Jasprit Bumrah NetWorth: ವಿಶ್ವದ ನಂ.1 ಬೌಲರ್ ಜಸ್ಪ್ರೀತ್ ಬುಮ್ರಾ ಎಷ್ಟು ಕೋಟಿಯ ಒಡೆಯ ಗೊತ್ತಾ?
Jasprit Bumrah NetWorth: ಜಸ್ಪ್ರೀತ್ ಬುಮ್ರಾ ಭಾರತ ತಂಡದ ಹೊರತಾಗಿ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕಿಳಿಯುತ್ತಾರೆ. 2013ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಬುಮ್ರಾ ಅವರ ಸಂಭಾವನೆಯಲ್ಲಿ ಅಲ್ಲಿಂದ ಇಲ್ಲಿಯವರೆಗೂ ಭಾರಿ ವ್ಯತ್ಯಾಸವಾಗಿದೆ.
1 / 10
ಜಸ್ಪ್ರೀತ್ ಬುಮ್ರಾ
2 / 10
ಟೀಂ ಇಂಡಿಯಾದ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿರುವ ಬುಮ್ರಾ ಮೂರು ಮಾದರಿಯ ಕ್ರಿಕೆಟ್ನಲ್ಲೂ ಅಗ್ರಸ್ಥಾನ ಪಡೆದ ಭಾರತ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಬುಮ್ರಾಗೂ ಮೊದಲು ವಿರಾಟ್ ಕೊಹ್ಲಿ ಮೂರು ಮಾದರಿಯಲ್ಲೂ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದರು.
3 / 10
ಪ್ರಸ್ತುತ ಭಾರತ ಟೆಸ್ಟ್ ತಂಡದ ಉಪನಾಯಕರಾಗಿರುವ ಬುಮ್ರಾ, ಮೂರು ಮಾದರಿಯ ಕ್ರಿಕೆಟ್ನಲ್ಲೂ ಟೀಂ ಇಂಡಿಯಾ ಬೌಲಿಂಗ್ ವಿಭಾಗದ ಜೀವಾಳವಾಗಿದ್ದಾರೆ. ಹಾಗೆಯೇ ತಮ್ಮ ಪ್ರತಿಭೆಯ ಮೂಲಕ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿರುವ ಈ ಯಾರ್ಕರ್ ಕಿಂಗ್ ಗಳಿಕೆಯಲ್ಲೂ ಸಾಕಷ್ಟು ಮುಂದಿದ್ದಾರೆ.
4 / 10
ಜಸ್ಪ್ರೀತ್ ಬುಮ್ರಾ ಭಾರತ ತಂಡದ ಹೊರತಾಗಿ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕಿಳಿಯುತ್ತಾರೆ. 2013ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಬುಮ್ರಾ ಅವರ ಸಂಭಾವನೆಯಲ್ಲಿ ಅಲ್ಲಿಂದ ಇಲ್ಲಿಯವರೆಗೂ ಭಾರಿ ವ್ಯತ್ಯಾಸವಾಗಿದೆ.
5 / 10
2018ರಲ್ಲಿ ಒಂದು ಸೀಸನ್‌ಗೆ 7 ಕೋಟಿ ರೂಪಾಯಿ ಪಡೆಯುತ್ತಿದ್ದ ಬುಮ್ರಾ ಈಗ ಪ್ರತಿ ಸೀಸನ್‌ಗೆ 12 ಕೋಟಿ ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ. ಅವರು 2013 ಮತ್ತು 2023 ರ ನಡುವೆ ಐಪಿಎಲ್‌ನಿಂದ ಸರಿಸುಮಾರು 56 ಕೋಟಿ ರೂ. ಆದಾಯ ಗಳಿಸಿದ್ದಾರೆ.
6 / 10
ಹೀಗಾಗಿ ಬುಮ್ರಾ ಲೀಗ್ ಕ್ರಿಕೆಟ್‌ನಿಂದ ವರ್ಷಕ್ಕೆ 12 ಕೋಟಿ ರೂಪಾಯಿಗಳನ್ನು ಪಡೆದರೆ, ಬಿಸಿಸಿಐ ಜೊತೆಗಿನ ವಾರ್ಷಿಕ ಒಪ್ಪಂದದ ಅಡಿಯಲ್ಲಿ ಅವರು 7 ಕೋಟಿ ರೂಪಾಯಿಗಳನ್ನು ಸಂಭಾವನೆ ರೂಪದಲ್ಲಿ ಪಡೆಯುತ್ತಾರೆ.
7 / 10
ಹಾಗೆಯೇ ಬುಮ್ರಾ ಟೀಂ ಇಂಡಿಯಾ ಪರ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಲು ಕ್ರಮವಾಗಿ 15 ಲಕ್ಷ, 7 ಲಕ್ಷ ಮತ್ತು 3 ಲಕ್ಷ ರೂಗಳನ್ನು ಪಂದ್ಯ ಶುಲ್ಕವಾಗಿ ಪಡೆಯುತ್ತಾರೆ.
8 / 10
ವರದಿಯ ಪ್ರಕಾರ, ಬುಮ್ರಾ 14 ಕಂಪನಿಗಳ ಬ್ರಾಂಡ್ ಅಂಭಾಸಿಡರ್ ಆಗಿದ್ದು, ಒಂದು ದಿನದ ಕಾಲ್ಶೀಟ್ಗಾಗಿ ಬುಮ್ರಾ 1.5 ರಿಂದ 2 ಕೋಟಿ ರೂ. ಚಾರ್ಜ್ ಮಾಡುತ್ತಾರೆ ಎಂದು ವರದಿಯಾಗಿದೆ.
9 / 10
ಇವೆಲ್ಲವುಗಳೊಂದಿಗೆ ಜಸ್ಪ್ರೀತ್ ಬುಮ್ರಾ ಅವರು ಮುಂಬೈ ಜೊತೆಗೆ ಅಹಮದಾಬಾದ್‌ನಲ್ಲಿ ಮನೆ ಹೊಂದಿದ್ದಾರೆ. ಮುಂಬೈನಲ್ಲಿರುವ ಅವರ ಮನೆಯ ಬೆಲೆ 2 ಕೋಟಿ ಇದ್ದರೆ, ಅಹಮದಾಬಾದ್‌ನಲ್ಲಿರುವ ಅವರ ಮನೆಯ ಬೆಲೆ 3 ಕೋಟಿ ರೂ. ಆಗಿದೆ.
10 / 10
ಬುಮ್ರಾ ಹಲವು ದುಬಾರಿ ಕಾರುಗಳ ಒಡೆಯರಾಗಿದ್ದು ಅವರ ಬಳಿ Mercedes Maybach S560, Nissan GT-R, Range Rover Velar, Toyota Innova Crysta ಮತ್ತು Hyundai Verna ಕಾರುಗಳಿವೆ.