ಭಾರತದಲ್ಲಿ ನಡೆಯುತ್ತಿರುವುದರಿಂದ ಭಾರತೀಯ ಆಟಗಾರರಿಂದ ಒಂದಷ್ಟು ಸ್ಪೋಟಕ ಇನಿಂಗ್ಸ್​ ನಿರೀಕ್ಷಿಸಬಹುದು. ಇದರಿಂದ ಭಾರತೀಯರ ಹೆಸರಿನಲ್ಲಿರುವ ವೇಗದ ಶತಕಗಳ ದಾಖಲೆಗಳೂ ಕೂಡ ಅಳಿಸಿ ಹೋಗಬಹುದು. ಹಾಗಿದ್ರೆ ಐಪಿಎಲ್​ನಲ್ಲಿ ಅತೀ ವೇಗದ ಶತಕ ಬಾರಿಸಿದ ಭಾರತೀಯರು ಯಾರೆಲ್ಲಾ ಎಂದು ನೋಡೋಣ...

4 / 10
1- ಯೂಸುಫ್ ಪಠಾಣ್: ಐಪಿಎಲ್​ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ಭಾರತೀಯ ಬ್ಯಾಟ್ಸ್​ಮನ್ ಎಂಬ ದಾಖಲೆ ಯೂಸುಫ್ ಪಠಾಣ್ ಹೆಸರಿನಲ್ಲಿದೆ. 2010 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಯೂಸುಫ್ ಪಠಾಣ್ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಇದೇ ದಾಖಲೆಯನ್ನು 2013 ರಲ್ಲಿ ಕ್ರಿಸ್ ಗೇಲ್ ಮುರಿದಿದ್ದರು.

5 / 10
2- ಮಯಾಂಕ್ ಅಗರ್ವಾಲ್: ಐಪಿಎಲ್​ನಲ್ಲಿ ವೇಗದ ಶತಕ ಬಾರಿಸಿದ ಭಾರತೀಯರ ಒಟ್ಟಿಯಲ್ಲಿ ಮಯಾಂಕ್ ಅಗರ್ವಾಲ್ 2ನೇ ಸ್ಥಾನದಲ್ಲಿದ್ದಾರೆ. 2020 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಮಯಾಂಕ್ ಅಗರ್ವಾಲ್ ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

6 / 10
3- ಮುರಳಿ ವಿಜಯ್: 2010 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್​ಕೆ ತಂಡದ ಆಟಗಾರ ಮುರಳಿ ವಿಜಯ್ ಕೇವಲ 46 ಎಸೆತಗಳಲ್ಲಿ ಶತಕ ಬಾರಿಸಿದ್ದರು.

7 / 10
4- ವಿರಾಟ್ ಕೊಹ್ಲಿ: 2016 ರಲ್ಲಿ ಆರ್​ಸಿಬಿ ಆಟಗಾರ ವಿರಾಟ್ ಕೊಹ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೇವಲ 47 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು.

8 / 10
5- ವೀರೇಂದ್ರ ಸೆಹ್ವಾಗ್: 2011 ರಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ದ ವೀರೇಂದ್ರ ಸೆಹ್ವಾಗ್ ಕೇವಲ 48 ಎಸೆತಗಳಲ್ಲಿ ಶತಕ ಬಾರಿಸಿದ್ದರು.

9 / 10
6- ವೃದ್ಧಿಮಾನ್ ಸಾಹ: 2014 ರಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರನಾಗಿದ್ದ ವೃದ್ಧಿಮಾನ್ ಸಾಹ ಕೇವಲ 49 ಎಸೆತಗಳಲ್ಲಿ ಶತಕ ಪೂರೈಸಿದ್ದರು.

10 / 10
7- ರಜತ್ ಪಾಟಿದಾರ್: 2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಪರ ಬ್ಯಾಟ್ ಬೀಸಿದ್ದ ರಜತ್ ಪಾಟಿದಾರ್ ಕೇವಲ 49 ಎಸೆತಗಳಲ್ಲಿ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದರು.