James Anderson: ವಿಶ್ವ ದಾಖಲೆಗಳೊಂದಿಗೆ ವಿದಾಯ ಹೇಳಿದ ಜೇಮ್ಸ್ ಅ್ಯಂಡರ್ಸನ್
James Anderson Retirement: ಇಂಗ್ಲೆಂಡ್ ಪರ 188 ಟೆಸ್ಟ್ ಪಂದ್ಯಗಳನ್ನಾಡಿರುವ 41ರ ಹರೆಯದ ಜೇಮ್ಸ್ ಅ್ಯಂಡರ್ಸನ್ (ಜಿಮ್ಮಿ) ಒಟ್ಟು 40037 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 18627 ರನ್ ನೀಡುವ ಮೂಲಕ ಒಟ್ಟು 704 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್ ಇತಿಹಾಸದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
1 / 7
ವಿಶ್ವ ಕ್ರಿಕೆಟ್ ಕಂಡಂತಹ ಅಪ್ರತಿಮ ವೇಗದ ಬೌಲರ್ ಜೇಮ್ಸ್ ಅ್ಯಂಡರ್ಸನ್ (James Anderson) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಯುವ ಮೂಲಕ ಅ್ಯಂಡರ್ಸನ್ ತಮ್ಮ ವಿದಾಯ ಪಂದ್ಯವಾಡಿದರು. ಈ ಪಂದ್ಯದಲ್ಲಿ 26.4 ಓವರ್ಗಳನ್ನು ಎಸೆದಿದ್ದ ಜಿಮ್ಮಿ ಒಟ್ಟು 4 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದಾರೆ.
2 / 7
ಇನ್ನು ವಿದಾಯ ಪಂದ್ಯದಲ್ಲಿ ಜೇಮ್ಸ್ ಅ್ಯಂಡರ್ಸನ್ ವಿಶೇಷ ವಿಶ್ವ ದಾಖಲೆಯನ್ನೂ ಸಹ ಬರೆದಿದ್ದಾರೆ. ಅದು ಸಹ ಯಾರಿಂದಲೂ ಸಾಧ್ಯವಾಗದ ಅಪರೂಪದ ದಾಖಲೆ ಎಂಬುದು ವಿಶೇಷ. ಹೀಗೆ ತಮ್ಮ 21 ವರ್ಷದ ಟೆಸ್ಟ್ ವೃತ್ತಿಜೀವನದಲ್ಲಿ ಜಿಮ್ಮಿ ಬರೆದ ಕೆಲ ಐತಿಹಾಸಿಕ ದಾಖಲೆಗಳ ಪಟ್ಟಿ ಇಲ್ಲಿದೆ...
3 / 7
40 ಸಾವಿರ ಬಾಲ್: ಟೆಸ್ಟ್ ಕ್ರಿಕೆಟ್'ನ ತಮ್ಮ ಕೊನೆಯ ಪಂದ್ಯದಲ್ಲಿ ಜೇಮ್ಸ್ ಅ್ಯಂಡರ್ಸನ್ 40 ಸಾವಿರ ಬಾಲ್ ಗಳನ್ನು ಪೂರೈಸಿದ್ದು ವಿಶೇಷ. ತಮ್ಮ ಕೆರಿಯರ್ ನಲ್ಲಿ ಒಟ್ಟು 40037 ಎಸೆತಗಳನ್ನು ಎಸೆಯುವ ಮೂಲಕ ಈ ಸಾಧನೆ ಮಾಡಿದ ಏಕೈಕ ವೇಗದ ಬೌಲರ್ ಎನಿಸಿಕೊಂಡಿದ್ದಾರೆ.
4 / 7
ಕ್ಲೀನ್ ಬೌಲ್ಡ್: ಈ ಪಂದ್ಯದಲ್ಲಿ ಜೇಮ್ಸ್ ಅ್ಯಂಡರ್ಸನ್ ಕ್ರೈಗ್ ಬ್ರಾಥ್ವೈಟ್ರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಕ್ಲೀನ್ ಬೌಲ್ಡ್ ಮಾಡಿದ ವೇಗಿ ಎಂಬ ವಿಶ್ವ ದಾಖಲೆಯನ್ನು ಜಿಮ್ಮಿ ನಿರ್ಮಿಸಿದ್ದಾರೆ. ಜೇಮ್ಸ್ ಅ್ಯಂಡರ್ಸನ್ ಒಟ್ಟು 137 ಬಾರಿ ಕ್ಲೀನ್ ಬೌಲ್ಡ್ ವಿಕೆಟ್ ಪಡೆದಿದ್ದಾರೆ.
5 / 7
ಕ್ರಿಕೆಟ್ ಕಾಶಿಯ ಕಿಂಗ್: ಲಾರ್ಡ್ಸ್ ಮೈದಾನದಲ್ಲಿ ಚೊಚ್ಚಲ ಪಂದ್ಯವಾಡುವ ಮೂಲಕ ಕೆರಿಯರ್ ಆರಂಭಿಸಿದ ಜೇಮ್ಸ್ ಅ್ಯಂಡರ್ಸನ್ ಅಂತಿಮ ಪಂದ್ಯದಲ್ಲಿ ಅದೇ ಮೈದಾನದಲ್ಲಿ ವಿಶ್ವ ದಾಖಲೆ ಬರೆದರು. ಕೊನೆಯ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸಿ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಈ ಮೈದಾನದಲ್ಲಿ ಜಿಮ್ಮಿ ಒಟ್ಟು 123 ವಿಕೆಟ್ ಪಡೆದಿದ್ದಾರೆ.
6 / 7
ಕ್ಯಾಚ್ ಔಟ್: ಟೆಸ್ಟ್ ಇತಿಹಾಸದಲ್ಲಿ ಅತೀ ಹೆಚ್ಚು ಕ್ಯಾಚ್ ಔಟ್ ಮಾಡಿದ ಬೌಲರ್ ಎಂಬ ದಾಖಲೆ ಕೂಡ ಜೇಮ್ಸ್ ಅ್ಯಂಡರ್ಸನ್ ಹೆಸರಿನಲ್ಲಿದೆ. 188 ಟೆಸ್ಟ್ ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಜಿಮ್ಮಿ ಒಟ್ಟು 468 ಬ್ಯಾಟ್ಸ್‌ಮನ್ ಗಳನ್ನು ಕ್ಯಾಚ್ ಔಟ್ ಮಾಡಿದ್ದಾರೆ.
7 / 7
ವಿಶ್ವದ ಮೊದಲ ವೇಗಿ: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 700+ ವಿಕೆಟ್ ಪಡೆದ ಏಕೈಕ ವೇಗದ ಬೌಲರ್ ಜೇಮ್ಸ್ ಅ್ಯಂಡರ್ಸನ್. 350 ಟೆಸ್ಟ್ ಇನಿಂಗ್ಸ್ಗಳಿಂದ 704 ವಿಕೆಟ್ ಕಬಳಿಸಿ ಅಳಿಸಿ ಹಾಕಲಾಗದಂತಹ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಎಲ್ಲಾ ವಿಶ್ವ ದಾಖಲೆಗಳೊಂದಿಗೆ ಸ್ವಿಂಗ್ ಮಾಸ್ಟರ್ ತಮ್ಮ 41ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕೆರಿಯರ್ ಅಂತ್ಯಗೊಳಿಸಿದ್ದಾರೆ.