- Kannada News Photo gallery Cricket photos PBKS Retention Players Full List for IPL 2025 Punjab Kings Arshdeep Singh Details in Kannada
PBKS Retention List for IPL 2025: ಅತ್ಯಲ್ಪ ಮೊತ್ತಕ್ಕೆ ಕೇವಲ ಇಬ್ಬರನ್ನು ಉಳಿಸಿಕೊಂಡ ಪಂಜಾಬ್
Punjab Kings Retention Players List for IPL 2025: ಧಾರಣ ಪಟ್ಟಿಯನ್ನು ಬಿಡುಗಡೆ ಮಾಡುವ ಮುನ್ನವೇ ರಿಕಿ ಪಾಂಟಿಂಗ್ರನ್ನು ತಂಡಕ್ಕೆ ಕರೆತಂದಿರುವ ಪಂಜಾಬ್ ಫ್ರಾಂಚೈಸಿ, ಮೆಗಾ ಹರಾಜಿಗೂ ಮುನ್ನ ತನ್ನ ತಂಡದಲ್ಲಿ ಕೇವಲ ಇಬ್ಬರು ಆಟಗಾರರನ್ನು ಉಳಸಿಕೊಳ್ಳಲು ತೀರ್ಮಾನಿಸಿದೆ.
Updated on:Oct 31, 2024 | 8:25 PM

ಪ್ರತಿ ಐಪಿಎಲ್ಗೂ ಮುನ್ನ ನಡೆಯುವ ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ತಂಡಕ್ಕೆ ಖರೀದಿಸಿ ಅಖಾಡಕ್ಕಿಳಿಯುವ ಪಂಜಾಬ್ ಕಿಂಗ್ಸ್ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಮಾತ್ರ ಇದುವರೆಗೂ ಸಫಲವಾಗಿಲ್ಲ. ಹೀಗಾಗಿ ಧಾರಣ ಪಟ್ಟಿಯನ್ನು ಬಿಡುಗಡೆ ಮಾಡುವ ಮುನ್ನವೇ ರಿಕಿ ಪಾಂಟಿಂಗ್ರನ್ನು ತಂಡಕ್ಕೆ ಕರೆತಂದಿರುವ ಪಂಜಾಬ್ ಫ್ರಾಂಚೈಸಿ, ಮೆಗಾ ಹರಾಜಿಗೂ ಮುನ್ನ ತನ್ನ ತಂಡದಲ್ಲಿ ಕೇವಲ ಇಬ್ಬರು ಆಟಗಾರರನ್ನು ಉಳಸಿಕೊಳ್ಳಲು ತೀರ್ಮಾನಿಸಿದೆ.

ಆ ಪ್ರಕಾರ ಪಂಜಾಬ್ ಕಿಂಗ್ಸ್ ತಂಡ ಶಶಾಂಕ್ ಸಿಂಗ್ ಮತ್ತು ಪ್ರಭಾಸಿಮ್ರಾನ್ ಸಿಂಗ್ ಅವರನ್ನು ತಂಡದಲ್ಲಿ ಉಳಸಿಕೊಂಡಿದ್ದರೆ, ಪ್ರಮುಖ ವೇಗಿ ಅರ್ಷದೀಪ್ ಸಿಂಗ್, ಕಗಿಸೊ ರಬಾಡ, ಜಾನಿ ಬೈರ್‌ಸ್ಟೋವ್, ಲಿಯಾಮ್ ಲಿವಿಂಗ್‌ಸ್ಟನ್ ಸೇರಿದಂತೆ ಹಲವು ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ.

ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ತನ್ನ ಮೊದಲ ಆಯ್ಕೆಯಾಗಿ ಅನ್ಕ್ಯಾಪ್ಡ್ ಆಟಗಾರ ಶಶಾಂಕ್ ಸಿಂಗ್ರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಅವರಿಗಾಗಿ 5.5 ಕೋಟಿ ರೂಗಳನ್ನು ವ್ಯಯಿಸಿದೆ. ಕಳೆದ ಆವೃತ್ತಿಯಲ್ಲಿ ಶಶಾಂಕ್ ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿದ್ದರು.

ಎರಡನೇ ಆಯ್ಕೆಯಾಗಿ ಮತ್ತೊಬ್ಬ ಅನ್ಕ್ಯಾಪ್ಡ್ ಪ್ಲೇಯರ್ ಪ್ರಭಾಸಿಮ್ರಾನ್ ಸಿಂಗ್ ತಂಡದಲ್ಲಿ ಉಳಿಯುವಲ್ಲಿ ಯಶಸ್ವಿಯಾಗಿದ್ದಾರೆ ಈ ವಿಕೆಟ್‌ಕೀಪರ್ ಬ್ಯಾಟ್ಸ್ಮನ್ಗೆ ಪಂಜಾಬ್ ಫ್ರಾಂಚೈಸಿ 4 ಕೋಟಿ ರೂಗಳನ್ನು ಖರ್ಚು ಮಾಡಿದೆ.

ಪಂಜಾಬ್ ತಂಡ ಕೇವಲ ಇಬ್ಬರನ್ನು ಉಳಿಸಿಕೊಂಡಿರುವ ಕಾರಣ, ಹರಾಜಿನಲ್ಲಿ 4 ಆರ್ಟಿಎಮ್ ಆಯ್ಕೆಯನ್ನು ಬಳಸಿಕೊಳ್ಳುವ ಅವಕಾಶ ಪಡೆದಿದೆ. ಇದರರ್ಥ ತಂಡದಲ್ಲಿದ್ದ ಕೆಲವು ಆಟಗಾರರು ಮತ್ತೊಮ್ಮೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಗಳಿವೆ.
Published On - 6:03 pm, Thu, 31 October 24
