
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿನಲ್ಲಿ ಕಾಣಿಸಿಕೊಂಡ ಕರ್ನಾಟಕದ ಆಟಗಾರರಲ್ಲಿ ಏಕೈಕ ಪ್ಲೇಯರ್ ಮಾತ್ರ ಬಿಕರಿಯಾಗಿದ್ದಾರೆ. ಇನ್ನುಳಿದ ಹನ್ನೊಂದು ಆಟಗಾರರ ಖರೀದಿಗೆ ಯಾವುದೇ ಫ್ರಾಂಚೈಸಿ ಆಸಕ್ತಿ ತೋರಿಲ್ಲ ಎಂಬುದೇ ಅಚ್ಚರಿ. ಅದರಂತೆ ಈ ಬಾರಿ ಸೋಲ್ಡ್-ಅನ್ಸೋಲ್ಡ್ ಆದ ಕರ್ನಾಟಕದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

ಪ್ರವೀಣ್ ದುಬೆ: ಕರ್ನಾಟಕದ ಅನುಭವಿ ಸ್ಪಿನ್ನರ್ ಪ್ರವೀಣ್ ದುಬೆ ಈ ಬಾರಿಯ ಹರಾಜಿನಲ್ಲಿ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಮೊದಲ ಸುತ್ತಿನಲ್ಲಿ ಪ್ರವೀಣ್ ಅವರ ಖರೀದಿಗೆ ಯಾವುದೇ ಫ್ರಾಂಚೈಸಿ ಮುಂದೆ ಬಂದಿರಲಿಲ್ಲ. ಇದಾಗ್ಯೂ ಅಂತಿಮ ಸುತ್ತಿನಲ್ಲಿ ಪಂಜಾಬ್ ಕಿಂಗ್ಸ್ ಪ್ರವೀಣ್ ದುಬೆಯನ್ನು 30 ಲಕ್ಷ ರೂ.ಗೆ ಖರೀದಿಸಿದೆ.

ಮಯಾಂಕ್ ಅಗರ್ವಾಲ್: ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಈ ಬಾರಿ ಅನ್ಸೋಲ್ಡ್ ಆಗಿ ಉಳಿದಿದ್ದಾರೆ. ಕಳೆದ ಸೀಸನ್ನಲ್ಲಿ ಆರ್ಸಿಬಿ ಪರ ಕಣಕ್ಕಿಳಿದಿದ್ದ ಮಯಾಂಕ್ ಈ ಬಾರಿ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರ ಖರೀದಿಗೆ ಯಾವುದೇ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ.

ಅಭಿನವ್ ಮನೋಹರ್: ಕರ್ನಾಟಕ ಟಿ20 ತಂಡದ ಸ್ಫೋಟಕ ದಾಂಡಿಗ ಅಭಿನವ್ ಮನೋಹರ್ ಅವರ ಖರೀದಿಗೂ ಯಾವುದೇ ಫ್ರಾಂಚೈಸಿ ಮುಮದಾಗಿಲ್ಲ. ಕಳೆದ ಸೀಸನ್ನಲ್ಲಿ ಎಸ್ಆರ್ಹೆಚ್ ಪರ ಬ್ಯಾಟ್ ಬೀಸಿದ್ದ ಅಭಿನವ್ ಅವರು ಈ ಬಾರಿ 30 ಲಕ್ಷ ರೂ. ಮೂಲ ಬೆಲೆ ಘೋಷಿಸಿದರೂ ಬಿಕರಿಯಾಗದೇ ಉಳಿದರು.

ವಿದ್ವತ್ ಕಾವೇರಪ್ಪ: ಕರ್ನಾಟಕದ ವೇಗಿ ವಿದ್ವತ್ ಕಾವೇರಪ್ಪ ಈ ಹಿಂದೆ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರು. ಈ ಬಾರಿ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡರೂ ಕಾವೇರಪ್ಪನ ಖರೀದಿಗೆ ಯಾವುದೇ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ.

