- Kannada News Photo gallery Cricket photos Former Sri Lankan cricketer Lahiru Thirimanne has been hospitalized
Lahiru Thirimanne: ಭೀಕರ ರಸ್ತೆ ಅಪಘಾತ: ಶ್ರೀಲಂಕಾ ಕ್ರಿಕೆಟಿಗ ಆಸ್ಪತ್ರೆಗೆ ದಾಖಲು
Lahiru Thirimanne: 2010 ರಲ್ಲಿ ಶ್ರೀಲಂಕಾ ಪರ ಪಾದಾರ್ಪಣೆ ಮಾಡಿದ್ದ ತಿರಿಮನ್ನೆ ಒಟ್ಟು 197 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಅಲ್ಲದೆ 2022 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ 34 ವರ್ಷ ಎಡಗೈ ದಾಂಡಿಗ ತಿರಿಮನ್ನೆ ವಿವಿಧ ಲೀಗ್ಗಳಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಅಲ್ಲದೆ ಇತ್ತೀಚೆಗೆ ನಡೆದ ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ ಟೂರ್ನಿಯಲ್ಲೂ ಅವರು ಕಾಣಿಸಿಕೊಂಡಿದ್ದರು.
Updated on:Mar 14, 2024 | 1:43 PM

ಶ್ರೀಲಂಕಾದ ಅನುರಾಧಪುರದ ತಿರಪನ್ನೆ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಲಂಕಾದ ಮಾಜಿ ಕ್ರಿಕೆಟಿಗ ಲಹಿರು ತಿರಿಮನ್ನೆ ಗಾಯಗೊಂಡಿದ್ದಾರೆ. ಮಾರ್ಚ್ 14, ಗುರುವಾರದಂದು ಈ ಅವಘಡ ಸಂಭವಿಸಿದ್ದು, ಶ್ರೀಲಂಕಾ ಕ್ರಿಕೆಟಿಗನಿದ್ದ ಕಾರಿನ ಮುಂಭಾಗ ಜಖಂಗೊಂಡಿದೆ. ಇದೇ ವೇಳೆ ಕಾರಿನಲ್ಲಿದ್ದವರನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಿದ್ದಾರೆ.

ತಿರಿಮನ್ನೆ ಕುಟುಂಬ ಸಮೇತ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ನಗರದ ತಿರಪನ್ನೆ ಎಂಬಲ್ಲಿ ಅವರ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಕಾರಿನ ಡಿಕ್ಕಿ ರಭಸಕ್ಕೆ ಲಾರಿಯು ಉರುಳಿ ಬಿದ್ದಿರುವುದು ಕಾಣಬಹುದು. ಇದಾಗ್ಯೂ ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಪ್ರಸ್ತುತ ವರದಿಯ ಪ್ರಕಾರ, ಮಾಜಿ ಕ್ರಿಕೆಟಿಗನಿಗೆ ಕೇವಲ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಲ್ಲದೆ ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

2010 ರಲ್ಲಿ ಶ್ರೀಲಂಕಾ ಪರ ಪಾದಾರ್ಪಣೆ ಮಾಡಿದ್ದ ತಿರಿಮನ್ನೆ ಅವರು 2022 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಇದಾಗ್ಯೂ ಲೀಗ್ ಕ್ರಿಕೆಟ್ನಲ್ಲಿ ಮುಂದುವರೆದಿರುವ ಲಹಿರು ಇತ್ತೀಚೆಗೆ ಮುಕ್ತಾಯಗೊಂಡಿದ್ದ ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿಯಲ್ಲೂ ಭಾಗವಹಿಸಿದ್ದರು.

ಶ್ರೀಲಂಕಾ ಪರ 44 ಟೆಸ್ಟ್ ಪಂದ್ಯಗಳನ್ನಾಡಿರುವ ಲಹಿರು ತಿರಿಮನ್ನೆ 3 ಶತಕಗಳೊಂದಿಗೆ 2088 ರನ್ ಕಲೆಹಾಕಿದ್ದರು. ಇನ್ನು 127 ಏಕದಿನ ಪಂದ್ಯಗಳಿಂದ 3164 ರನ್ ಬಾರಿಸಿದ್ದಾರೆ. ಈ ವೇಳೆ 4 ಶತಕ ಹಾಗೂ 21 ಅರ್ಧಶತಕಗಳನ್ನು ಸಿಡಿಸಿದ್ದರು. ಹಾಗೆಯೇ ಶ್ರೀಲಂಕಾ ಪರ 26 ಟಿ20 ಪಂದ್ಯಗಳನ್ನಾಡಿರುವ ಅವರು 291 ರನ್ ಕಲೆಹಾಕಿದ್ದರು. ಇದೀಗ ನಿವೃತ್ತರಾಗಿರುವ 34 ವರ್ಷದ ಲಹಿರು ತಿರಿಮನ್ನೆ ವಿವಿಧ ಲೀಗ್ಗಳಲ್ಲಿ ಭಾಗವಹಿಸುತ್ತಿದ್ದಾರೆ.
Published On - 1:27 pm, Thu, 14 March 24



















