IPL 2024: ಐಪಿಎಲ್‌ನಲ್ಲಿ ಕಿಂಗ್ ಕೊಹ್ಲಿ ಯಾವ ತಂಡದ ವಿರುದ್ಧ ಹೆಚ್ಚು ರನ್ ಕಲೆಹಾಕಿದ್ದಾರೆ ಗೊತ್ತಾ?
IPL 2024: ಐಪಿಎಲ್‌ನಲ್ಲಿ ರಿಷಬ್ ಪಂತ್ ನಾಯಕತ್ವದ ತಂಡ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವಿರಾಟ್ ಕೊಹ್ಲಿ ಅತ್ಯಧಿಕ ರನ್ ಕಲೆಹಾಕಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅವರು ಗಳಿಸಿದ ಒಟ್ಟು ರನ್‌ಗಳಲ್ಲಿ ವಿರಾಟ್ ಕೊಹ್ಲಿ ಈ ಎರಡು ತಂಡಗಳ ವಿರುದ್ಧ ಹೆಚ್ಚು ರನ್ ಬಾರಿಸಿರುವುದು ಗಮನಾರ್ಹ.
1 / 6
ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಎಂಬುದರಲ್ಲಿ ಎರಡು ಮಾತಿಲ್ಲ. ಅವರು ಈ ಲೀಗ್ನಲ್ಲಿ ಕಲೆಹಾಕಿರುವ ರನ್‌ಗಳ ಹತ್ತಿರ ಯಾರೂ ಇಲ್ಲ. ಐಪಿಎಲ್‌ನಲ್ಲಿ ಇದುವರೆಗೆ 7000 ರನ್ ಗಳಿಸಿದ ಏಕೈಕ ಆಟಗಾರ ನಮ್ಮ ಕಿಂಗ್ ಕೊಹ್ಲಿ. ಆದರೆ, ಕಿಂಗ್ ಕೊಹ್ಲಿಗೆ ಈ ಎರಡು ತಂಡಗಳ ಎದುರು ಬ್ಯಾಟ್ ಬೀಸುವುದು ಬಲು ಅಚ್ಚು ಮೆಚ್ಚು ಎಂಬುದು ಈ ಅಂಕಿ ಅಂಶಗಳಿಂದ ಜಗಜ್ಜಾಹೀರಾಗಿದೆ.
2 / 6
ಐಪಿಎಲ್‌ನಲ್ಲಿ ರಿಷಬ್ ಪಂತ್ ನಾಯಕತ್ವದ ತಂಡ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವಿರಾಟ್ ಕೊಹ್ಲಿ ಅತ್ಯಧಿಕ ರನ್ ಕಲೆಹಾಕಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅವರು ಗಳಿಸಿದ ಒಟ್ಟು ರನ್‌ಗಳಲ್ಲಿ ವಿರಾಟ್ ಕೊಹ್ಲಿ ಈ ಎರಡು ತಂಡಗಳ ವಿರುದ್ಧ ಹೆಚ್ಚು ರನ್ ಬಾರಿಸಿರುವುದು ಗಮನಾರ್ಹ.
3 / 6
ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಇದುವರೆಗೆ ಆಡಿದ 27 ಇನ್ನಿಂಗ್ಸ್‌ಗಳಲ್ಲಿ ವಿರಾಟ್ 51.5 ಸರಾಸರಿ ಮತ್ತು 133.8 ಸ್ಟ್ರೈಕ್ ರೇಟ್‌ನಲ್ಲಿ 1030 ರನ್ ಗಳಿಸಿದ್ದಾರೆ. ಇದು ಐಪಿಎಲ್ ಪಿಚ್‌ನಲ್ಲಿ ಯಾವುದೇ ಒಂದು ತಂಡದ ವಿರುದ್ಧ ವಿರಾಟ್ ಗಳಿಸಿದ ಗರಿಷ್ಠ ರನ್ ಆಗಿದೆ. ಇದಲ್ಲದೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 1000 ಪ್ಲಸ್ ರನ್ ಗಳಿಸಿರುವ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ.
4 / 6
ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವಿರಾಟ್ ಕೊಹ್ಲಿ ಸಾವಿರ ರನ್ ಗಳಿಸದೇ ಇರಬಹುದು. ಆದರೆ ಈ ತಂಡದ ವಿರುದ್ಧ ವಿರಾಟ್ ಬ್ಯಾಟ್ ಯಾವಾಗಲೂ ಘರ್ಜಿಸಿದೆ. ಈ ಹಳದಿ ಜೆರ್ಸಿ ತಂಡದ ವಿರುದ್ಧ ವಿರಾಟ್ 30 ಇನ್ನಿಂಗ್ಸ್‌ಗಳನ್ನಾಡಿದ್ದು, ಇದರಲ್ಲಿ 37.88 ಸರಾಸರಿ ಮತ್ತು 125.5 ಸ್ಟ್ರೈಕ್ ರೇಟ್‌ನಲ್ಲಿ 985 ರನ್ ಗಳಿಸಿದ್ದಾರೆ. ಇದರರ್ಥ ವಿರಾಟ್ ಕೊಹ್ಲಿ ಸಿಎಸ್‌ಕೆ ವಿರುದ್ಧ 1000 ರನ್ ಕಲೆಹಾಕಲು ಇನ್ನು ಕೇವಲ 15 ರನ್‌ಗಳ ಅಂತರದಲ್ಲಿದ್ದಾರೆ.
5 / 6
ಇದಲ್ಲದೇ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ವಿರಾಟ್ ತಲಾ 861 ರನ್ ಗಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಇಲ್ಲಿಯವರೆಗೆ 852 ರನ್ ಕಲೆಹಾಕಿದ್ದಾರೆ. ಅಂದರೆ ಐಪಿಎಲ್ 2024 ರಲ್ಲಿ, ವಿರಾಟ್ ಕೊಹ್ಲಿ ಸಿಎಸ್‌ಕೆ ವಿರುದ್ಧ ಮಾತ್ರವಲ್ಲದೆ ಪಂಜಾಬ್, ಕೆಕೆಆರ್ ಮತ್ತು ಮುಂಬೈ ವಿರುದ್ಧವೂ ತಮ್ಮ 1000 ರನ್‌ಗಳನ್ನು ಪೂರೈಸುವುದನ್ನು ಕಾಣಬಹುದಾಗಿದೆ.
6 / 6
ಇನ್ನು ವಿರಾಟ್ ಕೊಹ್ಲಿ ಅವರ ಈವರೆಗಿನ ಐಪಿಎಲ್ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. ಈ ಲೀಗ್ನಲ್ಲಿ ಇದುವರೆಗೆ 237 ಪಂದ್ಯಗಳನ್ನಾಡಿರುವ ಕೊಹ್ಲಿ 229 ಇನ್ನಿಂಗ್ಸ್‌ಗಳಲ್ಲಿ 7263 ರನ್ ಗಳಿಸಿದ್ದಾರೆ. ಇದರಲ್ಲಿ 7 ಶತಕಗಳು ಮತ್ತು 50 ಅರ್ಧ ಶತಕಗಳು ಸೇರಿವೆ. ಐಪಿಎಲ್‌ನಲ್ಲಿ ವಿರಾಟ್ ಅವರ ಒಟ್ಟಾರೆ ಸ್ಟ್ರೈಕ್ ರೇಟ್ 130.02 ಆಗಿದೆ.