ಕೆ.ಸಿ ಕಾರ್ಯಪ್ಪ: ಕೆಕೆಆರ್, ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ಕರ್ನಾಟಕದ ಸ್ಪಿನ್ನರ್ ಕೆ.ಸಿ ಕಾರ್ಯಪ್ಪ ಈ ಬಾರಿ ಕೇವಲ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಮಾತ್ರ ಕಾಣಿಸಿಕೊಂಡಿದ್ದರು. ಇದಾಗ್ಯೂ ಅನುಭವಿ ಸ್ಪಿನ್ನರ್ಗೆ ಖರೀದಿಗೆ 10 ಫ್ರಾಂಚೈಸಿಗಳು ಆಸಕ್ತಿ ತೋರಲಿಲ್ಲ.

ಮನೋಜ್ ಭಾಂಡಗೆ: ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಣಿಸಿಕೊಂಡಿದ್ದ ಯುವ ಆಲ್ರೌಂಡರ್ ಮನೋಜ್ ಭಾಂಡಗೆ ಅವರು ಈ ಬಾರಿ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರ ಖರೀದಿಗೆ ಯಾವುದೇ ಫ್ರಾಂಚೈಸಿ ಮುಂದೆ ಬರಲಿಲ್ಲ.

ಜಗದೀಶ್ ಸುಚಿತ್: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್, ಸನ್ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳದಿದ್ದ ಅನುಭವಿ ಆಲ್ರೌಂಡರ್ ಜಗದೀಶ್ ಸುಚಿತ್ ಅವರು ಸಹ ಈ ಬಾರಿ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರು ಅನ್ಸೋಲ್ಡ್ ಆಗಿ ಉಳಿದಿದ್ದಾರೆ.

ಕೆಎಲ್ ಶ್ರೀಜಿತ್: ಐಪಿಎಲ್ 2025 ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾಗಿದ್ದ ಕರ್ನಾಟಕದ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ಶ್ರೀಜಿತ್ 30 ಲಕ್ಷ ರೂ. ಮೂಲ ಬೆಲೆಯ ಪಟ್ಟಿಯಲ್ಲಿ ಕಾಣಿಸಿಕೊಂಡರೂ, ಅವರ ಖರೀದಿಗೆ ಯಾವುದೇ ಫ್ರಾಂಚೈಸಿ ಮುಂದೆ ಬಂದಿರಲಿಲ್ಲ.

ವಿದ್ಯಾಧರ ಪಾಟೀಲ್: ಕರ್ನಾಟಕದ ವೇಗಿ ವಿದ್ಯಾಧರ ಪಾಟೀಲ್ ಕೂಡ ಈ ಬಾರಿ ಅನ್ಸೋಲ್ಡ್ ಆಗಿದ್ದಾರೆ. 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಆಕ್ಷನ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ವಿದ್ಯಾಧರ್ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಮುಂದೆ ಬರಲಿಲ್ಲ.

ಅಭಿಲಾಷ್ ಶೆಟ್ಟಿ: ಕರ್ನಾಟಕದ ಯುವ ವೇಗಿ ಅಭಿಲಾಷ್ ಶೆಟ್ಟಿ ಕೂಡ ಬಿಕರಿಯಾಗದೇ ಉಳಿದಿದ್ದಾರೆ. ಕೇವಲ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಅಭಿಲಾಷ್ ಅವರ ಖರೀದಿಗಾಗಿ ಯಾವುದೇ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ.

ಶ್ರೀವತ್ಸ ಆಚಾರ್ಯ: ಕರ್ನಾಟಕದ ಯುವ ಆಲ್ರೌಂಡರ್ ಶ್ರೀವತ್ಸ ಆಚಾರ್ಯ ಕೂಡ ಈ ಬಾರಿಯ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಶ್ರೀವತ್ಸ ಅವರ ಖರೀದಿಗೆ ಯಾವುದೇ ಫ್ರಾಂಚೈಸಿ ಮುಂದಾಗಲಿಲ್ಲ.

ಮ್ಯಾಕ್ನಿಲ್ ನೊರೊನ್ಹಾ: ಕರ್ನಾಟಕದ ಸ್ಫೋಟಕ ದಾಂಡಿಗ ಮ್ಯಾಕ್ನಿಲ್ ನೊರೊನ್ಹಾ ಅವರು ಸಹ ಅನ್ಸೋಲ್ಡ್ ಆಗಿ ಉಳಿದಿದ್ದಾರೆ. 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ನೊರೊನ್ಹಾ ಅವರ ಖರೀದಿಗೆ 10 ಫ್ರಾಂಚೈಸಿಗಳು ನಿರಾಸಕ್ತಿ ತೋರಿದ್ದಾರೆ.