IPL 2026: ಸಿಎಸ್​ಕೆಗೆ ತಪ್ಪದ ಸಂಕಷ್ಟ; ಧೋನಿ ಆಗಮನ ಮತ್ತಷ್ಟು ವಿಳಂಬ

Updated on: Apr 08, 2026 | 6:22 PM

IPL 2026: ಐಪಿಎಲ್ 2026 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸತತ 3 ಸೋಲುಗಳಿಂದ ಸಂಕಷ್ಟದಲ್ಲಿದೆ. ತಂಡದ ಐಕಾನ್ ಎಂಎಸ್ ಧೋನಿ ಕಾಲಿನ ಗಾಯದಿಂದ ಬಳಲುತ್ತಿದ್ದು, ಇನ್ನು ಹಲವು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಸಿಎಸ್‌ಕೆ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಉಳಿದ ಎಲ್ಲ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡದಲ್ಲಿದೆ. ಧೋನಿಯ ಅನುಭವ ಮತ್ತು ಫಿನಿಶಿಂಗ್ ಕೌಶಲ್ಯ ತಂಡಕ್ಕೆ ಅತಿ ಅಗತ್ಯವಾಗಿದೆ. ಅವರ ಚೇತರಿಕೆ ವಿಳಂಬವಾಗುತ್ತಿದ್ದು, ಡೆಲ್ಲಿ ಮತ್ತು ಕೆಕೆಆರ್ ವಿರುದ್ಧದ ಪಂದ್ಯಗಳಿಗೂ ಲಭ್ಯತೆ ಅನುಮಾನ.

1 / 5

ಐಪಿಎಲ್ 2026 ರ ಆರಂಭದಿಂದಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಂಕಷ್ಟಗಳನ್ನು ಎದುರಿಸುತ್ತಿದೆ. ತಂಡವು ಈಗಾಗಲೇ ಸತತ ಮೂರು ಪಂದ್ಯಗಳನ್ನು ಸೋತಿದ್ದು, ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ. ಮುಂದಿನ ಸುತ್ತಿಗೆ ಅರ್ಹತೆ ಪಡೆಯಬೇಕಾದರೆ ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.

ಐಪಿಎಲ್ 2026 ರ ಆರಂಭದಿಂದಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಂಕಷ್ಟಗಳನ್ನು ಎದುರಿಸುತ್ತಿದೆ. ತಂಡವು ಈಗಾಗಲೇ ಸತತ ಮೂರು ಪಂದ್ಯಗಳನ್ನು ಸೋತಿದ್ದು, ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ. ಮುಂದಿನ ಸುತ್ತಿಗೆ ಅರ್ಹತೆ ಪಡೆಯಬೇಕಾದರೆ ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.

2 / 5

ಏತನ್ಮಧ್ಯೆ, ತಂಡದ ಐಕಾನ್ ಮತ್ತು ಮಾಜಿ ನಾಯಕ ಎಂಎಸ್ ಧೋನಿ ಕಾಲಿನ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಧೋನಿ ಸಧ್ಯ ಪುನರ್ವಸತಿಯಲಿದ್ದು, ಮೊದಲ ಎರಡು ವಾರಗಳವರೆಗೆ ಆಡಲು ಸಾಧ್ಯವಾಗುವುದಿಲ್ಲ ಎಂದು ಫ್ರಾಂಚೈಸಿ ಈ ಮೊದಲು ಘೋಷಿಸಿತ್ತು. ಇದರರ್ಥ ಧೋನಿ ಕನಿಷ್ಠ ಮೂರು ಪಂದ್ಯಗಳನ್ನು ಆಡುವುದಿಲ್ಲ ಎಂಬುದು ಫ್ರಾಂಚೈಸಿಯ ಸ್ಪಷ್ಟನೆಯಾಗಿತ್ತು. ಆದಾಗ್ಯೂ, ನಾಲ್ಕನೇ ಪಂದ್ಯಕ್ಕೂ ಧೋನಿ ಲಭ್ಯತೆ ಅನುಮಾನವಾಗಿದೆ.

3 / 5

ಕ್ರಿಕ್‌ಬಜ್ ವರದಿಯ ಪ್ರಕಾರ, ಧೋನಿ ಇನ್ನೂ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಇನ್ನು ಫಿಟ್ ಆಗಿಲ್ಲ. ಹೀಗಾಗಿ ಧೋನಿ ಚೆನ್ನೈನಲ್ಲೇ ಉಳಿದಿದ್ದಾರೆ. 44 ವರ್ಷದ ಧೋನಿ ಪ್ರಸ್ತುತ ಚೆನ್ನೈನಲ್ಲಿ ತಮ್ಮ ಕುಟುಂಬದೊಂದಿಗೆ ಇದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಕೆಲವು ದಿನಗಳ ಹಿಂದೆ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದರು. ಆದರೆ ಧೋನಿ ಸಂಪೂರ್ಣವಾಗಿ ಫಿಟ್ ಆಗಲು ಇನ್ನು ಸಮಯ ತೆಗೆದುಕೊಳ್ಳುತ್ತದೆ ಎಂದು ವರದಿಯಾಗಿದೆ.

4 / 5

ವರದಿಗಳ ಪ್ರಕಾರ, ಧೋನಿ ಫಿಟ್ ಆಗಲು ಕನಿಷ್ಠ ಇನ್ನೊಂದು ವಾರ ಬೇಕಾಗಬಹುದು. ಪರಿಣಾಮವಾಗಿ, ಏಪ್ರಿಲ್ 11, 2026 ರಂದು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ತವರಿನ ಪಂದ್ಯದಲ್ಲಿಯೂ ಅವರು ಆಡುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ. ಹಾಗೆಯೇ ಏಪ್ರಿಲ್ 14 ರಂದು ನಡೆಯಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕೂಡ ಧೋನಿ ಆಡುವ ಸಾಧ್ಯತೆಗಳು ಕಡಿಮೆ ಇದೆ.

5 / 5

ಧೋನಿ ಅನುಪಸ್ಥಿತಿಯಲ್ಲಿ ಸಿಎಸ್‌ಕೆ ತಂಡ ನಿರಾಶಾದಾಯಕ ಆರಂಭವನ್ನು ಕಂಡಿದೆ. ಐದು ಬಾರಿ ಚಾಂಪಿಯನ್ ಆಗಿರುವ ತಂಡವು ಇನ್ನೂ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ತಂಡಕ್ಕೆ ಧೋನಿಯ ಅನುಭವ ಮತ್ತು ಫಿನಿಶಿಂಗ್ ಕೌಶಲ್ಯಗಳು ತೀರಾ ಅಗತ್ಯವಾಗಿವೆ. ಇದಲ್ಲದೆ, ಯುವ ಆಟಗಾರ ಡೆವಾಲ್ಡ್ ಬ್ರೆವಿಸ್ ಅವರನ್ನು ಮೊದಲ ಮೂರು ಪಂದ್ಯಗಳಿಂದ ಹೊರಗಿಡಲಾಗಿದೆ, ಆದರೂ ಅವರು ಚೇತರಿಸಿಕೊಳ್ಳುತ್ತಿದ್ದು, ಮುಂದಿನ ಪಂದ್ಯಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ.

Loading...
Unable to load recommendations.
Follow Us