IPL Final Stats: ಯಾರಾಗ್ತಾರೆ ಈ ಬಾರಿಯ ಚಾಂಪಿಯನ್? ಫೈನಲ್ ಅಂಕಿ- ಅಂಶ ಹೇಳುವುದೇನು?
IPL Final Stats: ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಗುಜರಾತ್ ಟೈಟಾನ್ಸ್ ತಂಡಗಳು ಫೈನಲ್‌ನಲ್ಲಿ ಯಾವ ರೀತಿ ಪ್ರದರ್ಶನ ನೀಡಿವೆ ಎಂಬುದನ್ನು ನೋಡುವುದಾದರೆ..
1 / 10
ಶುಕ್ರವಾರ ಮೇ 26 ರಂದು ನಡೆಯುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ಮುಂಬೈ ಹಾಗೂ ಗುಜರಾತ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯವನ್ನು ಗೆಲುವ ತಂಡ ಟ್ರೋಫಿಗಾಗಿ ಫೈನಲ್‌ನಲ್ಲಿ ನೇರವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಅದಕ್ಕೂ ಮುನ್ನ ಐಪಿಎಲ್ ಇತಿಹಾಸದಲ್ಲಿ ಈ ಮೂರೂ ತಂಡಗಳು ಫೈನಲ್‌ನಲ್ಲಿ ಯಾವ ರೀತಿ ಪ್ರದರ್ಶನ ನೀಡಿವೆ ಎಂಬುದನ್ನು ನೋಡುವುದಾದರೆ..
2 / 10
ಮುಂಬೈ ಇಂಡಿಯನ್ಸ್ ಇದುವರೆಗೆ ಒಟ್ಟು 6 ಬಾರಿ ಅಂದರೆ, 2010, 2013, 2015, 2017, 2019 ಮತ್ತು 2020ರಲ್ಲಿ ಐಪಿಎಲ್ ಫೈನಲ್ ತಲುಪಿದೆ.
3 / 10
ಈ 6 ಬಾರಿ ಐಪಿಎಲ್ ಫೈನಲ್‌ನಲ್ಲಿ ಮುಂಬೈ 5 ಪಂದ್ಯಗಳನ್ನು ಗೆದ್ದು ಚಾಂಪಿಯನ್ ಆಗಿದೆ. ಮುಂಬೈ 5 ಫೈನಲ್ ಪಂದ್ಯಗಳಲ್ಲಿ 3 ಬಾರಿ ಚೆನ್ನೈ, ಪುಣೆ ಮತ್ತು ದೆಹಲಿಯನ್ನು ತಲಾ ಒಂದೊಂದು ಪಂದ್ಯದಲ್ಲಿ ಸೋಲಿಸಿ ಚಾಂಪಿಯನ್ ಆಗಿದೆ.
4 / 10
ಮುಂಬೈ ಮತ್ತು ಚೆನ್ನೈ ತಂಡಗಳು 4 ಬಾರಿ ಫೈನಲ್‌ನಲ್ಲಿ ಮುಖಾಮುಖಿಯಾಗಿವೆ. ಚೆನ್ನೈ 2010ರಲ್ಲಿ ಮುಂಬೈ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿದ್ದರೆ, ಅದರ ನಂತರ ಮುಂಬೈ 2013, 2015 ಮತ್ತು 2019 ರಲ್ಲಿ ಚೆನ್ನೈ ವಿರುದ್ಧ ಫೈನಲ್‌ನಲ್ಲಿ ಗೆದ್ದು ಟ್ರೋಫಿ ಎತ್ತಿಹಿಡಿದಿದೆ.
5 / 10
ವಿಶೇಷವೆಂದರೆ, ಮುಂಬೈ ವಿರುದ್ಧದ ಐಪಿಎಲ್ ಫೈನಲ್‌ನಲ್ಲಿ ನಾಯಕನಾಗಿ ಮಹೇಂದ್ರ ಸಿಂಗ್ ಧೋನಿ ದಯನೀಯವಾಗಿ ವಿಫಲರಾಗಿದ್ದಾರೆ. 2017ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ ಮುಂಬೈ ನಡುವೆ ಫೈನಲ್ ಪಂದ್ಯ ನಡೆದಿತ್ತು. ಆಗ ಧೋನಿ ಪುಣೆ ತಂಡದಲ್ಲಿ ಆಡುತ್ತಿದ್ದರು. ಆಗಲೂ ಮುಂಬೈ ಎದುರು ಧೋನಿಯ ಜಾದೂ ನಡೆಯಲಿಲ್ಲ.
6 / 10
ಈ ವರ್ಷ ಚೆನ್ನೈ ಸೂಪರ್ ಕಿಂಗ್ಸ್ 10ನೇ ಬಾರಿ ಫೈನಲ್ ತಲುಪಿದೆ. ಇದಕ್ಕೂ ಮುನ್ನ ಚೆನ್ನೈ 2008, 2010, 2011, 2012, 2013, 2015, 2018, 2019 ಮತ್ತು 2021 ರಲ್ಲಿ ಒಟ್ಟು 9 ಬಾರಿ ಫೈನಲ್ಗೆ ಲಗ್ಗೆ ಇಟ್ಟಿದೆ. ಈ 9 ಫೈನಲ್ ಪಂದ್ಯಗಳಲ್ಲಿ ಚೆನ್ನೈ 4 ಬಾರಿ ಮಾತ್ರ ಫೈನಲ್‌ನಲ್ಲಿ ಜಯಗಳಿಸಿದ್ದು, 5 ಬಾರಿ ಟ್ರೋಫಿಯಿಂದ ವಂಚಿತವಾಗಿದೆ.
7 / 10
ಚೆನ್ನೈ 2008 ರಲ್ಲಿ ರಾಜಸ್ಥಾನ, 2012 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು 2013, 2015 ಮತ್ತು 2019 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಫೈನಲ್‌ನಲ್ಲಿ ಸೋತಿದೆ.
8 / 10
2010ರಲ್ಲಿ ಮುಂಬೈ ಇಂಡಿಯನ್ಸ್, 2011ರಲ್ಲಿ ಆರ್‌ಸಿಬಿ, 2018ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು 2021ರಲ್ಲಿ ಕೆಕೆಆರ್ ವಿರುದ್ಧ ಫೈನಲ್‌ನಲ್ಲಿ ಜಯಗಳಿಸುವ ಮೂಲಕ ಚೆನ್ನೈ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿದೆ.
9 / 10
ಇನ್ನು ಗುಜರಾತ್ ಟೈಟಾನ್ಸ್ 2022ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದು, ಆಡಿದ ಮೊದಲ ಆವೃತ್ತಿಯಲ್ಲೇ ಫೈನಲ್ ತಲುಪುವ ಮೂಲಕ ಟ್ರೋಫಿ ಗೆದ್ದುಕೊಂಡಿತು.
10 / 10
ಇದೀಗ ಗುಜರಾತ್ ಸತತ ಎರಡನೇ ಬಾರಿ ಫೈನಲ್ ತಲುಪುವ ಅವಕಾಶ ಹೊಂದಿದೆ. ಆದರೆ ಅದಕ್ಕೂ ಮುನ್ನ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ತಂಡವನ್ನು ಮಣಿಸಬೇಕಿದೆ.