T20 World Cup 2022: 4 ಪಂದ್ಯಗಳಲ್ಲಿ ಕೇವಲ 52 ರನ್; ತಂಡದ ನಾಯಕ- ಉಪನಾಯಕನೇ ಪದೇಪದೇ ವಿಫಲ!
TV9 Web | Updated By: ಪೃಥ್ವಿಶಂಕರ
Updated on:
Nov 06, 2022 | 12:03 PM
T20 World Cup 2022: ಸೂಪರ್ 12 ಸುತ್ತಿನಲ್ಲಿ 4 ದೇಶಗಳ ವಿರುದ್ಧ ಆಡಿದ 4 ಪಂದ್ಯಗಳಲ್ಲಿ, ಭಾರತದ ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಸ್ಕೋರ್ ಬೋರ್ಡ್‌ನಲ್ಲಿ ಕೇವಲ 52 ರನ್ ಮಾತ್ರ ಸೇರಿಸಿದ್ದಾರೆ.
1 / 6
2022 ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್‌ಗೆ ಹೋಗುವುದು ಖಚಿತವಾಗಿದೆ. ಆದರೆ, ದೌರ್ಬಲ್ಯವನ್ನು ಎಷ್ಟೇ ಮರೆಮಾಚಿದರೂ ಅದು ಮುನ್ನೆಲೆಗೆ ಬರುತ್ತಲೇ ಇದೆ. ಸೆಮಿಫೈನಲ್‌ಗೂ ಮುನ್ನವೇ ಭಾರತ ತಂಡದ ಪ್ರಮುಖ ದೌರ್ಬಲ್ಯದ ಬಗ್ಗೆ ಸಾಕಷ್ಟು ಚರ್ಚೆ ಆರಂಭವಾಗಿದ್ದು, ಇದರ ಬೆನ್ನಲ್ಲೇ ಸ್ಟಾರ್ ಓಪನಿಂಗ್ ಜೋಡಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ.
2 / 6
ಟಿ20 ವಿಶ್ವಕಪ್ 2022 ರಲ್ಲಿ ಭಾರತದ ಆರಂಭಿಕ ಜೋಡಿ ದೊಡ್ಡ ಸಂದಿಗ್ಧತೆಯಾಗಿ ಹೊರಹೊಮ್ಮಿದೆ. ಇತ್ತೀಚಿನ ವಿಷಯವೆಂದರೆ ಸೂಪರ್ 12 ಸುತ್ತಿನಲ್ಲಿ 4 ದೇಶಗಳ ವಿರುದ್ಧ ಆಡಿದ 4 ಪಂದ್ಯಗಳಲ್ಲಿ, ಭಾರತದ ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಸ್ಕೋರ್ ಬೋರ್ಡ್‌ನಲ್ಲಿ ಕೇವಲ 52 ರನ್ ಮಾತ್ರ ಸೇರಿಸಿದ್ದಾರೆ.
3 / 6
ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಆರಂಭಿಕ ಜೋಡಿ ರೋಹಿತ್-ರಾಹುಲ್ ಕೇವಲ 1.5 ಓವರ್‌ಗಳಲ್ಲೆ ಮುರಿದುಬಿದ್ದಿತ್ತು. ಇಲ್ಲಿ ಕೆಎಲ್ ರಾಹುಲ್ ಔಟಾಗುವ ಮೂಲಕ 7 ರನ್ ಸೇರಿಸುವಷ್ಟರಲ್ಲೇ ಆರಂಭಿಕರು ಬೇರೆ ಬೇರೆಯಾಗಿದ್ದರು.
4 / 6
ಅದೇ ರೀತಿ ನೆದರ್ಲೆಂಡ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಕೆಎಲ್ ರಾಹುಲ್ ಮೊದಲು ಔಟಾದರು. ಇಲ್ಲಿ ಭಾರತದ ಆರಂಭಿಕ ಜೋಡಿ 2.4 ಓವರ್‌ಗಳಲ್ಲಿ ಕೇವಲ 11 ರನ್ ಸೇರಿಸಿತ್ತು.
5 / 6
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಮೊದಲು ಔಟಾಗುವ ಮೂಲಕ ಆರಂಭಿಕ ಜೋಡಿ ಛಿದ್ರವಾಯಿತು. ಇಲ್ಲಿ ಈ ಜೋಡಿ 4.2 ಓವರ್‌ಗಳಲ್ಲಿ 23 ರನ್ ಸೇರಿಸಲಷ್ಟೇ ಶಕ್ತವಾಯಿತು. ಆ ಬಳಿಕ ನಾಲ್ಕನೇ ಪಂದ್ಯದಲ್ಲೂ ಭಾರತದ ಆರಂಭಿಕ ಜೋಡಿ 11 ರನ್‌ಗಳಿಗೆ ಮತ್ತೊಮ್ಮೆ ಮುರಿದುಬಿತ್ತು. ಬಾಂಗ್ಲಾದೇಶದ ವಿರುದ್ಧ, ರೋಹಿತ್ ಮತ್ತು ರಾಹುಲ್ ಕೇವಲ 3.2 ಓವರ್‌ಗಳಷ್ಟೇ ಒಟ್ಟಾಗಿ ಬ್ಯಾಟಿಂಗ್ ಮಾಡಿದ್ದರು.
6 / 6
ಇದೀಗ ಸೂಪರ್ 12ರಲ್ಲಿ ಇಂದು 5ನೇ ಹಾಗೂ ಕೊನೆಯ ಪಂದ್ಯವಾಗಿದ್ದು, ಜಿಂಬಾಬ್ವೆ ವಿರುದ್ಧದ ಈ ಪಂದ್ಯವನ್ನು ಭಾರತ ಗೆಲ್ಲಲೇಬೇಕಿದೆ. ಆದರೆ ಸೆಮಿಫೈನಲ್ ತಲುಪುವ ಮೊದಲು ಆರಂಭಿಕ ಜೋಡಿಯ ಲೂಪ್-ಹೋಲ್‌ಗಳನ್ನು ಸರಿಪಡಿಸಲು ತಂಡ ತಂತ್ರ ರೂಪಿಸಬೇಕಿದೆ.