IND vs IRE: ನಾಯಕನಾಗಿ ಮೊದಲ ಪಂದ್ಯದಲ್ಲೇ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ..!
Jasprit Bumrah: ವಾಸ್ತವವಾಗಿ ಟೀಂ ಇಂಡಿಯಾ ಪರ ಮೊದಲು ದಾಳಿಗಿಳಿದ ಬುಮ್ರಾ ಮೊದಲ ಓವರ್ನಲ್ಲಿಯೇ 2 ವಿಕೆಟ್ ಉರುಳಿಸಿದರು. ಮೊದಲ ಓವರ್‌ನಲ್ಲಿ ಕೇವಲ 4 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಬಾಚಿಕೊಂಡರು. ಇದರೊಂದಿಗೆ ನಾಯಕತ್ವ ವಹಿಸಿದ ಮೊದಲ ಟಿ20 ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಬುಮ್ರಾ ಪಾತ್ರರಾದರು.
1 / 8
ಐರ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಡಕ್ವರ್ತ್ ಲೂಯಿಸ್ ನಿಯಮಗಳ ಅಡಿಯಲ್ಲಿ ಟೀಂ ಇಂಡಿಯಾ 2 ರನ್ಗಳಿಂದ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.
2 / 8
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್, ಟೀಂ ಇಂಡಿಯಾ ಮುಂದೆ 140 ರನ್ಗಳ ಸವಾಲನ್ನು ನೀಡಿತ್ತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 6.5 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 47 ರನ್ ಕಲೆ ಹಾಕಿತ್ತು. ಅಷ್ಟರಲ್ಲಿ ಮಳೆ ಬಂದಿದ್ದರಿಂದಾಗಿ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಅಂತಿಮವಾಗಿ ಮಳೆ ನಿಲ್ಲದ ಕಾರಣ ಟೀಂ ಇಂಡಿಯಾವನ್ನು ವಿಜಯಿ ಎಂದು ಘೋಷಿಸಲಾಯಿತು.
3 / 8
ಇನ್ನು ಈ ಪಂದ್ಯದಲ್ಲಿ ನಾಯಕತ್ವದ ಜೊತೆಗೆ ಬರೋಬ್ಬರಿ 11 ತಿಂಗಳ ಬಳಿಕ ಟೀಂ ಇಂಡಿಯಾಕ್ಕೆ ಮರಳಿದ ವೇಗಿ ಜಸ್ಪ್ರೀತ್ ಬುಮ್ರಾ, ಭಾರತ ಕ್ರಿಕೆಟ್ ಇತಿಹಾಸದಲ್ಲಿ ಯಾವೊಬ್ಬ ನಾಯಕನೂ ಮಾಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡರು.
4 / 8
ವಾಸ್ತವವಾಗಿ ಟೀಂ ಇಂಡಿಯಾ ಪರ ಮೊದಲು ದಾಳಿಗಿಳಿದ ಬುಮ್ರಾ ಮೊದಲ ಓವರ್ನಲ್ಲಿಯೇ 2 ವಿಕೆಟ್ ಉರುಳಿಸಿದರು. ಓವರ್ನ ಮೊದಲ ಎಸೆತದಲ್ಲಿ ಆಂಡಿ ಬಾಲ್ಬಿರ್ನಿ ಕೈಯಿಂದ ಬೌಂಡರಿ ಹೊಡೆಸಿಕೊಂಡಿದ್ದ ಬುಮ್ರಾ, ತನ್ನ ಎರಡನೇ ಎಸೆತದಲ್ಲಿ ಬಾಲ್ಬಿರ್ನಿ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು.
5 / 8
ಆ ಬಳಿಕ ಅದೇ ಓವರ್ನ ಐದನೇ ಎಸೆತದಲ್ಲಿ ಅವರು ಲೋರ್ಕನ್ ಟಕ್ಕರ್‌ಗೆ ಪೆವಿಲಿಯನ್ ದಾರಿ ತೋರಿಸಿದರು. ಮೊದಲ ಓವರ್‌ನಲ್ಲಿ ಕೇವಲ 4 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಬಾಚಿಕೊಂಡರು.
6 / 8
ಇದರೊಂದಿಗೆ ನಾಯಕತ್ವ ವಹಿಸಿದ ಮೊದಲ ಟಿ20 ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಬುಮ್ರಾ ಪಾತ್ರರಾದರು.
7 / 8
ಸೆಪ್ಟೆಂಬರ್ 2022 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಸಂದರ್ಭದಲ್ಲಿ ಗಾಯಗೊಂಡಿದ್ದ ಬುಮ್ರಾ ಕಳೆದ 11 ತಿಂಗಳಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಇದರಿಂದ ಬುಮ್ರಾ ಟಿ20 ವಿಶ್ವಕಪ್ ಮತ್ತು ಐಪಿಎಲ್ ಸೇರಿದಂತೆ, ಡಬ್ಲ್ಯುಟಿಸಿ ಫೈನಲ್ನಲ್ಲೂ ಆಡಿರಲಿಲ್ಲ.
8 / 8
ಇದೀಗ ತಂಡಕ್ಕೆ ಮರಳಿರುವ ಬುಮ್ರಾ, ತಮ್ಮ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ಕೇವಲ 24 ರನ್‌ಗಳನ್ನು ಬಿಟ್ಟುಕೊಟ್ಟಿದಲ್ಲದೆ, 2 ವಿಕೆಟ್‌ಗಳನ್ನು ಪಡೆದರು.