- Kannada News Photo gallery Cricket photos Rishabh Pant, KL Rahul IPL Auction Buzz: CSK, RCB in the Race
IPL Retention 2025: ಧೋನಿ ತಂಡಕ್ಕೆ ರಿಷಬ್ ಪಂತ್, ಆರ್ಸಿಬಿಗೆ ಕೆಎಲ್ ರಾಹುಲ್; ಬಹುತೇಕ ಫಿಕ್ಸ್
IPL 2025: ಐಪಿಎಲ್ 2024 ರ ಧಾರಣೆ ಪಟ್ಟಿಯಲ್ಲಿ ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಅವರನ್ನು ಬಿಡುಗಡೆ ಮಾಡಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಇಬ್ಬರನ್ನೂ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿಸಿವೆ. ಸುರೇಶ್ ರೈನಾ ಅವರು ಪಂತ್ ಚೆನ್ನೈ ಸೇರಬಹುದು ಎಂದು ಸುಳಿವು ನೀಡಿದ್ದಾರೆ. ಆರ್‌ಸಿಬಿ ಸಾಮಾಜಿಕ ಮಾಧ್ಯಮದಲ್ಲಿ ಪಂತ್ ಮತ್ತು ರಾಹುಲ್ ಜೊತೆ ವಿರಾಟ್ ಕೊಹ್ಲಿಯ ಚಿತ್ರ ಹಂಚಿಕೊಂಡಿದ್ದು, ಅವರ ಮೇಲಿನ ಆಸಕ್ತಿಯನ್ನು ಸೂಚಿಸುತ್ತದೆ. ಮುಂಬರುವ ಮೆಗಾ ಹರಾಜಿನಲ್ಲಿ ಈ ಇಬ್ಬರ ಭವಿಷ್ಯ ನಿರ್ಧಾರವಾಗಲಿದೆ.
Updated on: Nov 01, 2024 | 10:15 AM

ಎಲ್ಲಾ 10 ತಂಡಗಳು ಮುಂದಿನ ಆವೃತ್ತಿಯ ಐಪಿಎಲ್ಗಾಗಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ದೀಪಾವಳಿಯ ದಿನದಂದು ಬಿಡುಗಡೆಯಾದ ಈ ಪಟ್ಟಿಯಲ್ಲಿ ಕೆಲವು ಅಚ್ಚರಿಯ ನಿರ್ಧಾರಗಳು ಕಂಡುಬಂದಿವೆ. ಸ್ಟಾರ್ ಆಟಗಾರರಾದ ರಿಷಬ್ ಪಂತ್ ಮತ್ತು ಕೆಎಲ್ ರಾಹುಲ್ ಅವರನ್ನು ಅವರ ಫ್ರಾಂಚೈಸಿಗಳು ಬಿಡುಗಡೆಗೊಳಿಸಿವೆ.

ಈಗ ನವೆಂಬರ್‌ನಲ್ಲಿ ನಡೆಯಲಿರುವ ಮೆಗಾ ಹರಾಜಿನಲ್ಲಿ ಅವರಿಗೆ ಭಾರಿ ಮೊತ್ತದ ಬಿಡ್ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಧಾರಣ ಪಟ್ಟಿ ಘೋಷಣೆಯಾದ ತಕ್ಷಣ ಕೆಲವು ತಂಡಗಳು ಈ ಇಬ್ಬರು ಆಟಗಾರರತ್ತ ಆಸಕ್ತಿ ತೋರಲು ಆರಂಭಿಸಿವೆ. ಅದರಲ್ಲಿ ಪ್ರಮುಖವಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಅಗ್ರಸ್ಥಾನದಲ್ಲಿವೆ.

