IND vs ENG: ಅತ್ಯಧಿಕ ರನ್; ಟೀಂ ಇಂಡಿಯಾ ವಿರುದ್ಧ ಇತಿಹಾಸ ಸೃಷ್ಟಿಸಿದ ಜೋ ರೂಟ್

Updated on: Jul 10, 2025 | 10:05 PM

Joe Root's 3000 Test Runs vs India: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಅವರು ಭಾರತದ ವಿರುದ್ಧ 3000 ಟೆಸ್ಟ್ ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಈ ಮೂಲಕ ಈ ಸಾಧನೆಯನ್ನು ಭಾರತದ ವಿರುದ್ಧ ಮಾಡಿದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಭಾರತದ ವಿರುದ್ಧ ರೂಟ್ ಅವರ ಟೆಸ್ಟ್ ಸರಾಸರಿ 55 ಕ್ಕಿಂತ ಹೆಚ್ಚಿದ್ದು, 10 ಶತಕಗಳನ್ನು ಬಾರಿಸಿದ್ದಾರೆ.

1 / 5
ಭಾರತ ಮತ್ತು ಇಂಗ್ಲೆಂಡ್‌ ನಡುವೆ ಲಾರ್ಡ್ಸ್‌ ಮೈದಾನದಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಇಂಗ್ಲೆಂಡ್‌ ತಂಡ ತಾಳ್ಮೆಯ ಆಟಕ್ಕೆ ಮುಂದಾಗಿದೆ. ಇತ್ತ ಟೀಂ ಇಂಡಿಯಾ ವೇಗಿಗಳು ಕೂಡ ತಮ್ಮ ನಿಖರವಾದ ದಾಳಿಯ ಮೂಲಕ ಆಂಗ್ಲ ಆಟಗಾರರನ್ನು ಮುಕ್ತವಾಗಿ ರನ್​ಗಳಿಸದಂತೆ ತಡೆದಿದ್ದಾರೆ.

2 / 5
ಆದಾಗ್ಯೂ ತಮ್ಮ ಅನುಭವವನ್ನು ಧಾರೆ ಎರೆಯುತ್ತಿರುವ ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಜೋ ರೂಟ್, ಟೀಂ ಇಂಡಿಯಾದ ದಾಳಿಯನ್ನು ಸಮರ್ಥವಾಗಿ ಎದುರಿಸಿ ಅಜೇಯ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ. ಆರಂಭದಿಂದಲೂ ತಾಳ್ಮೆ ಬ್ಯಾಟಿಂಗ್‌ ಮಾಡುತ್ತಿರುವ ರೂಟ್ ಅವರ ಟೆಸ್ಟ್ ವೃತ್ತಿಜೀವನದ 67ನೇ ಅರ್ಧಶತಕವಾಗಿದೆ.

3 / 5
ಈ ಅರ್ಧಶತಕದ ಇನ್ನಿಂಗ್ಸ್ ಮೂಲಕ ಜೋ ರೂಟ್ ಭಾರತದ ವಿರುದ್ಧ 3000 ಟೆಸ್ಟ್ ರನ್ ಗಳಿಸಿದ ಸಾಧನೆಯನ್ನು ಮಾಡಿದ್ದಾರೆ. ಅಲ್ಲದೆ ರೂಟ್ ಭಾರತದ ವಿರುದ್ಧ ಈ ಸಾಧನೆ ಮಾಡಿದ ಏಕೈಕ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ರೂಟ್‌ಗಿಂತ ಮೊದಲು, ರಿಕಿ ಪಾಂಟಿಂಗ್ ಭಾರತದ ವಿರುದ್ಧ ಅತಿ ಹೆಚ್ಚು 2555 ರನ್ ಗಳಿಸಿದ್ದರು.

4 / 5
ಭಾರತದ ವಿರುದ್ಧ ಪ್ರತಿ ಪಂದ್ಯದಲ್ಲೂ ಅಮೋಘ ಬ್ಯಾಟಿಂಗ್‌ ಮಾಡಿರುವ ಜೋ ರೂಟ್ ಅವರ ಟೆಸ್ಟ್ ಸರಾಸರಿ 55 ಕ್ಕಿಂತ ಹೆಚ್ಚಾಗಿದೆ. ಇದು ಮಾತ್ರವಲ್ಲದೆ ಟೀಮ್ ಇಂಡಿಯಾ ವಿರುದ್ಧ ರೂಟ್ 10 ಶತಕಗಳನ್ನು ಸಹ ಬಾರಿಸಿದ್ದಾರೆ.

5 / 5
ಇದರ ಜೊತೆಗೆ ಜೋ ರೂಟ್ ಲಾರ್ಡ್ಸ್‌ನಲ್ಲಿ ಭಾರತದ ವಿರುದ್ಧ 3000 ರನ್‌ಗಳನ್ನು ಪೂರ್ಣಗೊಳಿಸಿದ್ದಲ್ಲದೆ, ಸಚಿನ್ ತೆಂಡೂಲ್ಕರ್ ಅವರ ದಾಖಲೆಗೆ ಮತ್ತಷ್ಟು ಸಮೀಪಿಸಿದ್ದಾರೆ. ವಾಸ್ತವವಾಗಿ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ 67 ಅರ್ಧಶತಕಗಳನ್ನು ಬಾರಿಸಿದ್ದು, ಈಗ ಅವರು ಸಚಿನ್‌ಗಿಂತ ಕೇವಲ ಒಂದು ಅರ್ಧಶತಕ ಹಿಂದಿದ್ದಾರೆ. ಸಚಿನ್ ಟೆಸ್ಟ್‌ನಲ್ಲಿ ಒಟ್ಟು 68 ಅರ್ಧಶತಕಗಳನ್ನು ಬಾರಿಸಿದ್ದಾರೆ.