- Kannada News Photo gallery Cricket photos IPL 2023: Ben Stokes likely to start IPL as a specialist batter
IPL 2023: ಐಪಿಎಲ್ನ ಆರಂಭಿಕ ಪಂದ್ಯಗಳಲ್ಲಿ ಬೆನ್ ಸ್ಟೋಕ್ಸ್ ಬೌಲಿಂಗ್ ಮಾಡಲ್ಲ..!
IPL 2023 Kannada: ಚೆನ್ನೈ ಸೂಪರ್ ಕಿಂಗ್ಸ್ ತಂಡ: ಎಂಎಸ್ ಧೋನಿ (ನಾಯಕ), ಭಗತ್ ವರ್ಮಾ, ಅಜಯ್ ಮಂಡಲ್, ನಿಶಾಂತ್ ಸಿಂಧು, ಶೇಕ್ ರಶೀದ್, ಬೆನ್ ಸ್ಟೋಕ್ಸ್ , ಅಜಿಂಕ್ಯ ರಹಾನೆ, ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ.
Updated on:Mar 28, 2023 | 11:08 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹೊಸ ಚಿಂತೆ ಶುರುವಾಗಿದೆ. ತಂಡದ ಪ್ರಮುಖ ಆಲ್ರೌಂಡರ್ ಬೆನ್ ಸ್ಟೋಕ್ಸ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಬೌಲಿಂಗ್ ಮಾಡುವುದಿಲ್ಲ ಎಂಬುದು ಖಚಿತವಾಗಿದೆ.

ಬೆನ್ ಸ್ಟೋಕ್ಸ್ ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಹಿಂದೆ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅವರು ಕಾಲಿಗೆ ಗಾಯವಾಗಿತ್ತು. ಈ ಗಾಯವು ಗುಣವಾಗಿದ್ದರೂ, ಮೊಣಕಾಲಿನಲ್ಲಿ ಸಣ್ಣ ನೋವಿದೆ. ಹೀಗಾಗಿ ಅವರು ಬೌಲಿಂಗ್ ಮಾಡಲು ಸಂಪೂರ್ಣ ಸಮರ್ಥರಾಗಿಲ್ಲ. ಈ ಕಾರಣದಿಂದಾಗಿ ಸ್ಟೋಕ್ಸ್ ಆರಂಭದ ಕೆಲ ಪಂದ್ಯಗಳಲ್ಲಿ ಬೌಲಿಂಗ್ ಮಾಡಲ್ಲ ಎಂಬುದನ್ನು ಸಿಎಸ್ಕೆ ಕೋಚ್ ಮೈಕೆಲ್ ಹಸ್ಸಿ ಖಚಿತಪಡಿಸಿದ್ದಾರೆ.

ಇದಾಗ್ಯೂ ಬೆನ್ ಸ್ಟೋಕ್ಸ್ ಪ್ಲೇಯಿಂಗ್ ಇಲೆವೆನ್ನ ಭಾಗವಾಗಲಿದ್ದಾರೆ. ಆಲ್ರೌಂಡರ್ ಬದಲಾಗಿ ಅವರು ಕೇವಲ ಬ್ಯಾಟರ್ ಆಗಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಸಿಎಸ್ಕೆ ತಂಡವು ಹೆಚ್ಚುವರಿ ಬೌಲರ್ರೊಬ್ಬರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

ಇನ್ನು ತಂಡದಲ್ಲಿ ಸಿಎಸ್ಕೆ ಪ್ಲೇಯಿಂಗ್ ಇಲೆವೆನ್ನಲ್ಲಿ ವಿದೇಶಿ ಆಲ್ರೌಂಡರ್ ಆಗಿ ಮೊಯೀನ್ ಅಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು. ಹಾಗೆಯೇ ಆರಂಭಿಕನ ಸ್ಥಾನದಲ್ಲಿ ಡೆವೊನ್ ಕಾನ್ವೆ ಹಾಗೂ ಸ್ಪಿನ್ನರ್ ಆಗಿ ಮಹೀಶ್ ತೀಕ್ಷಣ ಸಿಎಸ್ಕೆ ಪರ ಕಣಕ್ಕಿಳಿಯಬಹುದು.

ಚೆನ್ನೈ ಸೂಪರ್ ಕಿಂಗ್ಸ್ ತಂಡ: ಎಂಎಸ್ ಧೋನಿ (ನಾಯಕ), ಭಗತ್ ವರ್ಮಾ, ಅಜಯ್ ಮಂಡಲ್, ನಿಶಾಂತ್ ಸಿಂಧು, ಶೇಕ್ ರಶೀದ್, ಬೆನ್ ಸ್ಟೋಕ್ಸ್ , ಅಜಿಂಕ್ಯ ರಹಾನೆ, ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, , ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೀಶ್ ತೀಕ್ಷಣ, ಸಿಸಂದ ಮಗಲಾ
Published On - 11:08 pm, Tue, 28 March 23



















