IPL Retention 2025: ಕೆಕೆಆರ್​ನಲ್ಲೇ ಉಳಿದ ರಿಂಕು ಸಿಂಗ್ ಸಂಭಾವನೆಯಲ್ಲಿ 24 ಪಟ್ಟು ಹೆಚ್ಚಳ..!

|

Updated on: Nov 01, 2024 | 12:30 PM

Rinku Singh Salary: ಐಪಿಎಲ್ 2025 ರ ಮೆಗಾ ಹರಾಜಿಗೆ ಮುನ್ನ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತನ್ನ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ರಿಂಕು ಸಿಂಗ್ ಅವರನ್ನು 13 ಕೋಟಿ ರೂಪಾಯಿಗಳಿಗೆ ಉಳಿಸಿಕೊಳ್ಳುವ ಮೂಲಕ ಕೆಕೆಆರ್ ಆಶ್ಚರ್ಯಕರ ನಿರ್ಧಾರ ತೆಗೆದುಕೊಂಡಿದೆ. ಶ್ರೇಯಸ್ ಅಯ್ಯರ್ ಅವರನ್ನು ಬಿಡುಗಡೆ ಮಾಡಿದ್ದು, ಸುನಿಲ್ ನರೈನ್, ಆಂಡ್ರೆ ರಸೆಲ್, ಮತ್ತು ವರುಣ್ ಚಕ್ರವರ್ತಿ ಅವರನ್ನೂ ಉಳಿಸಿಕೊಂಡಿದೆ. ಕೆಕೆಆರ್ ತಂಡದ ಯಶಸ್ಸಿನಲ್ಲಿ ರಿಂಕು ಸಿಂಗ್ ಪ್ರಮುಖ ಪಾತ್ರ ವಹಿಸಿದ್ದಾರೆ.

1 / 7
ಐಪಿಎಲ್ 2025 ರ ಮೆಗಾ ಹರಾಜಿಗೂ ಮೊದಲು ಉಳಿಸಿಕೊಂಡ ಆಟಗಾರರ ಹೆಸರನ್ನು ಎಲ್ಲಾ ಫ್ರಾಂಚೈಸಿಗಳು ಪ್ರಕಟಿಸಿವೆ. ಅನೇಕ ಫ್ರಾಂಚೈಸಿಗಳು ಕೆಲವು ಆಶ್ಚರ್ಯಕರ ನಿರ್ಧಾರಗಳನ್ನು ತೆಗೆದುಕೊಂಡಿರುವುದನ್ನು ನಾವು ಕಾಣಬಹುದಾಗಿದೆ. ಈ ಪಟ್ಟಿಯಲ್ಲಿ ಐಪಿಎಲ್ 2024ರ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವೂ ಸೇರಿದೆ. ಫ್ರಾಂಚೈಸಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.

2 / 7
ಉಳಿದಂತೆ ತಂಡವು ಆರು ಆಟಗಾರರನ್ನು ಉಳಿಸಿಕೊಂಡಿದ್ದು, ಅವರಲ್ಲಿ ನಿರೀಕ್ಷತ ಆಯ್ಕೆಯಾಗಿದ್ದ ರಿಂಕು ಸಿಂಗ್ ಅವರನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಕೆಕೆಆರ್ ಯಶಸ್ವಿಯಾಗಿದೆ. ಆದರೆ ರಿಂಕು ಸಿಂಗ್​ರನ್ನು ಉಳಿಸಿಕೊಳ್ಳಲು ಕೆಕೆಆರ್ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಿದೆ. ಕಳೆದ ಆವೃತ್ತಿಯವರೆಗೂ ಲಕ್ಷದಲ್ಲಿ ವೇತನ ಪಡೆಯುತ್ತಿದ್ದ ರಿಂಕು ಇನ್ನು ಮುಂದೆ ಕೋಟಿ ಮೊತ್ತದ ಸಂಭಾವನೆ ಪಡೆಯಲ್ಲಿದ್ದಾರೆ.