ಈ ನಡುವೆ ಈ ಇಬ್ಬರು ಯಾವ ಎರಡು ತಂಡಗಳನ್ನು ಸೇರಬಹುದು ಎಂಬುದರ ಬಗ್ಗೆ ಚರ್ಚೆ ಶುರುವಾಗಿದ್ದು, ಆ ಚರ್ಚೆಯ ಪ್ರಕಾರ, ರಿಷಬ್ ಪಂತ್ ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಧೋನಿ ಜೊತೆ ಆಡುವುದನ್ನು ಕಾಣಬಹುದು ಎಂದು ಧೋನಿಯ ಆಪ್ತ ಸ್ನೇಹಿತ ಹಾಗೂ ಸಿಎಸ್ಕೆ ಪರ ಆಡಿದ ಸುರೇಶ್ ರೈನಾ ಅವರೇ ದೊಡ್ಡ ಸುಳಿವು ನೀಡಿದ್ದಾರೆ.

ಧಾರಣೆ ಪಟ್ಟಿ ಹೊರಬಿದ್ದ ಬಳಿಕ ಮಾತನಾಡಿರುವ ಸುರೈಶ್ ರೈನಾ, ‘ನಾನು ಎಂಎಸ್ ಧೋನಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದೆ, ಆ ಸಮಯದಲ್ಲಿ ರಿಷಬ್ ಪಂತ್ ಕೂಡ ಅಲ್ಲಿದ್ದರು. ಹೀಗಾಗಿ ಶೀಘ್ರದಲ್ಲೇ ನೀವು ರಿಷಬ್ ಪಂತ್ ಹಳದಿ ಜರ್ಸಿಯನ್ನು ಧರಿಸಿ ಆಡುವುದನ್ನು ನೋಡಬಹುದು ಎಂದಿದ್ದಾರೆ.

ಸುರೇಶ್ ರೈನಾ ಅವರ ಈ ಹೇಳಿಕೆಯ ನಂತರ, ಧೋನಿ ಸ್ವತಃ ಪಂತ್ಗಾಗಿ ಸಿಎಸ್ಕೆ ಮ್ಯಾನೇಜ್ಮೆಂಟ್ ಜೊತೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಧಾರಣೆ ಪಟ್ಟಿ ಹೊರಬೀಳುವ ಮುನ್ನವೇ ಹಲವು ಮಾಧ್ಯಮಗಳಲ್ಲಿ ಪಂತ್ ಧೋನಿ ತಂಡ ಸೇರುವ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದವು. ಆದರೆ, ಇದರಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ಮೆಗಾ ಹರಾಜಿನಲ್ಲಿ ಗೊತ್ತಾಗಲಿದೆ.

ಸಿಎಸ್ಕೆ ಜೊತೆಗೆ ಆರ್‌ಸಿಬಿ ಕೂಡ ರಿಷಬ್ ಪಂತ್ ಮತ್ತು ಕೆಎಲ್ ರಾಹುಲ್ ಇಬ್ಬರ ಮೇಲೂ ಬಾಜಿ ಕಟ್ಟಲು ಬಯಸಿದೆ. ಈ ಬಗ್ಗೆ ಸುಳಿವನ್ನು ಸಹ ಫ್ರಾಂಚೈಸಿ ನೀಡಿದೆ. ವಾಸ್ತವವಾಗಿ, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾದ ಹೀರೋಗಳನ್ನು ಬೆಂಬಲಿಸುವಂತೆ ಆರ್‌ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದೆ.

ಆರ್‌ಸಿಬಿ ಹಂಚಿಕೊಂಡಿರುವ ಈ ಪೋಸ್ಟ್ನಲ್ಲಿ ವಿರಾಟ್ ಕೊಹ್ಲಿ ಜೊತೆಗೆ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಕೂಡ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಐಪಿಎಲ್ ತಂಡಗಳು ತಾವು ಖರೀದಿಸಲು ಬಯಸುವ ಆಟಗಾರರ ಬಗ್ಗೆ ಪರೋಕ್ಷವಾಗಿ ಈ ರೀತಿಯ ಸುಳಿವು ನೀಡುವುದು ಸಹಜ. ಹೀಗಾಗಿ ಪಂತ್ ಹಾಗೂ ರಾಹುಲ್ ಯಾವ ತಂಡ ಸೇರಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
