ಟಿ20 ವಿಶ್ವಕಪ್ ಸೆಮಿಫೈನಲ್ಗೂ ಮುನ್ನ ಟೀಮ್ ಇಂಡಿಯಾದ ಬ್ಯಾಟ್ಸ್ಮನ್ಗಳು ತಮ್ಮ ಅಬ್ಬರವನ್ನು ತೋರಿಸಿದ್ದಾರೆ. ಅದರಲ್ಲೂ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ನೆಲದಲ್ಲಿ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಕಠಿಣ ಪರಿಸ್ಥಿತಿಯಲ್ಲಿ ಅರ್ಧಶತಕ ಬಾರಿಸಿದ ಸೂರ್ಯ, ಮತ್ತೊಮ್ಮೆ ಟೀಂ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡಿ ಜಿಂಬಾಬ್ವೆ ವಿರುದ್ಧ ಅಚ್ಚರಿಯ ಇನ್ನಿಂಗ್ಸ್ ಆಡಿದರು ಮತ್ತು ಪಂದ್ಯಾವಳಿಯಲ್ಲಿ ತಮ್ಮ ಮೂರನೇ ಅರ್ಧಶತಕವನ್ನು ಗಳಿಸಿದರು.
ಸೂರ್ಯ ಕೇವಲ 23 ಎಸೆತಗಳಲ್ಲಿ ಬಿರುಸಿನ ಅರ್ಧಶತಕ ಗಳಿಸುವ ಮೂಲಕ ಭಾರತವನ್ನು 186 ರನ್‌ಗಳಿಗೆ ಕೊಂಡೊಯ್ದರು. ಸೂರ್ಯ ಕೇವಲ 25 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಒಳಗೊಂಡಂತೆ ಅಜೇಯ 61 ರನ್ ಗಳಿಸಿದರು. ಭಾರತ 14ನೇ ಓವರ್‌ವರೆಗೆ ಕೇವಲ 101 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿತ್ತು, ಆದರೆ ಸೂರ್ಯ ಏಕಾಂಗಿಯಾಗಿ ಭಾರತವನ್ನು ಸ್ಪರ್ಧಾತ್ಮಕ ಮತ್ತೊಕ್ಕೆ ಕೊಂಡೊಯ್ದರು.
ಇಷ್ಟೇ ಅಲ್ಲ, ಈ ಇನ್ನಿಂಗ್ಸ್‌ನೊಂದಿಗೆ, ಸೂರ್ಯ ಈ ವರ್ಷ ಟಿ20 ಇಂಟರ್ನ್ಯಾಷನಲ್ನಲ್ಲಿ ತಮ್ಮ 1000 ರನ್ಗಳನ್ನು ಪೂರೈಸಿದ್ದಾರೆ. ಸೂರ್ಯ ಕೇವಲ 28 ಇನ್ನಿಂಗ್ಸ್‌ಗಳಲ್ಲಿ 186 ಸ್ಟ್ರೈಕ್ ರೇಟ್ ಹಾಗೂ 44.60 ಸರಾಸರಿಯಲ್ಲಿ 1026 ರನ್ ಗಳಿಸಿದ್ದಾರೆ. ಅವರಿಗಿಂತ ಮೊದಲು, ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಮಾತ್ರ ವರ್ಷದಲ್ಲಿ ಒಂದು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ಬರೆದಿದ್ದರು.
ಈ ವಿಶ್ವಕಪ್‌ನಲ್ಲಿ, ಸೂರ್ಯಕುಮಾರ್ ಭಾರತದ ಪರ ಸತತವಾಗಿ ರನ್ ಗಳಿಸುತ್ತಿದ್ದು, ವಿರಾಟ್ ಕೊಹ್ಲಿ ನಂತರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಸೂರ್ಯ 5 ಇನ್ನಿಂಗ್ಸ್‌ಗಳಲ್ಲಿ 3 ಅರ್ಧ ಶತಕ ಸೇರಿದಂತೆ 225 ರನ್ ಗಳಿಸಿದ್ದಾರೆ.
Published On - 4:38 pm, Sun, 6 November 22