3 / 7
ವಾಸ್ತವವಾಗಿ ಕಳೆದ ಆವೃತ್ತಿಯಲ್ಲಿ ಕೆಕೆಆರ್ ತಂಡದ ಪರ ಆಡಿದ್ದ ರಿಂಕುಗೆ ಕೇವಲ 55 ಲಕ್ಷ ರೂಗಳನ್ನು ವೇತನವನ್ನಾಗಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ತಂಡದ ಮೊದಲ ಆಯ್ಕೆಯಾಗಿ ಉಳಿದಿರುವ ರಿಂಕು ಸಿಂಗ್​ಗೆ ಫ್ರಾಂಚೈಸಿ ಬರೋಬ್ಬರಿ 13 ಕೋಟಿ ರೂ. ವೇತನ ನೀಡಲು ಮುಂದಾಗಿದೆ. ಇದರರ್ಥ ಕಳೆದ ಬಾರಿಯ ವೇತನಕ್ಕೆ ಹೋಲಿಸಿದರೆ, ರಿಂಕು ಅವರ ಸಂಭಾವನೆಯಲ್ಲಿ 24 ಪಟ್ಟು ಹೆಚ್ಚಳವಾಗಿದೆ.

4 / 7
ರಿಂಕು ಐಪಿಎಲ್ 2018 ರಿಂದ ಕೋಲ್ಕತ್ತಾ ತಂಡದ ಭಾಗವಾಗಿದ್ದಾರೆ, ಆದರೆ ಕಳೆದ ಎರಡು ಸೀಸನ್‌ಗಳಲ್ಲಿ ಅವರು ಈ ಫ್ರಾಂಚೈಸಿ ಪರ ಅದ್ಭುತ ಪ್ರದರ್ಶನ ನೀಡಿದ್ದರು. ಅದರಲ್ಲೂ 2023 ರ ಐಪಿಎಲ್​ನಲ್ಲಿ ಗುಜರಾತ್ ವಿರುದ್ಧ ಸತತ ಐದು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ತನ್ನ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.

5 / 7
ಈ ಪ್ರದರ್ಶನದ ನಂತರ ರಿಂಕು ಟೀಂ ಇಂಡಿಯಾದಲ್ಲಿಯೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಕೆಕೆಆರ್ ಪರ 45 ಪಂದ್ಯಗಳನ್ನು ಆಡಿರುವ ರಿಂಕು 143.34 ಸ್ಟ್ರೈಕ್ ರೇಟ್‌ನಲ್ಲಿ 893 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧಶತಕಗಳಿ ಸೇರಿವೆ. ಇದಲ್ಲದೆ ರಿಂಕು ಸಿಂಗ್ ತಂಡದ ಮಾಲೀಕ ಶಾರುಖ್ ಖಾನ್ ಅವರ ನೆಚ್ಚಿನ ಆಟಗಾರನೂ ಆಗಿದ್ದಾರೆ.

6 / 7
ಉಳಿದಂತೆ ಕೆಕೆಆರ್ ನಾಲ್ವರು ಕ್ಯಾಪ್ಡ್ ಮತ್ತು ಇಬ್ಬರು ಅನ್‌ಕ್ಯಾಪ್ಡ್ ಆಟಗಾರರನ್ನು ಉಳಿಸಿಕೊಂಡಿದೆ. ಫ್ರಾಂಚೈಸಿಯು ಆಂಡ್ರೆ ರಸೆಲ್, ಸುನಿಲ್ ನರೈನ್, ರಿಂಕು ಸಿಂಗ್ ಮತ್ತು ವರುಣ್ ಚಕ್ರವರ್ತಿ ರೂಪದಲ್ಲಿ ನಾಲ್ಕು ಕ್ಯಾಪ್ಡ್ ಆಟಗಾರರನ್ನು ಮತ್ತು ರಮಣದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ರೂಪದಲ್ಲಿ ಇಬ್ಬರು ಅನ್‌ಕ್ಯಾಪ್ಡ್ ಆಟಗಾರರನ್ನು ಉಳಿಸಿಕೊಂಡಿದೆ.

7 / 7
ಫ್ರಾಂಚೈಸಿ, ರಿಂಕು ಸಿಂಗ್ ಅವರನ್ನು ಅತ್ಯಧಿಕ 13 ಕೋಟಿ ರೂ.ಗೆ ಉಳಿಸಿಕೊಂಡಿದೆ. ಅದೇ ಸಮಯದಲ್ಲಿ, ಸುನಿಲ್ ನರೈನ್, ವರುಣ್ ಮತ್ತು ಆಂಡ್ರೆ ರಸೆಲ್ ತಲಾ 12 ಕೋಟಿ ರೂ.ಗೆ. ಹರ್ಷಿತ್ ಮತ್ತು ರಮಣದೀಪ್ ಅವರನ್ನು ಫ್ರಾಂಚೈಸಿ ತಲಾ 4 ಕೋಟಿ ರೂ.ಗೆ ಉಳಿಸಿಕೊಂಡಿದೆ.